POLICE BHAVAN KALABURAGI

POLICE BHAVAN KALABURAGI

12 March 2013

GULBARGA DISTRICT REPORTED CRIMES


ಮಾರಾಣಾಂತಿಕ ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಚಂದ್ರಕಾಂತ  ತಂದೆ ಯಲ್ಲಪ್ಪ  ಸಾಗರ  ಚಾಲಕ ಸಾ|| ಹೊಸಳ್ಳಿ ತಾ|| ಚಿಂಚೋಳಿ ರವರು ನಾನು ಮತ್ತು ಕ್ಲೀನರ ಈರಣ್ಣಾ ದಿನಾಂಕ: 10-03-2013 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ  ಕಮಲಾಪೂರ ಬಸ್ಸ ನಿಲ್ದಾಣದ ಹತ್ತಿರ ಕ್ರೋಜರ್ ವಾಹನ ಕೆಎ-29 ಎಮ್-9530 ನೇದ್ದು ನಿಲ್ಲಿಸಿ 3 ಜನ ಪ್ಯಾಸಿಂಜರ ಗಳನ್ನು ಕೂಡಿಸಿಕೊಂಡು ಹೊರಟಾಗ  ಕೆಎ-29 ಎಮ್-4046 ನೇದ್ದರ ಕ್ರೋಜರನವರು ನಮ್ಮ  ವಾಹನದಲ್ಲಿ ಇನ್ನೂ ಕೆಲವು ಜನರು ಕಡಿಮೆ ಇದ್ದಾರೆ ನಿಮ್ಮ ಗಾಡಿಯಿಂದ ಕಳುಹಿಸಿ ಕೊಡು ಅಂತಾ ಹೇಳಿದರು. ಅದಕ್ಕೆ ನಾವು ಪ್ಯಾಸಿಂಜರ್ ರವರು ಬಂದರೆ ಕರೆದುಕೊಂಡು ಹೋಗಿ ಅಂತಾ ಹೇಳಲು, ನಮಗೆ ಹೊಡೆ ಮಾಡಿ ಅಡ್ಡಗಟ್ಟಿ ಕಲ್ಲಿನಿಂದ ಹೊಡೆಯುವದನ್ನು ತಪ್ಪಿಸಿಕೊಂಡು ಬರುತ್ತಿರುವಾಗ ಸಾಗರ ವೈನ್ ಶಾಪ ಹತ್ತಿರ ತಾರಪೈಲ್ ದ 8-10 ಜನರು ಬಂದು ಕೊಲೆ ಮಾಡುವ ಉದ್ದೇಶದಿಂದ ಈರಣ್ಣಾ ಇತನಿಗೆ ಕ್ರೋಜರ ವಾಹನದಲ್ಲಿ ಹಾಕಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಬುದ್ದ ನಗರಕ್ಕೆ ಕರೆದುಕೊಂಡು ಹೋಗಿ ಹೊಡೆದು ಭಾರಿಗಾಯಗೊಳಿಸಿರುತ್ತಾರೆ. ಅಂತಾ  ಚಂದ್ರಕಾಂತ ಇತನು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:129/2013 ಕಲಂ, 323, 341, 364, 504, 147, 143, 307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ವಿರಣ್ಣಾ ತಂದೆ ಲಕ್ಷ್ಮಣರಾವ ಓಕಳಿ ಸಾ:ಈಶ್ವರ ಟೆಂಪಲ್ ಹತ್ತಿರ ತಿಲಕ ನಗರ  ಕುಸನೂರ ರೋಡ ಗುಲಬರ್ಗಾರವರು ನಾನು ದಿನಾಂಕ:11-03-2013 ರಂದು   ಬೆಳಿಗ್ಗೆ  10=30 ಗಂಟೆಗೆ  ಸುಮಾರಿಗೆ ಮೋಟಾರ ಸೈಕಲ್ ನಂ:ಕೆಎ 32 ಎಕ್ಸ 2729 ನೇದ್ದರ ಮೇಲೆ ಬಸನಗೌಡ ಇವರಿಗೆ ಕೂಡಿಸಿಕೊಂಡು ಟೌನ ಹಾಲ ಕ್ರಾಸ್ ದಿಂದ ಕುಳಗೇರಿ ಕ್ರಾಸ್ ಮುಖಾಂತರ ತಿಲಕ ನಗರ ಕಡೆಗೆ ಹೋಗುತ್ತಿದ್ದಾಗ ಪಶು ಆಸ್ಪತ್ರೆಯ ಎದುರು ರೋಡಿನ ಮೇಲೆ ಕಾರ ನಂ:ಕೆಎ-32/2212 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ್ ಗೆ  ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ  ನನಗೆ ಮತ್ತು ಬಸನಗೌಡ ಇವರಿಗೆ ಭಾರಿ ಗಾಯಗೊಳಿಸಿ ಕಾರ ಸಮೇತ ಹೋರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 17/2013 ಕಲಂ: 279, 338  ಐ.ಪಿ.ಸಿ. ಸಂ 187 ಐ,ಎಮ್,ವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

No comments: