POLICE BHAVAN KALABURAGI

POLICE BHAVAN KALABURAGI

18 April 2013

GULBARGA DISTRICT REPORTED CRIMES


ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ, ಮಹೆಬೂಬಪಾಶಾ ತಂದೆ ಮೌಲಾಸಾಬ ಎಮ್.ಸಿ.ಸಿ. ಪ್ಲಾಯಿಂಗ್ ಸ್ಕ್ವಾಡ್ ಮತ್ತು ಎಮ್.ಸಿ.ಸಿ. ನೋಡಲ್ ಅಧಿಕಾರಿ 41-ಸೇಡಂ ವಿಧಾಸಭಾ ಕ್ಷೇತ್ರದ ಆಧಿಕಾರಿಯವರು,  ನಾನು ನಮ್ಮ  ತಂಡದವರೊಂದಿಗೆ  ದಿನಾಂಕ:17-4-13 ರಂದು ಮದ್ಯಾಹ್ನ 3-30 ಗಂಟೆಗೆ ಸೇಡಂ ಪಟ್ಟಣದಲ್ಲಿ ಕರ್ತವ್ಯದಲ್ಲಿದ್ದಾಗ ಸೇಡಂ ಜಿ.ಕೆ ಕ್ರಾಸ್ ಹತ್ತಿರ ಇರುವ ಜೆ.ಡಿ.ಎಸ್. ಕಛೇರಿ ಹತ್ತಿರ ವಾಹನಗಳು ತಿರುಗಾಡುತ್ತಿದ್ದು ಸದರಿ ವಾಹನಗಳು ಸೇಡಂ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಯಾದ ಶ್ರೀ. ಮುಕ್ರಂ ಖಾನ  ಇವರು ಜೆ.ಡಿಎಸ್. ಪಕ್ಷದ ಅಭ್ಯರ್ಥಿಯ ಪರವಾಗಿ ಈ ಕೆಳಕಂಡ  ವಾಹನಗಳನ್ನು ಚುನಾವಣಾ ಅಧಿಕಾರಿಗಳಿಂದ ಯಾವುದೇ ಪರವಾನಿಗೆ ಪಡೆಯಲಾರದೆ ಜೆ.ಡಿ.ಎಸ್. ಪಕ್ಷದ  ಸ್ಟಿಕರ್  ಹಾಗು ಬಾವುಟಗಳೊಂದಿಗೆ ಓಡಾಡುವುದನ್ನು ಗಮನಿಸಿರುತ್ತೇವೆ. ವಾಹನಗಳ ಚಾಲಕರಿಗೆ  ನಾವು  ಸ್ಟಿಕರ್ ಮತ್ತು ಬಾವುಟಗಳ ಪರವಾನಿಗೆಯ ಬಗ್ಗೆ ವಿಚಾರಿಸಿದಾಗ ಸದರಿಯವರು ಚುನಾವಣಾ ಅಧಿಕಾರಿಗಳಿಂದ ಯಾವುದೇ ಪರವಾನಿಗೆ ಪಡೆಯದೆ ಇರುವುದು ಕಂಡು ಬಂದಿದ್ದು, ಚುನಾವಣೆ ನೀತಿ ಸಂಹಿತೆಯ  ಉಲ್ಲಂಘನೆಯಾಗಿರುತ್ತದೆ. ಜೀಪ್ ನಂ ಕೆ--33- ಎಮ್-247, ಟಂಟಂ ನಂ ಕೆ--32- ಬಿ- 7815,ಮೋಟಾರು ಸೈಕಲ್ ನಂ ಕೆಎ-34- ಬಿ-6901, ಟಂಟಂ ನಂ ಕೆ--32-ಬಿ-4472, ಮೇಲ್ಕಂಡ 4 ವಾಹನಗಳಲ್ಲಿ  ಕ್ರಮ ಸಂ 1 ಮತ್ತು 2 ರ ವಾಹನಗಳನ್ನು ಸೇಡಂ ಪೊಲೀಸ್ ಠಾಣೆಗೆ ತಂದು ಒಪ್ಪಿಸಲಾಗಿದೆ  ಬಾಕಿ ಇರುವ 2 ವಾಹನಗಳ  ಚಾಲಕರು  ತಮ್ಮ ವಾಹನಗಳೊಂದಿಗೆ  ತಪ್ಪಿಸಿಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:95/2013 ಕಲಂ-188 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಗಣೇಶ ತಂದೆ ಅಯ್ಯಾಪ್ಪ ಶಿರವಾಳ ಸಾ: ಎಲ್.ಐ.ಜಿ ಶಾಂತಿ ನಗರ ಗುಲಬರ್ಗಾ ರವರು ದಿನಾಂಕ:18-04-2013 ರಂದು ಮುಂಜಾನೆ 7-30 ಗಂಟೆ ಸುಮಾರಿಗೆ ನನ್ನ ಮಾವನವರಾದ ಮಲ್ಲಿಕಾರ್ಜುನ ಪಾಟೀಲ ರವರು ನನಗೆ ಪೋನ ಮಾಡಿ  ಕೊತಂಬರಿ ಲೇ ಔಟದಲ್ಲಿರುವ ನಮ್ಮ ಬಾಡಿಗೆ ಮನೆ ಬೀಗ ಮುರಿದು ಕಳ್ಳತನವಾಗಿರುತ್ತದೆ ಅಂತಾ ಮನೆಯ ಮಾಲೀಕರು ಪೋನ ಮಾಡಿ ಹೇಳಿರುತ್ತಾರೆ. ನೀವು ಹೋಗಿ ನೋಡುವಂತೆ ಹೇಳಿದ ಮೇರೆಗೆ ನಾನು ಹೋಗಿ ನೋಡಲು ನಮ್ಮ ಮಾವನವರು ಬಾಡಿಗೆಯಿಂದ ಇರುವ ಮನೆಗೆ ಹೋಗಿ ನೋಡಲು ಅಲಮಾರಿಯ ಲಾಕರ ಮತ್ತು ಪೆಟ್ಟಿಗೆ ಮುರಿದು, ಲಾಕರ ದಲ್ಲಿಟ್ಟಿದ್ದ., ಒಂದು ಜೊತೆ ಬಂಗಾರದ ಬೆಂಡೋಲಿ 10ಗ್ರಾಂ ಅ.ಕಿ 25,000/- 2) 20 ತೊಲೆ ಬೆಳಿಯ ಸಾಮಾನುಗಳು ಅ.ಕಿ 10,000/- ರೂ ಹಾಗೂ ಪೆಟ್ಟಿಗೆಯಲ್ಲಿಟ್ಟಿದ್ದ 32,000/- ನಗದು ಹಣ ಇರಲಿಲ್ಲಾ. ಯಾರೋ ಕಳ್ಳರು ದಿನಾಂಕ 17/18-04-2013 ರಂದು  ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆ ಬಾಗಿಲ ಬೀಗ ಮುರಿದು ಒಟ್ಟು 67,000/- ರೂ ಕಿಮ್ಮತ್ತಿನ ಬಂಗಾರ ಬೆಳ್ಳಿಯ ಸಾಮಾನುಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಲ್ಲದೇ ನಮ್ಮ ಮಾವನ ಮನೆಯ ಹಿಂದೆ ಇರುವ ಶ್ರೀ ಚನ್ನಪ್ಪ ಗೌಡ ತಂದೆ ಬಸಣ್ಣ ಗೌಡ ಪಾಟೀಲ ರವರ ಮನೆಯಲ್ಲಿಯೂ ಸಹ ಕಳ್ಳತನವಾಗಿದ್ದು, ಅವರದು ಒಂದು ಬ್ಯಾಗ ಮತ್ತು ಶರ್ಟ ಜೇಬಿನಲ್ಲಿಟ್ಟಿದ್ದ 10,000/- ರೂ ಮತ್ತು ಒಂದು ನೋಕಿಯಾ ಮೊಬಾಯಿಲ್ ಕಳ್ಳತನವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:65/2013 ಕಲಂ.457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕೊಲೆ ಪ್ರಕರಣ:
ಯಡ್ರಾಮಿ  ಪೊಲೀಸ್ ಠಾಣೆ:ನನ್ನ ಗಂಡನಾದ ಮಡಿವಾಳಪ್ಪ ಇವರು ಸಮಾಜ ಸೇವೆ ಕೆಲಸ ಮಾಡಿಕೊಂಡಿದ್ದರು, ಕೇಲವು ವರ್ಷಗಳಿಂದ ನನ್ನ ಗಂಡ ಮಡಿವಾಳಪ್ಪ ಮತ್ತು ಮಲ್ಲಣ್ಣಗೌಡ ಇಬ್ಬರು ಕೂಡಿ ತಿರುಗಾಡುತ್ತಿದ್ದರು ದಿನಾಂಕ:17-04-2013 ರಂದು ರಾತ್ರಿ ನನ್ನ ಗಂಡ ಮಡಿವಾಳಪ್ಪ, ಮನೆಯಲ್ಲಿದ್ದಾಗ ರಾತ್ರಿ 8-30 ಗಂಟೆ ಸುಮಾರಿಗೆ ನನ್ನ ಗಂಡನು ಊಟ ಮಾಡುತ್ತಿದ್ದಾಗ ನನ್ನ ಗಂಡನ ಮೋಬಾಯಿಲ್ ಫೋನ್ ಗೆ ಮಲ್ಲಣ್ಣಗೌಡ ಲಕಣಾಪೂರ ಇವನು ಫೋನ್ ಮಾಡಿದ್ದು ನನ್ನ ಗಂಡನು ಊಟ ಮಾಡುತ್ತಿದ್ದರಿಂದ ಅತ್ತೆಯಾದ ಲಕ್ಷ್ಮಿಬಾಯಿ ಇವಳು ಫೋನ್ ಎತ್ತಿ ಯಾರು ಮಾತನಾಡುತ್ತಿರುವುದು ಅಂತಾ ಕೇಳಿದಳು ಆಗ ನಾನು ಮಲ್ಲಣ್ಣಗೌಡ ಲಕಣಾಪೂರ ಮಾತನಾಡುವುದು ಅಂತಾ ಹೇಳಿ ಮಡಿವಾಳಪ್ಪನಿಗೆ ಸಾಥಖೇಡ ಕ್ರಾಸಿಗೆ ಕಳುಹಿಸಿಕೊಡಿರಿ ನಾನು ಸಾಥಖೇಡ ಕ್ರಾಸಿನಲ್ಲಿ ನಿಂತಿದ್ದೆನೆ ಅಂತಾ ಹೇಳಿದನು. ನನ್ನ ಗಂಡ ಮಡಿವಾಳಪ್ಪ ಇವನು ಊಟ ಮಾಡುವುದನ್ನು ಬಿಟ್ಟು ಕೈ ತೊಳೆದುಕೊಂಡು ಲುಂಗಿಯ ಮೇಲೆ ನಮ್ಮ ಮೋಟಾರ ಸೈಕಲ್ ಮೇಲೆ ಮನೆಯಿಂದ ಹೋದನು. ರಾತ್ರಿ ಸುಮಾರು 9-15 ಗಂಟೆ ಸುಮಾರಿಗೆ ನನ್ನ ಗಂಡ ಮಡಿವಾಳಪ್ಪನಿಗೆ ಮಲ್ಲಣ್ಣಗೌಡ ತಂದೆ ಸಿದ್ದಣ್ಣಗೌಡ ಪಾಟೀಲ ಜಾತಿ:ರೆಡ್ಡಿ ಇತನು ಮತ್ತು ಇತರರು ಕೂಡಿಕೊಂಡು ನೀರಡಗಿ ಗ್ರಾಮದ ಶರಣಪ್ಪ ತಂದೆ ಚನ್ನಬಸಪ್ಪ ನಾಟೀಕಾರ ಇವರ ಹೊಲದ ಹತ್ತಿರದ ಫೂಲಿನ ಕೆಳಗೆ ಕೊಲೆ ಮಾಡಿ ಹೋಗಿದ್ದಾರೆ ಅಂತಾ ತಿಳಿಯಿತು, ನಾವು ಹೋಗಿ ನೋಡಲು ನನ್ನ ಗಂಡನ ಹೆಣವು ಫೂಲಿನ ತಗ್ಗಿನಲ್ಲಿಯ ಮುಳ್ಳಿನ ಮೇಲೆ ಬಿದ್ದಿತ್ತು ನಾವು ನೋಡಲಾಗಿ ನನ್ನ ಗಂಡನ ತಲೆಯ ಹಿಂಬಾಗಕ್ಕೆ, ಎಡಗೈ ಹಸ್ತಕ್ಕೆ, ಎಡಗಾಲು ಮೋಣಕಾಲು ಕೆಳಗೆ ಭಾರಿ ಕತ್ತಿರಿಸಿದ ರಕ್ತಗಾಯವಾಗಿರುತ್ತದೆ ಯಾವುದೋ ದುರದ್ದೇಶದಿಂದ ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆ, ಅಂತಾ ಶ್ರೀಮತಿ ಯಲ್ಲಮ್ಮ ಗಂಡ ಮಡಿವಾಳಪ್ಪ ಬಡಿಗೇರ ಜಾ: ಹರಿಜನ, ಸಾ|| ಮಾರಡಗಿ ತಾ|| ಜೇವರ್ಗಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 74/2013 ಕಲಂ.302 ಐ.ಪಿ.ಸಿ ಮತ್ತು 3 (1) (10)  ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: