POLICE BHAVAN KALABURAGI

POLICE BHAVAN KALABURAGI

30 March 2013

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಗಂಗೂಬಾಯಿ ಗಂಡ ಚಂದ್ರಕಾಂತ ಟೆಳ್ಳೆ ಸಾ|| ಬೆಣ್ಣೆಶಿರೂರ ರವರು ದಿನಾಂಕ:27-03-2013 ರಂದು 23-00  ಗಂಟೆ ಸುಮಾರಿಗೆ ನಮಗೆ  ಮತ್ತು ಲಕ್ಷ್ಮಣ ಚವ್ಹಾಣ ಇಬ್ಬರ ಮಧ್ಯ ಜಗಳವಾಗಿದ್ದು, ನಂತರ 23-30 ಗಂಟೆಗೆ ಲಕ್ಷ್ಮಣ ತಂದೆ ಹೊನ್ನು ಚವ್ಹಾಣ ಸಾ|| ಮಾಡಿಯಾಳ ತಾಂಡಾ, ರಾಜಶೇಖರ ತಂದೆ ಚಂದ್ರಶಾ ಉಪ್ಪಿನ ಸಾ|| ಮಾಡಿಯಾಳಸುನೀಲ ತಂದೆ ರಾಜಶೇಖರ ಉಪ್ಪಿನ ಸಾ|| ಮಾಡಿಯಾಳಅಶೋಕ ತಂದೆ ಹಣಮಂತ ಕೊಂಡಕುಳೆ ಸಾ|| ಮಾಡಿಯಾಳ ನಿರ್ಮಲಾ ಗಂಡ ರಾಜಶೇಖರ ಉಪ್ಪಿನ ಸಾ|| ಮಾಡಿಯಾಳ ಇವರೆಲ್ಲರೂ ದತ್ತಾ ತಂದೆ ತುಕಾರಾಮ ಬಂಡಗಾರಅನ್ನಪೂರ್ಣ ಗಂಡ ದತ್ತಾ ಬಂಡಗಾರ ಮತ್ತು ಭೀಮರಾಯ ತಂದೆ ದತ್ತಾ ಬಂಡಗಾರ  ಇವರ ಪ್ರಚೋದನೆಯಿಂದ ಎಲ್ಲೂರ ನಮ್ಮ ತೋಟದ ಮನೆಯ ಮುಂದೆ ಬಂದು ಅಚಾಚ್ಯ ಶಬ್ದಗಳಿಂದ ಬೈದು ಅವಮಾನಿಸಿ ನನ್ನ ಗಂಡ ಮತ್ತು ಮಕ್ಕಳಿಗೆ ಹೊಡೆ ಬಡೆ ಮಾಡಿ ಸಾದಾ ಮತ್ತು ಗುಪ್ತಗಾಯಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:25/2013 ಕಲಂ, 143, 147, 323, 341, 447, 109, 354, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಮಹ್ಮದ ಆಸೀಫ ತಂದೆ ಅಬ್ದುಲ ರಹೀಮ ಉ:ಜೆಪಿ ಕಂಪನಿಯಲ್ಲಿ ಡ್ರಾಪಮೇನ ಕೆಲಸ ಸಾ:ಮಜೀದ ಚೌಕ ಶಹಾಬಾದ ರವರು ನಾನು ದಿನಾಂಕ:29/03/2013 ರಂದು ಬೆಳಿಗ್ಗೆ 10.30 ಗಂಟೆಗೆ ಸುಮಾರಿಗೆ ನಾನು ರೇಲ್ವೆ ಸ್ಟೇಶನದಿಂದ ಮೊಟಾರ ಸೈಕಲ್  ನಂ.ಕೆಎ-49 ಇ-007 ನೇದ್ದರ ಮೇಲೆ ಮನೆ ಕಡೆಗೆ ಬರುತ್ತಿರುವಾಗ ಶಹಾಬಾದದ ಸರಕಾರಿ ಅಸ್ಪತ್ರೆ ಎದರುಗಡೆ ಸೈಯ್ಯದ ಜಹೀರ ವ:35 ಸಾ:ಮಜೀದ ಚೌಕ ಶಹಾಬಾದ ಇತನು ಅವಾಚ್ಯ ಶಬ್ದಗಳಿಂದ ಬೈದು ಕೈಮುಷ್ಟಿ ಮಾಡಿ ಮುಖಕ್ಕೆ ಹೊಡೆದನು. ಇನ್ನೊಮ್ಮೆ ನನಗೆ ಸಿಟ್ಟಿನಿಂದ ನೋಡಿದರೆ ಜೀವಸಹಿತ ಬಿಡುವದಿಲ್ಲಾ ಅಂತಾ ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 45/2013 ಕಲಂ, 341, 323, 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ದೌಲಸಾಬ ತಂದೆ ಸೂಫಿಸಾಬ ಮುಲ್ಲಾ ವ:70 ಸಾ:ಬಸವೇಶ್ವರ ಚೌಕ ಹತ್ತಿರ ಶಹಾಬಾದ ರವರು ನಾನು ದಿನಾಂಕ:29/03/2013 ರಂದು ಮಧ್ಯಾಹ್ನ 2.00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಶಮ್ಮು ತಂದೆ ಮಹಿಬೂಬ, ಮೌಲನಬಿ ರವರು ಕೂಡಿಕೊಂಡು ಬಂದು ನಮ್ಮ ಅಜ್ಜಿ ನಿನ್ನ ಹತ್ತಿರ ಇಟ್ಟಿರುವ ಹಣ ಕೊಡು ಅಂದನು, ನಾನು ನಿಮ್ಮ ಅಜ್ಜಿಯ ಹಣ ನನ್ನ ಹತ್ತಿರ ಇಲ್ಲಾ ಅಂದಿದ್ದಕ್ಕೆ ಸದರಿಯವರು ಹಣ ಇಲ್ಲಾ ಅಂತಿಯಾ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ತಲೆಗೆ ಹೊಡೆದರು ಮತ್ತು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ:46/2013 ಕಲಂ:323,324,504,506 ಸಂ:34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀಮತಿ ಮೌಲನಬಿ ಗಂಡ ಮಹಿಬೂಬ ಸಾ:ಮೇಸ್ತ್ರೀ ನಗರ ಶಹಾಬಾದ ರವರು ನಾನು ದಿನಾಂಕ:29/03/2013 ರಂದು ಮಧ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ಹಾಗೂ ನಮ್ಮ ಅತ್ತೆ ಮಹಿಬೂಬಿ ಮಗನಾದ ಶಮ್ಮು ಕೂಡಿ ದೌಲಸಾಬ ಇತನ ಮನೆಗೆ ಮಾತನಾಡಲು ಹೋದಾಗ, ದೌಲಸಾಬ ಇತನು ನಮ್ಮ ಮನೆಗೆ ಯಾಕೆ ಬಂದಿದ್ದಿರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ನಮ್ಮ ಅತ್ತೆ ಮಹಿಬೂಬ ಇವಳ ಎಡಕಣ್ಣಿನ ಪಕ್ಕಕ್ಕೆ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 47/2013 ಕಲಂ:323,324,504 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ, ನವಾಬ ತಂದೆ ಸೈಯ್ಯದಸಾಬ ಉ:ಲಾರಿ ಕ್ಲಿನರ್‌  ಸಾ:ಮನೆ ನಂ. 80 ಜಬ್ಬಾರ ಬಿಲ್ಡಿಂಗ್‌ 4ನೇ ಬ್ಲಾಕ್‌ 8ನೇ ಕ್ರಾಸ್‌ ಜಯನಗರ ಬೆಂಗಳೂರ ರವರು ನಾನು ದಿನಾಂಕ:28-03-2013 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಮ್ಮ ಬಿಜಿಟಿ ಕಂಪನಿ ನೆಹರು ಗಂಜ ಗುಲಬರ್ಗಾದಿಂದ ಬೆಂಗಳೂರಿಗೆ ಲಾರಿ ನಂ. ಕೆಎ 01 ಎ-2448 ನೇದ್ದರಲ್ಲಿ  ಹೊರಟಿದ್ದು, ಲಾರಿಯನ್ನು ರಾಜೇಂದ್ರ ಇತನು ಚಲಾಯಿಸುತ್ತಿದ್ದನು. ರಾತ್ರಿ 9:30 ಗಂಟೆಯ ಸುಮಾರಿಗೆ ಫರಹತಾಬಾದ ಕ್ರಾಸ್‌ ಹತ್ತಿರ ಹೊಗುತ್ತಿರುವಾಗ ಲಾರಿ ಚಾಲಕ ಲಾರಿಯನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೆಕ್‌ ಹಾಕಿದ್ದರಿಂದ ಹಿಂದಿನಿಂದ ಒಂದು ಪಿಕಪ್ ಗಾಡಿ ಚಾಲಕನು ತನ್ನ ಪಿಕ್ ಅಪ್ ವಾಹನವನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ  ಲಾರಿಯ ಹಿಂದಗಡೆ ಡಿಕ್ಕಿ ಪಡಿಸಿದನು. ನಮಗೆ ಮತ್ತು ನಮ್ಮ ಲಾರಿಯ ಚಾಲಕನಿಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲ. ಆದರೆ, ಪಿಕ್ ಅಪ್ ಚಾಲಕ ಮಹ್ಮದ ಮಜೀದ ಸಾ:ಜಹೀರಾಬಾದ ಆತನಿಗೆ ಹಣೆಯ ಮೇಲೆ ಮತ್ತು ಗದ್ದಕ್ಕೆ ಬಾರಿ ಮತ್ತು ಸಾದಾ, ರಕ್ತಗಾಯವಾಗಿರುತ್ತದೆ. ಪಿಕ್ ಅಪ್ ನಂಬರ ನೊಡಲಾಗಿ ಹೊಸ ಪಿಕ್ ಅಪ್ ವಾಹನವಿದ್ದು ಅದಕ್ಕೆ ನಂಬರ ಇದ್ದಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 38/2013 ಕಲಂ, 279, 337, 338 ಐಪಿಸಿ ಸಂಗಡ 187 ಐ,ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ದೇವಿಂದ್ರಪ್ಪ ತಂದೆ ಧೂಳಪ್ಪ ಪೂಜಾರಿ ವಯಾ||55 ಸಾ|| ಭೀಮಳ್ಳಿ ರವರು ನಮ್ಮ ಅಣ್ಣ ತಮ್ಮಕ್ಕಿಯ ಮಗಳಾದ ಪ್ರಭಾವತಿ ಇವಳು ತಮ್ಮ ಮನೆಯ ಎದುರಿಗೆ ಇರುವ ತಿಪ್ಪೆ ಜಾಗೆಯಲ್ಲಿ ದಿನಾಂಕ 29-03-13 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ  ಫಿರ್ಯಾದಿ ಕಸ ಚೆಲ್ಲುಲ್ಲು ಹೋದಾಗ ಸಾತಪ್ಪ ತಂದೆ ತಿಪ್ಪಣಾ ಸಂಗಡ ಇನ್ನೂ 4 ಜನರು ನಮ್ಮ ಜಾಗದಲ್ಲಿ ಯಾಕೇ ಕಸ ಚೆಲ್ಲುತ್ತೀ ಅಂತಾ ಅವಾಚ್ಯ ಬೈಯ್ಯುತ್ತಿದ್ದಾಗ ನಾನು ಮತ್ತು ನನ್ನ ಮಗ ರವಿ,  ವಿಶ್ವನಾಥ ಕೇಳಲು ಹೋದಾಗ ರಾಡಿನಿಂದ, ಕಲ್ಲಿನಿಂದ, ಕೈಯಿಂದ ಕಾಲಿನಿಂದ ಒದ್ದು ರಕ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 159/2013 ಕಲಂ 143, 147, 148, 504, 323, 324, 506 (2) ಸಂಗಡ 149 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ತಿಪ್ಪಣ್ಣಾ ತಂದೆ ಪೀರಪ್ಪ ಪೂಜಾರಿ ಸಾ|| ಭೀಮಳ್ಳಿ ರವರ  ನಮ್ಮ ಮನೆ ಎದುರು ಇರುವ ತಿಪ್ಪೆ ಜಾಗದಲ್ಲಿ  ಪ್ರಭಾವತಿ ಇವಳಿಗೆ ಇಲ್ಲಿ ಯ್ಯಾಕೆ ಕಸ ಚೆಲ್ಲುತ್ತಿ ಅಂತಾ ಕೇಳಿದ್ದಕ್ಕೆ ರಾಜಪ್ಪ ತಂದೆ ಮಹಾದೇವಪ್ಪ ಸಮಗಡ ಇನ್ನೂ 5 ಜನರೂ ನಮ್ಮ ತಿಪ್ಪೆ ಜಾಗೆಯಲ್ಲಿ ಕಸ ಹಾಕಬೇಡಾ ಅನ್ನುವವರು ನೀವ್ಯಾರು ಅಂತಾ ಜಗಳಾ ತೆಗೆದು ಅವಾಚ್ಯ ಬೈದು ನನಗೆ ಮತ್ತು ನನ್ನ ಮಕ್ಕಳಾದ ಸಾತಪ್ಪ ಪೀರಪ್ಪ ಅಣ್ಣೆಪ್ಪ  ರವರಿಗೆ ರಾಡಿನಿಂದ, ಕಲ್ಲಿನಿಂದ, ಕೈಯಿಂದ ಹೊಡೆದು  ರಕ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 160/2013 ಕಲಂ 143, 147, 148, 504, 323, 324, 506 (2) ಸಂಗಡ 149 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

No comments: