POLICE BHAVAN KALABURAGI

POLICE BHAVAN KALABURAGI

15 June 2013

GULBARGA DISTRICT REPORTED CRIME

ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ: ಶಿವಕುಮಾರ ತಂದೆ ಶಂಕರರಾವ್ ಕೋರಿ ಸಾ|| ಹಸರಗುಂಡಗಿ ತಾ|| ಚಿಂಚೋಳಿ ರವರು ನಾನು ದಿನಾಂಕ;14-06-2013 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯನಾದ ವೀರಶೆಟ್ಟಿ ತಂದೆ ಬಸವರಾಜ ಇಬ್ಬರೂ ನನ್ನ ಹಿರೋಹೊಂಡಾ ಫ್ಯಾಶನ್ ಮೋಟಾರ ಸೈಕಲ್ ನಂ ಕೆಎ-32 ವಿ-3283 ನೇದ್ದರ ಮೇಲೆ ಕುಳಿತು ಹೊರಟಿದ್ದು ನನ್ನ ಮೋಟರ ಸೈಕಲ್ ನ್ನು ವೀರಶೆಟ್ಟಿ ಚಲಾಯಿಸುತ್ತಿದ್ದನು, ನಾನು ಹಿಂದು ಗಡೆ ಕುಳಿತಿದ್ದೇ, ಚಿಮ್ಮಾಯಿದಲಾಯಿ ಕ್ರಾಸಕ್ಕಿಂತಲೂ ಮುಂಚೆ ರಸ್ತೆಯ ಎಡಬದಿಯಲ್ಲಿ ಅಗಿದು ಕಂಕರ್ ಹಾಕಿದ್ದು  ಒಂದೂವರೆ ಅಡಿ ತಗ್ಗಿರುತ್ತದೆ, ಇನ್ನೊಂದು ಬದಿಗೆ ಡಾಂಬರೀಕರಣ ಮಾಡಲಾಗಿದೆ ಡಾಂಬರೀಕರಣ ವಾದ ರಸ್ತೆಯ ಎಡಬದಿಯಲ್ಲಿಯೇ ನಾವು ಮೋಟಾರ ಸೈಕಲ್ ಮೇಲೆ ನಿಧಾನವಾಗಿ ಹೋಗುತ್ತಿರುವಾಗ ಎದುರುಗಡೆಯಿಂದ ಒಂದು ಕೆ.ಎಸ.ಆರ.ಟಿ.ಸಿ ಬಸ ನಂ ಕೆಎ-32 ಎಫ946 ನೇದ್ದರ ಬಸ್ ಚಾಲಕನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಡಿಕ್ಕಿಪಡಿಸಿರುತ್ತಾನೆ.ವೀರಶೆಟ್ಟಿ ಇತನ ಹಣೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ನನಗೆ ಬಲಗೈ ರಿಸ್ಟನ ಮೇಲೆ ಎಡಗಾಲಿನ ಪಾದದ ಹತ್ತಿರ ಭಾರಿಗಾಯ ಹಾಗೂ ಗುಪ್ತಗಾಯಗಳಾಗಿರುತ್ತವೆ. ಕಾರಣ ಬಸ್ಸ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:148/2013 ಕಲಂ, 279, 337, 338 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: