POLICE BHAVAN KALABURAGI

POLICE BHAVAN KALABURAGI

05 December 2012

GULBARGA DISTRICT


ಗುಲಬರ್ಗಾ ಜಿಲ್ಲಾ ವಿಶೇಷ ತನಿಖಾ ದಳದ  ಪೊಲೀಸ್ ಅಧಿಕಾರಿಗಳಿಂದ, ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುತ್ತಿರುವ ಮೇಲೆ ದಾಳಿ, ಸುಮಾರು 18,63,500/- ಮೌಲ್ಯದ ಅಕ್ಕಿ,ವಾಹನ ಜಪ್ತಿ, ಹಾಗು 6 ಜನ ಆರೋಪಿತರ ಬಂದನ:
ಮಾನ್ಯ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್., ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರ ಆದೇಶದ ಮೇರೆಗೆ ಮತ್ತು ಶ್ರೀ ಕಾಶೀನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಮತ್ತು ಪೊಲೀಸ್ ಉಪಾಧೀಕ್ಷಕರು ಶಹಾಬಾದ ಶ್ರೀ ಎಮ.ವಿ.ಸೂರ್ಯವಂಶಿ ರವರ ಮಾರ್ಗದರ್ಶನದ ಮೇರೆಗೆ ದಿನಾಂಕ:04/12/2012 ರಂದು ಶ್ರೀ ಎಸ್. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಮತ್ತು ಅವರ ಸಿಬ್ಬಂದಿಯವರು ಹಾಗು ಚಿತ್ತಾಪೂರ ಪೊಲೀಸ್ ಠಾಣೆ ಪಿ,ಎಸ,ಐ ಹಾಗೂ ಅವರ ಸಿಬ್ಬಂದಿಯವರು ಕೂಡಿಕೊಂಡು ಶ್ರೀ ಸಿದ್ದಲಿಂಗೇಶ್ವರ ದಾಲ್ ಮಿಲ್ ದ ಮೇಲೆ ದಾಳಿ ಮಾಡಿ, ಖೊಟ್ಟಿ ದಾಖಲಾತಿಗಳನ್ನು ಸೃಷ್ಠಿ ಮಾಡಿ ಪಡಿತರ ಚೀಟಿಯ ಆಹಾರ ಧಾನ್ಯ ಸಾಗಾಣಿಕೆ ಮಾಡಿ ಬೇರೆಯವರಿಗೆ ಮಾರಾಟ ಮಾಡುತ್ತಿರುವ ಆರೋಪಿತರ ಮೇಲೆ ದಾಳಿ ಮಾಡಿದ್ದು, ಲಾರಿ ನಂಬರ ಕೆ.ಎ.32 ಬಿ-3290 ನೇದ್ದರ ಚಾಲಕ ಮಂಜುನಾಥ ತಂದೆ ಚನ್ನವೀರಪಾ ಗಡೇದವರ ಸಾ: ರಿಕ್ಕಿನ ಆಲೂರ ತಾ: ಆಳಂದ, ಶ್ರೀಕಾಂತ ತಂದೆ ಭೀಮಸೇನ,ರಾಮು ತಂದೆ ಹಣಮಂತ ಬೋವಿ, ಸಂಜೀವ ತಂದೆ ಪ್ರಭು,ಶಿವರಾಯ ತಂದೆ ಹಣಮಂತ ವಡ್ಡರ, ರಾಜು ತಂದೆ ಸಾಬಯ್ಯ ಸಾ: ಎಲ್ಲರೂ ಚಿತ್ತಾಪೂರ ಇವರನ್ನು ವಶಕ್ಕೆ ತೆಗೆದುಕೊಂಡು ಇನ್ನೂ ಓಡಿ ಹೋದವರ ಹೆಸರು ವಿಚಾರಿಸಲಾಗಿ ಶಾಂತಕುಮಾರ ಹತ್ತಿ, ಮತ್ತು ಸೋಮಶೇಖರ ಪಾಟೀಲ ಬೆಳಗುಂಪಾ ಅಂತಾ ತಿಳಿದು ಬಂದಿರುತ್ತದೆ. ಸದರಿ ಲಾರಿ ಕೆ.ಎ.32 ಬಿ 3290 ನೇದ್ದು ಅ:ಕಿ: 12 ಲಕ್ಷ ರೂ. ಮತ್ತು ಅದರಲ್ಲಿದ್ದ  25 ಕೆ.ಜಿ ಅಕ್ಕಿ ತುಂಬಿದ 680 ಚೀಲಗಳು ಅದರ ಮೇಲೆ ಅನ್ನಪೂರ್ಣ ಗೋಲ್ಟ ಅಂತಾ ಬರೆದಿದ್ದು  ಅ:ಕಿ: 4,08,000-00 ರೂ ಹಾಗೂ ಗೋದಾಮಿನಲ್ಲಿದ್ದ 25 ಕೆ,ಜಿ ಅಕ್ಕಿ 290  ಚೀಲಗಳು ಅ:ಕಿ:2,17500-00 ರೂ . ಮತ್ತು 25 ಕೆ,ಜಿ.ತುಂಬಿದ 10 ಗೋದಿ ಚೀಲಗಳು ಅ:ಕಿ:5000-00 ರೂ , 50 ಕೆಜಿಯ ಅಕ್ಕಿ ತುಂಬಿದ 12 ಚೀಲ ಕಿಮ್ಮತ್ತು 18000-00 ರೂ ಚೀಲದ ಮೇಲೆ ಬಿಳಿ ಬಟ್ಟೆಯಲ್ಲಿ ಕೆ.ಎಫ.ಸಿ.ಎಸ. ಇಂಡಿಯಾ ಅಂತಾ ಚೀಟಿ ಹೊಲೆದಿದ್ದು ಇರುತ್ತದೆ ಮತ್ತು ಒಂದು ತೂಕದ ಯಂತ್ರ ಹಾಗೂ ಕಾಟ ಕಿಮ್ಮತ್ತು 15,000-00 ರೂ ಮತ್ತು 2 ಬಂಡಲ ಖಾಲಿ ಚೀಲಗಳು ಅದರ ಮೇಲೆ ಅನ್ನಪೂರ್ಣ ಗೋಲ್ಢ ಅಂತಾ ಬರೆದಿದ್ದು ಹಾಗೂ 2 ಖಾಲಿ ಚೀಲ ಅದರ ಮೇಲೆ ಗೌರಮೆಂಟ ಆಫ ಪಂಜಾಬ ಅಂತಾ ಬರೆದಿದ್ದು ಹೀಗೆ ಒಟ್ಟು 18,63,500=00 ರೂ. ಸದರಿಯವುಗಳನ್ನು ಪಂಚರ ಸಮಕ್ಷಮ  ಜಪ್ತಿ ಮಾಡಿಕೊಂಡು ಶ್ರೀ ಎಸ್. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕರವರು ತಮ್ಮ ವರದಿಯೊಂದಿಗೆ ಮತ್ತು 6 ಜನ ಆರೋಪಿತರನ್ನು ಠಾಣೆಗೆ ಹಾಜರಪಡಿಸಿದ್ದರಿಂದ ಚಿತ್ತಾಪೂರ ಪೊಲೀಸ್ ಠಾಣೆ ಗುನ್ನೆ ನಂ:118/2012 ಕಲಂ, 406, 409, 420, 468, ಐಪಿಸಿ ಸಂಗಡ 3,7, ಇ.ಸಿ. ಆಕ್ಟ 1955 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: