POLICE BHAVAN KALABURAGI

POLICE BHAVAN KALABURAGI

16 February 2013

GULBARGA DISTRICT REPORTED CRIMES


ಹೆತ್ತ ಮಗನಿಂದಲೆ ತಂದೆಯ ಕೊಲೆ:
ಯಡ್ರಾಮಿ ಪೊಲೀಸ್ ಠಾಣೆ:ದಿನಾಂಕ 15-02-2013 ರಂದು ರಾತ್ರಿ 8-00  ಗಂಟೆಗೆ ಕಲ್ಯಾಣಿ ತಂದೆ ಮಲ್ಲಣ್ಣ ಗಾಣಿಗೇರ ವಯ:22 ವರ್ಷ ಸಾ:ಕುಮ್ಮನಶಿರಸಗಿ ಇತನು ನ್ನ ತಂದೆಗೆ ಸರಾಯಿ ಕುಡಿಯಲು ಹಣ ಕೇಳಿದ್ದು ಆಗ ನನ್ನ ಹತ್ತಿರ ಹಣ ಇಲ್ಲ ಅಂತಾ ಅಂದಿದ್ದಕ್ಕೆ ಕಲ್ಯಾಣಿ ಇತನು ಹಣ ಕೊಡುವದಿಲ್ಲ ಮಗನೇ ಇವತ್ತು ನಿನಗೆ ಖಲಾಸ್ ಮಾಡಿಯೇ ಬಿಡುತ್ತೇನೆ ಅಂತಾ ತಕರಾರು ಮಾಡಿದ್ದನು. ತನ್ನ ತಂದೆ ಮಲ್ಲಣ್ಣ ಇತನು ಅರಳಗುಂಡಗಿ ಮಡ್ಡಿ ಹೊಲದಲ್ಲಿ ಮಲಗಿಕೊಂಡಾಗ ಕಲ್ಯಾಣಿ ಇತನು ಮಲಗಿಕೊಂಡ ತನ್ನ ತಂದೆಗೆ ಅಲ್ಲೇ ಇದ್ದ ಕೊಡಲಿಯಿಂದ ಕುತ್ತಿಗೆಗೆ ಹಾಗು ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆ. ಕೊಲೆ ಮಾಡಿದ ಮಗನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಮೃತನ ಹೆಂಡತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:32/2013 ಕಲಂ,302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಶಾಲೆಯಲ್ಲಿರುವ ಟಿವಿ ಕಳ್ಳತನ ಮಾಡಿದ ಬಗ್ಗೆ:
ವಾಡಿ ಪೊಲೀಸ್ ಠಾಣೆ: ನಮ್ಮ ಶಾಲೆಯ 1 ನೇ ತರಗತಿಯಲ್ಲಿಟ್ಟಿದ್ದ ಒಂದು ಸ್ಯಾಮಸಂಗ ಕಲರ್ ಟಿವಿ, ಮತ್ತು ಬ್ಯಾಟ್ರಿ ಯಾರೊ ಕಳ್ಳರು ದಿನಾಂಕ:10-02-2013 ರಿಂದ 13-02-2013 ರ ಮಧ್ಯದ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರಿಮತಿ ಮೆರಿಯಮ್ಮಾ ಗಂಡ ಸೊಮಶೇಖರ ಬೆಳ್ಳೆ ಸರಕಾರಿ ಮಾದರಿಯ ಪ್ರಾಥಮೀಕ ಶಾಲೆ ನಾಲವಾರದ ಪ್ರಭಾರ ಮುಖ್ಯ ಗುರುಗಳು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 454, 457, 380 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕರೆಂಟ ಮೋಟಾರ ವೈರ ಕಳ್ಳತನ ಮಾಡಿದ ಬಗ್ಗೆ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಶರಣಬಸಪ್ಪ ತಂದೆ ಭೂತಾಳಿ ಕೌಲಗಿ ಸಾ:ಮಾದನ ಹಿಪ್ಪರಗಾ ರವರು ಖೇಡ ಉಮರ್ಗಾ ಸೀಮಾಂತರ ಹೊಲ ಸರ್ವೆ ನಂ:43/1 ರಲ್ಲಿನ ಬಾವಿಗೆ ಅಳವಡಿಸಿದ ಕರೆಂಟ್ ಮೋಟಾರ ವೈರ್ 600 ಪೀಟ್ ಗಳದ್ದು, ದಿನಾಂಕ:12/02/2013 ರ ರಾತ್ರಿ 10-00 ಗಂಟೆಯಿಂದ ಬೆಳಗಿನ ಜಾವ 5-00 ಮಧ್ಯದಲ್ಲಿ ವಾಲ್ಕು ತಂದೆ ಸಕ್ಕರಾಮ ಪವಾರ,ಸಕಾರಾಮ ತಂದೆ ಕಲ್ಲಪ್ಪ ಪವಾರ ಸಾ:ಝಳಕಿ (ಬಿ) ಹಾ:ವ: ಹಡಲಗಿ ತಾ:ಆಳಂದ  ಇವರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶರಣಬಸಪ್ಪಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ. ನಂ:19/2013 ಕಲಂ: 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: