POLICE BHAVAN KALABURAGI

POLICE BHAVAN KALABURAGI

04 January 2013

REPORTED CRIME


ಹಣ ದೋಚಿದ ಬಗ್ಗೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ. ಬಸವರಾಜ ತಂದೆ ಕಲ್ಯಾಣರಾವ ಚಟ್ಟಿ ವಯ; 32 ವರ್ಷ ಜ್ಯಾತಿ;ಲಿಂಗಾಯತ ಉದ್ಯೋಗ;ಕಣ್ಣಿ ಮಾರ್ಕೆಟನಲ್ಲಿ ವ್ಯಾಪಾರ ಸಾ||ಬಸನಾಳ ತಾ||ಅಫಜಲಪೂರ ಜಿ||ಗುಲಬರ್ಗಾ ಹಾವ ಪ್ಲಾಟ ನಂ:217 ಜಾಧವ ಲೇಔಟ  ಬಿದ್ದಾಪೂರ ಕಾಲೋನಿ ಅಫಜಲಪೂರ ರೋಡ ಗುಲಬರ್ಗಾರವರು ನಾನು ದಿನಾಂಕ:01-01-2013 ರಂದು  ರಾತ್ರಿ 11-00 ಗಂಟೆಯ ಸುಮಾರಿಗೆ  ಕಣ್ಣಿ ಮಾರ್ಕೆಟನಲ್ಲಿ ಮೆಣಸಿನಕಾಯಿ ವ್ಯಾಪಾರ ಮುಗಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ಬಿದ್ದಾಪೂರ ಕಾಲೋನಿಯ  ಉದ್ಯಾನ ವೈನ ಶ್ಯಾಪ ಹತ್ತಿರ ಬಸ್ಸ ಸ್ಟಾಪ ಸಮೀಪ ಹೋಗುತ್ತಿರುವಾಗ ಪರಿಚಯದವನಾದ ವಿಜಯಕುಮಾರ ಪರಂಜಪೆ ಕಾರ್ಪೊರೆಟರ ಜೇವರ್ಗಿ ಕಾಲೋನಿ ಸಾ;ಸಂತೋಷ ಕಾಲೋನಿ ಉದನೂರ ರೋಡ ಗುಲಬರ್ಗಾ ಇತನು ನನಗೆ ಕರೆದು ನೋಡದ ಹಾಗೆ ಹೋಗುತ್ತಿದ್ದಿರಿ ಬರ್ರೀ ಅಂತಾ ಅಂದಿದ್ದಕ್ಕೆ ನಾನು ಹೋಗಿದ್ದು, ವಿಜಯಕುಮಾರನು  ಸರಾಯಿ ಕುಡಿದ ನಶೆಯಲ್ಲಿದ್ದನ್ನು  ನನಗೆ ಹಣ ಬೇಕಾಗಿದೆ ಹಣ ಕೊಡು ಅಂತಾ ಅಂದಾಗ ನಾನು ಹಣ ಕೋಡುವದಿಲ್ಲಾ ಅಂದಾಗ ಆಗ ಅವನು ನನಗೆ ಕೈಯಿಂದ ಕಪಾಳಕ್ಕೆ ಹೊಡೆದನು  ಆಗ ನಾನು ಕೆಳಗೆ ಬಿದ್ದೇನು  ಆಗ ದಾರಿಗೆ ಹೋಗುತ್ತಿದ್ದ  ಮಹಿಬೂಬ ಪಟೇಲ್, ಶ್ರೀನಿವಾಸ ಪಾಟೀಲ್ @ ಸೀನೂ  ಎನ್.ಜಿ.ಓ. ಕಾಲೂನಿ ಗುಲಬರ್ಗಾ ಇವರು ಬಂದು ಏಕೆ ತಕರಾರು ಮಾಡುತ್ತಿದ್ದಿರಿ ಸುಮನೆ ಹೋಗಿರಿ ಅಂತಾ ಅಂದುದಕ್ಕೆ ಇಬ್ಬರು ಗೆಳೆಯರಿದ್ದೇವು ಮಜಾಕ ಮಾಡುತ್ತಿದ್ದೇವೆ ಅಂತಾ ಹೇಳಿದನು. ವಿಜಯಕುಮಾರನು ಯಾರಿಗೋ ಫೋನ ಮಾಡಿ  ಸಾಮಾನುಗಳನ್ನು ತೆಗೆದುಕೊಂಡು ಬಾ ಅಂತಾ  ಹೇಳಿ  ನನಗೆ ಹೆದರಿಸಿ ನನ್ನ ಜೇಬಿನಲ್ಲಿದ್ದ 18,000/- ರೂಪಾಯಿಗಳನ್ನು ಕಿತ್ತಿ ಕೊಂಡನು  ಆತನ ಗೆಳೆಯ ತಂದಿರುವ ಮಚ್ಚು ತೆಗೆದು ರೂಪಾಯಿ ಕೊಡು ಅಂತಾ ಹೆದರಿಸಿದನು, ಆಗ ನಾನು ಅವನಿಗೆ ಅವನು ನನ್ನ ಹತ್ತಿರವಿರುವ ರೂಪಾಯಿ ಕಿತ್ತಿಕೊಂಡಿರುತ್ತಾನೆ ಅಂತಾ ತಿಳಿಸಿದೇನು, ನಂತರ ಇಬ್ಬರು ಕೂಡಿಕೊಂಡು  ಈ ವಿಷಯದ ಬಗ್ಗೆ ಪೊಲೀಸ ಕಂಪ್ಲೆಂಟ ಕೊಟ್ಟರ ನಿನಗೆ ಬಿಡುವದಿಲ್ಲಾ ಅಂತಾ ಹೆದರಿಸಿ  ಜೇವರ್ಗಿ ಕಾಲೂನಿ ಕಡೆಗೆ ಹೋದರು. ವಿಜಯಕುಮಾರ ಇವನು ಕಾರ್ಪೋರೆಟರ ಆಗಿದ್ದು ಅವನನ್ನು ವಿಚಾರಿಸಿ ಸಮಸ್ಯೆ ಬಗೆ ಹರಿಸಿಕೊಳ್ಳಬೇಕು ಅಂತಾ ನಾನು ಯಾವುದೇ ದೂರು ಕೊಟ್ಟಿರುವದಿಲ್ಲ. ಸದರಿ ವಿಜಯಕುಮಾರ ಇಲ್ಲಿಯವರೆಗೆ ಕಾಣದೆ ಇರುವದರಿಂದ ಸದರಿಯವನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಗುನ್ನೆ ನಂ:8/2013 ಕಲಂ.394 ಐಪಿಸಿ. ಪ್ರಕಾರ ಗುನ್ನೆ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

No comments: