POLICE BHAVAN KALABURAGI

POLICE BHAVAN KALABURAGI

20 February 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀ ವಿಶ್ವನಾಥ ತಂದೆ ಶರಣಪ್ಪಾ ಪ್ಯಾಟಿ ಸಾ:ಫೀರೋಜಾಬಾದ ರವರು ನಾನು ಮತ್ತು ನಮ್ಮೂರಿನ ಖಲಿಲ,ರಾಮಚಂದ್ರ, ಮತ್ತು ಹಾಜಿಮಿಯಾ ಕೂಡಿಕೊಂಡು ನದಿಸಿನ್ನೂರ ಗ್ರಾಮದ ಶಿವಶರಣಪ್ಪಾ ಹೂಗಾರ ಇವರ ದಾಲಮಿಲನ ಪೂಜೆ ಇರುವುದ್ದರರಿಂದ ದಿನಾಂಕ:18-02-2013 ರಂದು ಬೆಳಿಗ್ಗೆ 10-00 ಗಂಟೆಗೆ ದಾಲ ಮಿಲಿನ ಪೂಜೆಯ ನಿಮಿತ್ಯವಾಗಿ ಅಡುಗೆಯ ಸಾಮಾನುಗಳನ್ನು  ಟ್ರ್ಯಾಕ್ಟರ ನಂಬರ ಕೆಎ-32 ಟಿಎ-3677/78  ನೇದ್ದರಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ಟ್ಯಾಕ್ಟರ ಹಾಜಿಮಿಯಾ ತಂದೆ ಖಾಸಿಮಸಾಬ ಇತನು ಚಲಾಯಿಸುತ್ತಿದ್ದು ನದಿಸಿನ್ನೂರ ಕ್ರಾಸ ಹತ್ತಿರ ಬರುತ್ತಿರುವಾಗ ಹಿಂದಿನಿಂದ ಒಬ್ಬ ಟಿಪ್ಪರ ಕೆಎ-32 ಬಇ-5476 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಹೊಗುತ್ತಿದ್ದ ಟ್ರ್ಯಾಕ್ಟರಿಗೆ ಡಿಕ್ಕಿ ಪಡಿಸಿರುತ್ತಾನೆ. ಟ್ರ್ಯಾಕ್ಟರ ರಸ್ತೆಯ ಎಡಗಡೆಗೆ ಬೋರಲಾಗಿ ಪಲ್ಟಿಯಾಗಿದ್ದರಿಂದ ನಮ್ಮೆಲರಿಗೆ ರಕ್ತಗಾಯವಾಗಿರುತ್ತವೆ. ಟಿಪ್ಪರ ಚಾಲಕ ಕಿಶನ ಚವ್ಹಾಣ ಇತನು ಡಿಕ್ಕಿ ಪಡಿಸಿ ತನ್ನ ವಾಹನವನ್ನು ನಿಲ್ಲಿಸದೆ ಹಾಗೆಯೆ ಹೋಗಿರುತ್ತಾನೆ. ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:21/2013 ಕಲಂ, 279,338, ಸಮಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ 19-02-13 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ  ನಮ್ಮ ಚಿಕ್ಕಪ್ಪ ಭೀಮಶ್ಯಾ ಸಾವಳಗಿ ಇವರ ಮೊಮ್ಮಗನ ಜಾವಳ ಕಾರ್ಯಕ್ರಮಕ್ಕೆ ಹಾಜರಾಗಲು ನಾನು ಮತ್ತು ನನ್ನ ಇಬ್ಬರ ಗೆಳೆಯರೊಂದಿಗೆ ಮೋಟಾರ ಸೈಕಲ ಕೆಎ-32/ವಿ-2355 ನೇದ್ದರ ಮೇಲೆ ಗೋಳಾ ಗ್ರಾಮಕ್ಕೆ ಹೋಗಿ ಜಾವಳ ಕಾರ್ಯಕ್ರಮಕ್ಕೆ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ಸಾಯಂಕಾಲ 7-30 ಗಂಟೆ ಸುಮಾರಿಗೆ ಭೀಮಳ್ಳಿ ಕ್ರಾಸ ಹತ್ತಿರ ಎದುರುನಿಂದ ಕ್ರೋಜರ ಕೆಎ-23 ಎಂ-6474 ನೇದ್ದರ ಚಾಲಕ ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬಂದು ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಕ್ರೋಜರ ನಿಲ್ಲಿಸಿ ಚಾಲಕ ಓಡಿ ಹೋದನು. ನನ್ನ ಹಿಂದೆ ಮೋಟಾರ ಸೈಕಲ ಮೇಲೆ ಕುಳಿತ ಅಜಿತಕುಮಾರ ಇತನು ಸ್ಥಳದಲ್ಲಿ ಮೃತಪಟ್ಟಿದ್ದು, ನನಗೆ ಮತ್ತು ಅನಿಲ ಇಬ್ಬರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತವೆ. ಅಂತಾ ಶ್ರೀ ವಿನೋದ ತಂದೆ ಮಾಹಾಂತೇಶ ದೇಸುಣಕಿ  ಸಾ|| ಬುದ್ದ ನಗರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 99/2013 ಕಲಂ 279, 338 304 (ಎ) ಐಪಿಸಿ ಸಂಗಡ 187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ. 

No comments: