POLICE BHAVAN KALABURAGI

POLICE BHAVAN KALABURAGI

08 February 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಎಚ್.ವೀರಭದ್ರಪ್ಪ ಮುಖ್ಯೋಪಾಧ್ಯಯರು ಸರಕಾರಿ ಪ್ರೌಢ ಶಾಲೆ ಭೀಮಳ್ಳಿ ರವರು ನಾನು ಶಾಲೆಯ ಎಲ್ಲಾ ಕೋಣೆಗಳಿಗೆ ದಿನಾಂಕ:06/02/2013 ರಂದು ಕೀಲಿ ಹಾಕಿಕೊಂಡು ಮನೆಗೆ ಹೋಗಿರುತ್ತೆನೆ. ದಿನಾಂಕ:07/02/2013 ರಂದು ಬೆಳಿಗ್ಗೆ 9:30 ಗಂಟೆಗೆ ಶಾಲೆ ಬಂದು ಕಾರ್ಯಾಲಯದ ಕೋಣೆ ತೆಗೆಯಲು ಹೋದಾಗ ಕಾರ್ಯಾಲಯದ ಕೊಂಡಿ ಮುರಿದಿದ್ದು, ಒಳಗೆ ಹೋಗಿ ನೋಡಲಾಗಿ ಗಣಯಂತ್ರದ ಕೊಣೆಯಲ್ಲಿರುವ ಕಂಪ್ಯೂಟರ್ ಹಾಗೂ ಬಿಸಿ ಊಟದ ಸಾಮಾಗ್ರಿಗಳು ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಇದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:84/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:07-02-2013 ರಂದು ಸಾಯಂಕಾಲ 7-15  ಗಂಟೆಗೆ ನನ್ನ ತಮ್ಮ ಕಾಶಪ್ಪ ತಂದೆ ನರಸಪ್ಪ ಜೋಗಿ @ ಡಬ್ಬಾ ಇತನು ತನ್ನ ಅತ್ತಿ-ಮಾವನ ಊರಾದ ಮುಗನೂರ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತ ಮೋಟಾರು ಸೈಕಲ್ ನಂ-KA-05-EU-4529 ಬಜಾಜ್ ಪಲ್ಸರ್ ವಾಹನದ ಮೇಲೆ ಹೋಗಿದ್ದನು. ರಾತ್ರಿ ಸುಮಾರು 9-00 ಗಂಟೆಗೆ ಯಾರೋ ಫೋನ ಮಾಡಿ, ನನ್ನ ತಮ್ಮನಾದ ಕಾಶಪ್ಪ ಜೋಗಿ ಇತನು ಮುಗನೂರಕ್ಕೆ ಹೋಗುವಾಗ ರಂಜೋಳ ಕ್ರಾಸ್ ಹತ್ತಿರದಲ್ಲಿ ರಿಬ್ಬನಪಲ್ಲಿ-ವಾಘ್ದಾರಗಿ ಮುಖ್ಯ ರಸ್ತೆಯ ಮೇಲೆ ತನ್ನ ಮೋಟಾರ ಸೈಕಲ್ ಅಪಘಾತವಾಗಿ ರಸ್ತೆಯ ಮೇಲೆ ರೋಡಿನ ಎಡಗಡೆ ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಯಾವುದೊ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮುಗನೂರ ಗ್ರಾಮಕ್ಕೆ ಹೋಗುತ್ತಿದ್ದ ಕಾಶಪ್ಪನ ವಾಹನಕ್ಕೆ ಡಿಕ್ಕಿ ಪಡೆಸಿದ್ದರಿಂದ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ನನ್ನ ತಮ್ಮ ನಡೆಸುತ್ತಿದ್ದ  ಮೋಟಾರು ಸೈಕಲ್ ನಂ-KA-05-EU-4529 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ  ಮುಂದಿನ ಗಾಲಿ ಮತ್ತು ಪೆಟ್ರೊಲ್ ಟ್ಯಾಂಕ ಒಡೆದು ಅದರಲ್ಲಿದ್ದ ಪೆಟ್ರೊಲ್ ಸಿಡಿದು ಮುಂದಿನ ಗಾಲಿಗೆ ಮತ್ತು ಪೆಟ್ರೊಲ್ ಟ್ಯಾಂಕಿಗೆ ಬೆಂಕಿ ಹತ್ತಿ ಸುಟ್ಟಿದ್ದು ಇರುತ್ತದೆ. ಕಾರಣ ಈ ಅಪಘಾತ ಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕು ಅಂತ ನರಸಪ್ಪ ತಂದೆ ನರಸಪ್ಪ ಜೋಗಿ @ ಡಬ್ಬು ಸಾ:ಅಡಕಿ ಗ್ರಾಮ, ತಾ:ಸೇಡಂ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ:33/2013 ಕಲಂ-279, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ, ಶೆಟಬಾಯಿ ಗಂಡ ಅಂದಪ್ಪ ಬಾಸಗಿ ಸಾ: ಕೇರೂರ ತಾ:ಆಳಂದ   ರವರು ನಾನು ಹಾಗೂ ನಮ್ಮ ಮನೆಯವರು ಮನೆಯಲ್ಲಿದ್ದಾಗ ಬಾಬುರಾವ ಹಾಗೂ ಆತನ ಹೆಂಡತಿ ಮಡೆವ್ವ ಇವರು ಬಂದು ಅವಾಚ್ಯವಾಗಿ ಬೈಯುತ್ತಿರುವಾಗ ಯ್ಯಾಕೆ ಬೈಯುತ್ತಿ ಅಂತಾ ಕೇಳಲು ಮತ್ತೆ ಅವಾಚ್ಯವಾಗಿ ನಿಂದನೇ ಮಾಡಿ ನನ್ನ ಗಂಡನಿಗೆ ರಸ್ತೆಯ ಮೇಲೆ ಕರೆದುಕೊಂಡು ಹೋಗಿ ಬಾಬುರಾವ ಇತನು ನನ್ನ ಗಂಡನ ಎದೆಯ ಮೆಲಿನ ಅಂಗಿ ಹಿಡಿದು ಕೈಯಿಂದ ಕಪ್ಪಾಳದ ಮೇಲೆ ಹೊಡೆದನು. ಬೀಡಿಸಲು ಹೋದ ನನಗೂ ಸಹ ಹಲ್ಲೆ ಮಾಡಿರುತ್ತಾನೆ. ಕಾರಣ ನಮಗೆ  ಹೊಡೆದು ಅವಾಚ್ಯ ಶಬ್ಬಗಳಿಂದ ನಿಂದಸಿರುವವರ ಮೇಲೆ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:16/2013 ಕಲಂ: 323,325,354,504,506 ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: