POLICE BHAVAN KALABURAGI

POLICE BHAVAN KALABURAGI

01 June 2013

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಗುಲಬರ್ಗಾ ನಗರದ ಶಾಂತಿನಗರದಲ್ಲಿರುವ ನನ್ನ ಅಳಿಯ ಲಕ್ಷ್ಮಿನಾರಾಯಣ ಹಾಗು ಮಗಳು ಪದ್ಮಾ ಮಕ್ಕಳೊಂದಿಗೆ ವಾಸವಾಗಿದ್ದು ಬೇಸಿಗೆ ರಜೆ ನಿಮಿತ್ಯ ನನ್ನ ಮಗಳು ಅಳಿಯ ಶಾಂತಿನಗರ ಮನೆಗೆ ಕೀಲಿ ಹಾಕಿಕೊಂಡ ಶಾಹಾಪುರಕ್ಕೆ ಹೋಗಿದ್ದರು ಆಗಾಗ್ಗೆ ಬಂದು ಹೋಗುವುದು ಮಾಡುತ್ತಿದ್ದರು. ದಿನಾಂಕ:31/05/2013 ರಂದು ಮುಂಜಾನೆ ನಾನು ನನ್ನ ಮಗಳು ನನ್ನ ಹೆಂಡತಿ ಮೋಮ್ಮಕಳೊಂದಿಗೆ ಶಾಂತಿನಗರ ಮನೆಗೆ ಬಂದು ನೋಡಲು ಕೊಣೆಯ ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ್ದ ಬೆಳ್ಳಿಯ ಸಾಮಾನುಗಳು ಒಟ್ಟು 1,62,000/- ರೂಪಾಯಿಗಳ ಕಿಮ್ಮತ್ತಿವುಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಕಿಶನರಾವ ತಂದೆ ಜೈರಾಮ ಕುಲಕರ್ಣಿ ಸಾ:ಸೇಡಂ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ. 88/2013 ಕಲಂ. 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ ಮನ್ನು ತಂದೆ ಭಿಮು ಚವ್ಹಾಣ ಸಾ:ಪಾಣೆಗಾಂವ ತಾಂಡಾ ತಾ:ಜಿ:ಗುಲಬರ್ಗಾ ರವರು  ನಮ್ಮ ತಾಂಡಾದ ಬಿಲ್ಲು ನಾಯಕ ಇವರ ಮಗನ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ರಾತ್ರಿ 10-00 ಗಂಟೆ ಸುಮಾರಿಗೆ ನಮ್ಮ ಸಂಬಂಧಿಕರಾದ ರಾಮು ರಾಠೋಡ ಇವರ ಮನೆಯ ಮುಂದುಗಡೆಯಿಂದ ಹೋಗುತ್ತಿದ್ದಾಗ ರಾಮು ರಾಠೋಡ ಇತನು ನಮ್ಮ ಮಗಳ ಜೋತೆಗೆ ಸುಮ್ಮನೆ ಕಿರಿಕಿರಿ ಮಾಡುತ್ತಾನೆ ಅಂತಾ ಅವಾಚ್ಯವಾಗಿ ಬೈದು ತನ್ನ ಮಕ್ಕಳಿಗೆ ಕರೆಯುತ್ತಿದ್ದಾಗ ನಾನು ಗಾಬರಿಯಿಂದ ನಮ್ಮ ಮನೆಯ ಕಡೆಗೆ ಓಡಿ ಹೋಗುತ್ತಿದ್ದಾಗ ರಾಜು ಇತನು ತನ್ನ ಕೈಯಲ್ಲಿ ಕಟ್ಟಿಗೆ, ಅನಿಲ್‌ ಇತನು ತನ್ನ ಕೈಯಲ್ಲಿ ಕ್ರೀಕೆಟ್‌ ಆಡುವ ಬ್ಯಾಟನ್ನು  ಹಿಡಿದುಕೊಂಡು ಮೂರೂ ಜನರು ನನ್ನ ಬೆನ್ನ ಹಿಂದೆ ಓಡಿಸಿಕೊಂಡು ಬಂದು ನಮ್ಮ ಮನೆಯ ಮುಂದೆ ಕೈಯಲ್ಲಿದ್ದ ಕಟ್ಟಿಗೆಯಿಂದ ಬ್ಯಾಟನಿಂದ ಹೋಡೆದು ರಕ್ತಗಾಯ ಮಾಡಿರುತ್ತಾರೆ.ನನ್ನ ಹೆಂಡತಿ ಫಾತಿಬಾಯಿ ಇವಳು ಬಿಡಿಸಲು ಬಂದರೆ ಅವಳಿಗೂ ಕೂಡಾ ರಾಜು ಇತನು ಕಟ್ಟಿಗೆಯಿಂದ ಎಡಗೈ ರಟ್ಟಿಯ ಮೇಲೆ, ಮುಂಗೈ ಕೆಳಗೆ ಮತ್ತು ಎಡ ಚಪ್ಪಿಗೆ ಹೊಡೆದು ಒಳಪೆಟ್ಟು ಮಾಡಿ ನೂಕಿ ಕೋಟ್ಟಿರುತ್ತಾರೆ. ಉಪಚಾರ ಕುರಿತು 108 ಅಂಬುಲೇನ್ಸ್ ವಾಹನದಲ್ಲಿ ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 76/2013 ಕಲಂ:  341, 323, 324, 504, 506 ಸಂ: 34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
ಹಲ್ಲೆ ಪ್ರಕರಣ:

ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಶರಣಬಸ್ಸಪ್ಪಾ ತಂದೆ ಮಲ್ಲಿಕಾರ್ಜುನ ಹೀರೆಗೌಡರ ಸಾ:ಯಳವಂತಗಿ (ಕೆ) ತಾ||ಜಿ||ಗುಲಬರ್ಗಾರವರು  ದಿನಾಂಕ:29-05-2013 ರಂದು ನನ್ನ ದೊಡ್ಡಪನ ಮಗನಾದ ಲಕ್ಷ್ಮೀಕಾಂತ ಹಿರೇಗೌಡರ ಇತನ ಮದುವೆ ಕಾರ್ಯಾಕ್ರಮದ ಮೆರವಣಿಗೆ ನಮ್ಮ ಗ್ರಾಮದ ಲಕ್ಷ್ಮೀ ಗುಡಿಯ ಹತ್ತಿರ ಹೋಗುತ್ತಿರುವಾಗ ನಮ್ಮ ಗ್ರಾಮದ ನಮ್ಮ ಅಣ್ಣತಮ್ಮಂದಿರಾದ ಶಿವಾನಂದ ತಂದೆ ಶಿವಶರಣಪ್ಪ ಹೀರೆಗೌಡ ಇತನು ಕೂಡಾ ಮೆರವಣೆಗೆಯಲ್ಲಿ ಬರವಾಗ ನನಗೆ ಮುಂಡಿ ಹೊಡೆದು ಮುಂದಕ್ಕೆ ಹೋದನು ಆಗ ನಾನು ಮನುಷ್ಯರಿಗೆ ನೋಡಿ ನಡೆಯಿರಿ ಅಂತಾ ಅಂದ್ದಿದಕ್ಕೆ ಶಿವಾನಂದ ಇತನು ಅವಾಚ್ಯ ಶಬ್ದಗಳಿಂದ ಬೈಯ್ದು ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ಕಪಾಳಕ್ಕೆ ಹೋಡದು ತನ್ನ ಕೈಯಲ್ಲಿರುವ ರಾಡ ನಮೂನೆಯ ವಸ್ತುವಿನಂದ  ನನಗೆ ಹೋಡೆಯಲು ಬಂದಾಗ ತಪ್ಪಿಸಿಕೊಂಡಿದ್ದರಿಂದ ನನ್ನ  ಎಡಗೈ ಮುಂಗೈ, ಮತ್ತು ಎಡಗೈ ರಟ್ಟೆಗೆ ತರಚಿದ ನಮೂನೆಯ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 276/2013 ಕಲಂ. 341, 323, 324, 504, 506 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: