POLICE BHAVAN KALABURAGI

POLICE BHAVAN KALABURAGI

22 February 2013

GULBARGA DISTRCIT REPORTED CRIME


ದರೋಡೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ವಿದ್ಯಾದರ ತಂದೆ ಕೃಷ್ಣ ಭಟ್ ಸಾ|| ನಂದ ಗೋಕುಲ್  ಎನ್ ವಿ ಲೇಔಟ್ ಗುಲಬರ್ಗಾರವರು ನಾನು ಮತ್ತು ಸತ್ಯನಾಥ ಶೆಟ್ಟಿ ಹಾಗು ಅರುಣಾಚಲ್ ಭಟ್ ಕೂಡಿಕೊಂಡು ಪಾರ್ಟನರ್ ಶಿಪ್ ನಲ್ಲಿ ರಾಮ ಮಂದಿರ ಹತ್ತಿರ ಶ್ರೀ ಕಲ್ಯಾಣ ಅಸೋಸಿಯಟ್ಸ ಬಜಾಜ ಅಟೋ ಶೋ ರೂಮ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇವೆ. ದಿನಾಂಕ:20/02/2013 ರಂದು ರಾತ್ರಿ 8:00 ಗಂಟೆಯವರೆಗೆ ಶೋರೂಮ್ ನಲ್ಲಿದ್ದು ಕೆಲಸ ಮುಗಿಸಿಕೊಂಡು ಕೀಲಿ ಹಾಕಿಕೊಂಡು ಯಶ್ವಂತ ಹೊಸಮನಿ ವಾಚಮನಗೆ ಶೋರೋಮ ಚನ್ನಾಗಿ ನೋಡಿಕೋಳ್ಳುವಂತೆ ತಿಳಿಸಿ ಹೋಗಿರುತ್ತೆವೆ. ದಿನಾಂಕ:21/02/2013 ರಂದು ಬೆಳಗ್ಗೆ 5:30 ಗಂಟೆಗೆ ಹೊಸಮನಿ ವಾಚಮನ ನನಗೆ ಪೋನ ಮಾಡಿ ಯಾರೋ ಆರು ಜನ ಅಪರಿಚಿತರು ನಮ್ಮ ಶೋರೂಮ್ ಗೆ ಬಂದು ನನಗೆ ಹೊಡೆ ಬಡೆ ಮಾಡಿ ಶೆಟರ ಮುರಿದು 90,000/- ರೂಪಾಯಿಗಳು ದೋಚಿಕೊಂಡು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಶೊರೂಮ್ ಗೆ ಬಂದು ನೋಡಲಾಗಿ ನಮ್ಮ ಶೋರೂಮ್ ಮುಂದಿನ ಶೆಟರ  ಮುರಿದು 90,000/- ರೂಪಾಯಿಗಳು ತೆಗೆದುಕೊಂಡು ಹೋಗಿದ್ದು ನಿಜವಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:36/2013 ಕಲಂ, 395 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: