POLICE BHAVAN KALABURAGI

POLICE BHAVAN KALABURAGI

26 December 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಸುದರ್ಶನಕುಮಾರ ತಂದೆ ಸಾಂಸೊನ್ ಸಾ|| ಪ್ಲಾಟ ನಂ. 37/ಎ ದತ್ತನಗರ ಎನ.ಜಿ.ಓ ಕಾಲೋನಿ ಗುಲಬರ್ಗಾ ರವರು ನನ್ನ ಪರಿಚಯದವರಾದ ಬೆಂಜಮಿನ್ ತಂದೆ ಸುಮಿತ್ರ ಎಂಬುವವರು ಶಕ್ತಿನಗರದಲ್ಲಿ ವಾಸವಾಗಿದ್ದು, ಅವರ ಹೆಂಡತಿ ಸುಲೋಚನಾ ರವರು ದಿನಾಂಕ:18-19/12/2012 ರಂದು ಬೆಂಗಳೂರಕ್ಕೆ ಹೋಗಿದ್ದು ದಿನಾಂಕ:24/12/2012 ರಂದು ಬೆಂಜಮೀನ್ ರವರು ಆಧೋನಿ ಆಂದ್ರಪ್ರದೇಶಕ್ಕೆ ಹೋಗಿರುತ್ತಾರೆ.  ಆಂದ್ರ ಪ್ರದೇಶಕ್ಕೆ ಹೋಗುವ ಕಾಲಕ್ಕೆ ಮನೆಗೆ ಹೋಗಿ ಬರಲು ತಿಳಿಸಿದ್ದರು. ಅದರಂತೆ ನಾನು ಅವರ ಮನೆಗೆ ಹೋಗಿ ರಾತ್ರಿ ವೇಳೆ ಲೈಟ ಹಾಕಿ ಬರುತ್ತಿದ್ದೆ. ದಿನಾಂಕ:26/12/2012 ರಂದು ಮುಂಜಾನೆ ಬೆಂಜಮೀನ್ ರವರ ಮನೆಗೆ ಹೋಗಿ ನೋಡಲು ಗೇಟಿಗೆ ಹಾಕಿದ ಕೀಲಿ ಆಗೆ ಇದ್ದು ಶಿಟೌಟದ ರೂಮ್ ಕೀಲಿ ಮುರಿದಿದ್ದು ನೋಡಿ  ಗಾಬರಿಗೊಂಡು ನೋಡಲು ಹಾಲದಲ್ಲಿ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಬೆಡ ರೂಮಿನಲ್ಲಿ ಹೋಗಿ ನೋಡಲು ಎರಡು ಹಲಮಾರಿಗಳು ತೆರೆದಿದ್ದು ಆಲಮಾರಿಯಲ್ಲಿಟಿದ್ದ ಬಂಗಾರದ ಮಂಗಳಸೂತ್ರ 50 ಗ್ರಾಂ,ಬಂಗಾರದ ನಕ್ಲೆಸ 30 ಗ್ರಾಂ,ಬಂಗಾರದ ನಾಲ್ಕು ಉಂಗುರ ತಲಾ 5 ಗ್ರಾಂ ಒಟ್ಟು  20 ಗ್ರಾಂ,ಬಂಗಾರದ 15 ಗ್ರಾಂ ಸೌಸೆಕಾಯಿ ಸರ,ಬಂಗಾರದ ಎರಡು ಬಳೆ ಒಟ್ಟು 10 ಗ್ರಾಂ. ಹೀಗೆ ಒಟ್ಟು 125 ಗ್ರಾಂ. ಬಂಗಾರ ಅ.ಕಿ 3,75,000/- ರೂ. ಕಳುವಾಗಿದ್ದು ಮನೆಯವರು ಬಂದ ನಂತರ ಇನ್ನಿತರ ಸಾಮಾನುಗಳು ಕಳುವಾದ ಬಗ್ಗೆ ಗೊತ್ತಾಗುತ್ತದೆ ದಿನಾಂಕ:25-26/12/2012 ರ ಮಧ್ಯರಾತ್ರಿ ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:119/2012 ಕಲಂ 457,380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಪೊಲೀಸ್ ಪೇದೆಗಳ ಕರ್ತವ್ಯಕ್ಕೆ ಅಡೆತಡೆ ಮಾಡಿದ ಬಗ್ಗೆ:
ಚೌಕ ಪೊಲೀಸ್ ಠಾಣೆ:ಶ್ರೀ ಗೋಪಾಲ ಪೊಲೀಸ್ ಪೇದೆ ಚೌಕ ಪೊಲೀಸ್ ಠಾಣೆ ಗುಲಬರ್ಗಾ ರವರು ನಾನು ಮತ್ತು ಸುನೀಲ ಪಿಸಿ ಕೂಡಿಕೊಂಡು ಬೀಟ ನಂ. 6ರಲ್ಲಿ ರಾತ್ರಿ ಗಸ್ತು ಕರ್ತವ್ಯ ಕುರಿತು ಠಾಣೆಯಿಂದ ದಿನಾಂಕ:25.12.12ರಂದು 23-00 ಗಂಟೆಗೆ ಹೋರಟು ಬೀಟ ಮಾಡುತ್ತಾ ಮಧ್ಯರಾತ್ರಿ 00-30 ಗಂಟೆಗೆ ಸಂಗಮ ಟಾಕೀಜ ಹತ್ತಿರ ಇರುವ ದ್ವಾರಕಾ ಹೋಟೆಲ ಮುಂದುಗಡೆ ಹೋಗುತ್ತಿದ್ದಾಗ ಅಲ್ಲಿ 4 ಜನ ರಸ್ತೆಯ ಮೇಲೆ ನಿಂತುಕೊಂಡಿದ್ದರಿಂದ ನಾವು ಅವರಿಗೆ ವಿಚಾರಿಸಿ ರಾತ್ರಿ ಬಹಳಷ್ಟು ಆಗಿದೇ ಮನೆಗೆ ಹೋಗಿರಿ ಅಂತ ಹೇಳಿದಕ್ಕೆ ಅವರಲ್ಲಿ ಒಬ್ಬನು ಅವಾಚ್ಯವಾಗಿ ಬೈದು, ನಮಗೇನು ಕೇಳುತ್ತೀರಿ ಅಂತಾ ಮಾತಾಡಿ ನನ್ನ ಸಂಗಡ ಇದ್ದ ಸುನೀಲ ಪೊಲೀಸ್ ಪೇದೆಯ ಸಮವಸ್ತ್ರ ಹಿಡಿದು ಎಳೆದಾಡುತ್ತಿದ್ದು, ನಾನು ಬಿಡಿಸಲು ಹೋದಾಗ ಇನ್ನಿಬ್ಬರು ಬಂದು ನನಗೂ ಸಹ ಹಾಗೆ ಮಾಡಿ ಮಾಡಿ ನಾವು ಇಲ್ಲಿಂದ ಹೋಗುವದಿಲ್ಲ ಏನು ಮಾಡುತ್ತಿರಿ ಅಂತ ಅವಾಚ್ಯವಾಗಿ ಬೈದಿದ್ದು ಮತ್ತೊಬ್ಬನು ತನ್ನ ಹತ್ತಿರವಿದ್ದ ಚಾಕು ತೋರಿಸಿ ನೀವು ಇಲ್ಲಿಂದ ಹೋದರೆ ಸರಿ ಇಲ್ಲದಿದ್ದರೆ ನಿಮಗೆ ಹೊಡೆದು ಖಲಾಸ ಮಾಡುತ್ತೇವೆ ಅಂತ ಕರ್ತವ್ಯ ನಿರ್ವಹಿಸಲು ಅಡೆತಡೆಯನ್ನುಂಟು ಮಾಡಿರುತ್ತಾರೆ. ಸದರಿಯವರ ಹೆಸರು ಬಂಡಯ್ಯಾ ತಂದೆ ಸಾತಲಿಂಗಯ್ಯಾ ಮಠಪತಿ ವ: 25 ವರ್ಷ ಉ: ಖಾನಾವಳಿ ವ್ಯಾಪಾರ ಜಾತಿ: ಜಂಗಮ ಸಾ: ಸಂಗಮ ಟಾಕೀಜ ಎದುರುಗಡೆ ಗುಲಬರ್ಗಾ, ಬಸವರಾಜ ತಂದೆ ರಾಜಶೇಖರ ತಳವಾರ ವ: 21 ವರ್ಷ ಜಾತಿ: ಕಬ್ಬಲಿಗಾ ಸಾ:ಗಂಗಾ ನಗರ ಗುಲಬರ್ಗಾ, ಹರೀಶ ತಂದೆ ದಶರಥಸಿಂಗ ತಿವಾರಿ ವ: 24 ವರ್ಷ ಜಾತಿ: ರಜಪೂತ ಉ: ಬೇಕಾರ ಸಾ:ಶಹಾಬಜಾರ ಕಟಗರಪೂರ ಗುಲಬರ್ಗಾ ಅಂತಾ ನಂತರ ನಮಗೆ ತಿಳಿದಿರುತ್ತದೆ. ಓಡಿ ಹೋದವನ ಹೆಸರು ನಮಗೆ ಗೊತ್ತಾಗಿರುವದಿಲ್ಲ ನೋಡಿದರೆ ಗುರ್ತಿಸುತ್ತೆನೆ ಅಂತಾ ಪೊಲೀಸ್ ಪೇದೆ ರವರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:217/2012 ಕಲಂ, 341, 353, 504, 506 (2) 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ.   

No comments: