POLICE BHAVAN KALABURAGI

POLICE BHAVAN KALABURAGI

07 December 2012

GULBARGA DISTRICT REPORTED CRIMES


ಕೊಲೆಗೆ ಪ್ರಯತ್ನ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ನಾನು ಸುಮಾರು 10 ವರ್ಷಗಳ ಹಿಂದೆ ನನ್ನ ಗಂಡ ಪಂಚಯ್ಯ ರಾಜನಳ್ಳಿ ಹಾಗು 6 ಜನ ಮಕ್ಕಳನ್ನು ಬಿಟ್ಟು ಶ್ರೀನಿವಾಸ ತಂದೆ ಶಿವಶರಣಪ್ಪ ಚಿಂಚನಸೂರ ಇತನೊಂದಿಗೆ ವಾಸಗಿರುತ್ತೆನೆ. ನಾನು ಮತ್ತು ಶ್ರೀನಿವಾಶ ಇಬ್ಬರು ಗಂಡ ಹೆಂಡತಿಯರಂತೆಯೇ ವಾಸಿಸುತ್ತಿದ್ದೆವು. ಕೆಲವು ವರ್ಷ ಇಬ್ಬರು ಚನ್ನಾಗಿದ್ದೆವು, ನಂತರ ಶ್ರೀನಿವಾಸನು ಪ್ರತಿ ದಿವಸ ಕುಡಿಯಲು ಹಣ ಕೇಳುತ್ತಿದ್ದು, ನಾನು ಕುಡಿಯಲು ಹಣ ಕೊಡದಿದ್ದಾಗ ಹೊಡೆಯುತ್ತಿದ್ದನು.ಅದೇ ರೀತಿ ದಿನಾಂಕ:06-12-2012 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಕುಡಿಯಲು ಹಣ ಕೇಳಿದನು. ಆಗ ನಾನು ನನ್ನ ಹತ್ತಿರ ಹಣ ಇಲ್ಲಾ ಅಂತ ಅಂದಾಗ, ಶ್ರೀನಿವಾಸ ಇತನು ಸೀಮೆ ಎಣ್ಣೆ ತೆಗೆದುಕೊಂಡು, ನನ್ನ ಮೈಮೇಲೆ ಹಾಕಿ ಬೆಂಕಿ ಹಚ್ಚಿದ್ದಾನೆ ಇತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಶ್ರೀಮತಿ ಮಹಾದೇವಿ ಗಂಡ ಪಂಚಯ್ಯ ರಾಜನಳ್ಳಿ ವ|| 35, ಸಾ|| ಜಾ|| ಜಂಗಮ, ಉ|| ಟೆಂಗಿನಕಾಯಿ ವ್ಯಾಪಾರ, ಸಾ|| ಮಾನೆ ರವರ ಮನೆಯಲ್ಲಿ ಬಾಡಿಗೆ, ಲಾಲಗೇರಿ ಮಜ್ಜಿದ ಹತ್ತಿರ ಗುಲಬರ್ಗಾ ರವರು ವೈಧ್ಯಾಧಿಕಾರಿಗಳ ಮತ್ತು ಎ.ಎಸ.ಐ ಮಹಿಳಾ ಠಾಣೆಯವರ ಸಮ್ಮುಖದಲ್ಲಿ ಹೇಳೀಕೆ ನೀಡಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:92/2012 ಕಲಂ 307 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:05-12-2012 ರಂದು ನನ್ನ ಮೊಮ್ಮಗಳ ಜವಳ ಕಾರ್ಯಕ್ರಮಕ್ಕೆ ನನ್ನ ಮಗ ಸಂತೋಷಕುಮಾರ ಹಾಗೂ ಇತನ ಸಂಗಡ ರಾಘು ತಂದೆ ಈಶ್ವರಪ್ಪ ಸೇಡಂ ಇವರು ಟಿವಿಎಸ್ ವಿಕ್ಟರ್ ಮೋಟಾರು ಸೈಕಲ್ ನಂ:ಕೆಎ.-28/ಎಲ್-4909 ನೇದ್ದರ ಮೇಲೆ ಹಾಗೂ ಅವರ ಜೊತೆ ಇನ್ನೊಂದು ಮೋಟಾರು ಸೈಕಲ್ ಮೇಲೆ ನಮ್ಮ ಸಂಭಂದಿಕರಾದ ನರೇಶ ತಂದೆ ಜನಾರ್ಧನ ರಜಪೂತ, ಹಾಗೂ ರಘುವೀರಸಿಂಗ್ ತಂದೆ ರತನಸಿಂಗ್ ರಜಪೂತ ಸಾ||ಬಂಬುಬಜಾರ ಗುಲಬರ್ಗಾ ವರು ಸೇಡಂ ದಿಂದ ಶಹಾಬಾಕ್ಕೆ ಹೋಗಿದ್ದರು, ಸಾಯಂಕಾಲ 7-00 ಗಂಟೆ ಸುಮಾರಿಗೆ ನನ್ನ ಮಗನ ಜೊತೆ ಶಹಾಬಾದಕ್ಕೆ ಹೋಗಿದ್ದ ರಘುವೀರಸಿಂಗ್  ಇತನು ನಾನು ಮತ್ತು ನಿಮ್ಮ ಮಗ ಸಂತೋಷ ಹಾಗೂ ಎಲ್ಲರೂ ಕೂಡಿ ಶಹಾಬಾಕ್ಕೆ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಸೇಡಂಕ್ಕೆ ಮೋಟಾರು ಸೈಕಲ್ ಮೇಲೆ ಬರುತ್ತಿರುವಾಗ ಗುಲಬರ್ಗಾ-ಸೇಡಂ ಮುಖ್ಯ ರಸ್ತೆಯ ಹೋರವಲಯದ ದಾನಿ ಬಾಬಿ ಲೇಔಟ್ ಹತ್ತಿರ ಸಂತೋಷ ಇತನ ಮೋಟಾರ ಸೈಕಲಗೆ ಎದುರುಗಡೆಯಿಂದ ಕ್ರೂಜರ್ ನಂ-ಕೆಎ-36/ಎಮ್-6279 ನೇದ್ದರ ಚಾಲಕ ಸೇಡಂ ಕಡೆಯಿಂದ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಸಂತೋಷ ಮೋಟಾರ ಸೈಕಲಗೆ ಅಪಘಾತ ಪಡಿಸಿದನು. ನಾವು ಅಪಘಾತವನ್ನು ನೋಡಿ ಸಂತೋಷಕುಮಾರ ಇತನಿಗೆ ನೋಡಲು ಎದೆಯ ಹತ್ತಿರ ಭಾರಿ ರಕ್ತಗಾಯ, ಎರಡೂ ಮೊಳಕಾಲಿಗೆ ತರಚಿದಗಾಯ ಎಡಚಪ್ಪೆಗೆ, ಎಡಗೈ ಹತ್ತಿರ ಭಾರಿ ರಕ್ತಗಾಯ ಎರಡೂ ಮೊಳಕಾಲುಗಳಿಗೆ ತರಚಿದಗಾಯ, ಎಡಮೊಳಕೈಗೆ ಭಾರಿ ಗುಪ್ತಗಾಯ, ತಲೆಯ ಎಡಭಾಗಕ್ಕೆ ಭಾರಿ ರಕ್ತಗಾಯ ಹಾಗೂ ಬಲಗೈ ಮುಂಗೈಗೆ ತರಚಿದ ಗಾಯಗಳಾಗಿದ್ದು ಹಾಗೂ ಸಂತೋಷನ ಜೊತೆಯಲ್ಲಿದ್ದ ರಾಘುವಿಗೆ ಅಲ್ಲಲ್ಲಿ ಸಣ್ಣಪುಟ್ಟ ಗಾಯಗಳಾಗಿರುತ್ತವೆ.ಅದೇ ಜೀಪಿನಲ್ಲಿ ಸಂತೋಷಕುಮಾರನಿಗೆ ಉಪಚಾರ ಕುರಿತು ಗುಲಬರ್ಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಿಂದ ಸೋಲಾಪೂರ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ದಿನಾಂಕ:06-12-2012 ರಂದು ಬೆಳಗ್ಗೆ 5-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ನನ್ನ ಮಗನ ಮೋಟಾರ ಸೈಕಲಗೆ ಅಪಘಾತ ಪಡಿಸಿದ ಕ್ರೂಜರ್ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ಶ್ರೀ. ಬಲರಾಮಸಿಂಗ್ ತಂದೆ ಭವಾನಿಸಿಂಗ್ ತಿವಾರಿ ಸಾ:ಔರಾದ ಬಿ, ಹಾ|||| ಬ್ರಹ್ಮಣಗಲ್ಲಿ ಸೇಡಂ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:240/2012 ಕಲಂ,279,337,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: