POLICE BHAVAN KALABURAGI

POLICE BHAVAN KALABURAGI

15 February 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ ರವಿಗೌಡ ತಂದೆ ಹಣಮಂತರಾಯ ಪೊಲೀಸ್ ಪಾಟೀಲ ಸಾ|| ಹಲಗಡ್ಲಾ ತಾ||ಜೇವರ್ಗಿ ರವರು  ನನ್ನ ಅಣ್ಣ ರಾಜುಗೌಡ ಟಿಪ್ಪರ ನಂ ಕೆಎ-32 ಬಿ-4180 ನೇದ್ದರ ಮೇಲೆ ಚಾಲಕನಿದ್ದು, ದಿನಾಂಕ:14-02-2013 ರಂದು ಬೆಳಗ್ಗೆ 6-00 ಗಂಟೆಯ ಸುಮಾರಿಗೆ ರಾಜುಗೌಡ ಇತನು ಗುಲಬರ್ಗಾದಿಂದ ಜೇವರ್ಗಿಗೆ  ಮುರುಮ ಹೊಡೆಯುವ ಕುರಿತು ಟಿಪ್ಪರ ತಗೆದುಕೊಂಡು ಹೋಗುವಾಗ ಖಣದಾಳ ಕ್ರಾಸ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆಎ-38 ಎಫ್.-575 ನೇದ್ದರ ಚಾಲಕ ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಬಂದು ಟ್ಟಿಪ್ಪರಕ್ಕೆ ಡಿಕ್ಕಿ ಪಡಿಸಿದ್ದರಿಂದ ರಾಜುಗೌಡ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಅಪಘಾತ ಪಡಿಸಿದ ಬಸ್ ಚಾಲಕ ಅರಣುಕುಮಾರ ಮತ್ತು ಕಂಡಕ್ಟರ್ ಹಾಗೂ ಬಸ್ಸಿನಲ್ಲಿದ್ದ 3 ಜನ ಪ್ರಯಾಣಿಕರಿಗೆ ಗಾಯಗಳಾಗಿರುತ್ತವೆ ಅಂತಾ  ಶ್ರೀ ರವಿಗೌಡ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ: 19/2013 ಕಲಂ, 279, 337, 338 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:13-02-2013 ರಂದು ಸಾಯಂಕಾಲ 7:00 ಗಂಟೆ ಸುಮಾರಿಗೆ ಶೇಖ ಖಬಲಾ ಇವರು ಮೋಟಾರ ಸೈಕಲ ನಂ ಕೆಎ-32 ಇಬಿ-2346 ನೇದ್ದರ ಮೇಲೆ ಆಳಂದ ಚೆಕ್ಕ ಪೊಸ್ಟ ಕಡೆಗೆ ಸಾಮಿಯಾನದ ಕಿರಾಯಿ ಕೊಡಲು ಹೋಗುತ್ತಿದ್ದಾಗ ಮಿಜಬಾ ನಗರ 2 ನೇ ಕ್ರಾಸದಲ್ಲಿ ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ವೇಗದಲ್ಲಿ ಮೋಟಾರ ಸೈಕಲ ನಿಯತ್ರಂಣ ತಪ್ಪಿ ಸ್ಕೀಡಾಗಿ ಬಿದ್ದಿದ್ದುರಿಂದ ಶೇಖ ಖಬಲಾ ಇತನಿಗೆ ಭಾರಿಗಾಯಗಳಾಗಿರುತ್ತವೆ ಅಂತಾ ಶ್ರೀ ಅಬಜನಖಾನ ತಂದೆ ಅಬ್ಬಾಸ ಖಾನ ಸಾ:ಸರಕಾರಿ ಶಾಲೆಯ ಹತ್ತಿರ ಮಿಸಬಾ ನಗರ ಗುಲಬರ್ಗಾ  ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 96/2013 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:

ಕಮಲಾಫೂರ ಪೊಲೀಸ್ ಠಾಣೆ ದಿನಾಂಕ:14/02/2013 ರ ಬೆಳಗ್ಗೆ 6-00 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಮನೆಯ ಕೀಲಿ ಮುರಿದು ಬೆಳ್ಳಿಯ ಆಭರಣಗಳು, ಹಾಗೂ ನಗದು ಹಣ 13500-00 ರೂಪಾಯಿಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ರವಿ ತಂದೆ ರೇವಣಸಿದ್ದಪ್ಪಾ ಹಳ್ಳಿಖೇಡ ಸಾ|| ಬಾಚನಾಳ ತಾ||ಜಿ|| ಗುಲಬರ್ಗ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ;12/2013 ಕಲಂ. 457,380 ಐಪಿಸಿ ಪ್ರಕಾರ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: