POLICE BHAVAN KALABURAGI

POLICE BHAVAN KALABURAGI

14 March 2013

GULBARGA DISTRICT REPORTED CRIMES


ಕೊಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ :ಶ್ರೀ ಹೀರೂ ತಂದೆ ಶಾಮರಾವ ಪವಾರ ಜಾ: ಪಾರ್ದಿ ಉ: ಕಟ್ಲೆ ಸಾಮಾನು ಮಾರುವದು ಸಾ: ಚೌಪಟ್ಟಿ  ಸುಪರ ಮಾರ್ಕೆಟ ಗುಲಬರ್ಗಾ ಹಾ: ವ: ಸಿಂದಗಿ (ಬಿ) ತಾ: ಗುಲಬರ್ಗಾ ರವರು ನಾನು ಪ್ರತಿ ದಿವಸದಂತೆ ವ್ಯಾಪಾರ ಮಾಡಲು ಗುಲಬರ್ಗಾಕ್ಕೆ ದಿನಾಂಕ.14-03-2013 ರಂದು ಮುಂಜಾನೆ 8-00 ಗಂಟೆಯ ಸುಮಾರಿಗೆ ಸಿಂದಗಿ(ಬಿ) ಗ್ರಾಮದಿಂದ  ಗುಲಬರ್ಗಾಕ್ಕೆ ಬರುತ್ತಿರುವಾಗ ಹೀರಾಪೂರ ರೈಲ್ವೆ ಗೇಟ ಹತ್ತಿರ ಬಂದಾಗ  ಅಮೃತ ಇವರ ಮನೆಯ  ಹಿಂದುಗಡೆ  ಬಯಲು ಜಾಗೆಯಲ್ಲಿ ಜನರು ನೆರೆದಿದ್ದರು, ನಾನು ಹೋಗಿ ನೋಡಲು ಒಬ್ಬ ಪಾರ್ದಿ ವ್ಯಕ್ತಿಯ ಕೊಲೆಯಾಗಿ ಬಿದ್ದಿದ್ದು, ಆತನ ವಯಸ್ಸು ಅಂದಾಜು 20-22 ವರ್ಷದವನಾಗಿದ್ದು, ಎತ್ತರ 5 5 ಕೊಲು ಮುಖ, ತೆಳ್ಳನೆ ಸದೃಡ ಮೈಕಟ್ಟು ಹೊಂದಿದ್ದು , ಮೈ ಮೇಲೆ ಒಂದು ಕಪ್ಪು ಜ್ಯಾಂಗ ಮಾತ್ರ ಇರುತ್ತದೆ. ಒಂದು ಬಿಳಿ ಪ್ಯ್ಲಾಸ್ಟೀಕ್ ಚೀಲದ ಮೇಲೆ ಅಂಗಾತವಾಗಿ ಬಿದ್ದಿರುತ್ತಾನೆ. ಅವನ ಎದೆಯ ಎಡಭಾಗದಲ್ಲಿ ಯಾವುದೋ ಚಾಕು ಅಥವಾ ಚೂಪಾದ ರಾಡನಿಂದ  ಹೊಡೆದು ಕೊಲೆ ಮಾಡಿದ್ದು ಕಂಡು ಬರುತ್ತದೆ. ಇತನು ಗಾಯಪಾರ್ದಿ ಜನಾಂಗದವನಂತೆ ಕಂಡುಬರುತ್ತಾನೆ. ಆದರೆ ನಮ್ಮ ಪಾರ್ದಿ ಜನಾಂಗದವನಾಗಿರುವದಿಲ್ಲಾ. ಕೆಲವು ಪಾರ್ದಿ ಜನಾಂಗದವರು ತಮ್ಮ ಜೋಪಡಿಗಳು ಖಾಲಿ ಮಾಡಿಕೊಂಡು ಹೋಗಿದ್ದು ಕಂಡು ಬರುತ್ತದೆ, ಈ ಘಟನೆಯು ದಿನಾಂಕ:13-03-2013 ರ ರಾತ್ರಿ ವೇಳೆಯಲ್ಲಿ ಅವರವರಲ್ಲಿ ಯಾವುದೋ ಕಾರಣಕ್ಕಾಗಿ ಜಗಳವಾಗಿರಬಹುದು, ಜಗಳದಲ್ಲಿ  ಸದರಿಯವನಿಗೆ ಚೂಪಾದ ರಾಡ ಅಥವಾ ಚಾಕುವಿನಿಂದ ಹೊಡೆದು ಕೊಲೆ ಮಾಡಿರಬಹುದು ಅಂತಾ ಹೀರೂ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.135/2013 ಕಲಂ.302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ದಿನಾಂಕ:13/03/2013 ರಂದು ರಾತ್ರಿ 11-45 ಗಂಟೆಯಿಂದ ದಿನಾಂಕ: 14/03/2013 ರ ಬೆಳಗಿನ ಜಾವ 5-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲು ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ್ದ 15 ಗ್ರಾಂ ಬಂಗಾರ ಅ.ಕಿ 42,000-00 ರೂ ಹಾಗೂ ನಗದು ಹಣ 37,500 ರೂಪಾಯಿಗಳು ಮತ್ತು ಪಕ್ಕದ ಮನೆಯ ಮಲ್ಲು ಇತನ ಕೆ.ಎನ್.ಎಕ್ಸ ಮೋಬೈಲ ಪೋನ ಅ||ಕಿ||800/- ರೂಪಾಯಿ ಹೀಗೆ ಒಟ್ಟು 80300-00 ರೂಪಾಯಿ ಕಿಮ್ಮತ್ತಿನ ಸಾಮಾನುಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ವೀರಪ್ಪ ತಂದೆ ಗವಿಯಪ್ಪ ಅಂಗಡಿ ಸಾ: ಟೀಚರ್ಸ ಕಾಲೋನಿ ಜೇವರ್ಗಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂಬರ 37/2013 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: