POLICE BHAVAN KALABURAGI

POLICE BHAVAN KALABURAGI

29 December 2012

GULBARGA DISTRICT REPORTED CRIMES


35 ದಿವಸಗಳ ಕಂದನನ್ನು  ತಾಯಿ ಮಡಿಲಿನಿಂದ  ಅಪಹರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ ಫರೀದಾ ಗಂಡ ನಜೀರೊ @ ನಜೀರ ವ: 38 ವರ್ಷ ಉ:ಕೂಲಿ ಕೆಲಸ ಸಾ: ರೆಹಮತ ನಗರ ಗುಲಬರ್ಗಾ  ರವರು  ನನ್ನಗೆ 6 ಜನ ಮಕ್ಕಳಿದ್ದು ಅದರಲ್ಲಿ 2 ಹೆಣ್ಣು 4 ಗಂಡು ಮಕ್ಕಳಿರುತ್ತಾರೆ. ಅದರಲ್ಲಿ ನನ್ನ ಕೊನೆಯ ಗಂಡು ಮಗು 35 ದಿವಸಗಳಿದ್ದು ದಿನಾಂಕ:26.12.2012 ರಂದು ಮದ್ಯಾಹ್ನ 3.00 ಗಂಟೆ ಸುಮಾರಿಗೆ ಇಬ್ಬರು ಬುರಖಾ ಹಾಕಿದ ನಮ್ಮ ಜಾತಿಯ  ಹೆಣ್ಣು ಮಕ್ಕಳು ನಮ್ಮ ಮನೆಗೆ ಬಂದು ಅವರಲ್ಲಿ ಕೆಂಪು ದಪ್ಪ ಇದ್ದಳು ನನಗೆ ನೀನು ಬಡವಳು ಇದ್ದಿ ಎರಡು ಹೆಣ್ಣು ಮತ್ತು ನಾಲ್ಕು ಗಂಡು ಮಕ್ಕಳಿದ್ದು ಈ ಕೊನೆಯ ಮಗುವಿಗೆ ನಾಮಕರಣ  ಮಾಡಲು ಆಹಾರ ಧಾನ್ಯ ನಾವು ಕೊಡಿಸುತ್ತೇವೆ, ನಮ್ಮ ಜೊತೆ ಮಾರ್ಕೆಟಗೆ ನಡೆ ನಿನ್ನಗೆ ಮತ್ತು ನಿನ್ನ ಮಗುವಿಗೆ ಬಟ್ಟೆ ಬರೆ ಆಹಾರ ಧಾನ್ಯ ಕೊಡಿಸುತ್ತೇವೆ ಅಂತಾ ನನಗೆ ನನ್ನ ಮಗುವಿನೊಂದಿಗೆ ಆಟೋದಲ್ಲಿ ಕೂಡಿಸಿಕೊಂಡು ಐವಾನ-ಶಾಹಿ ಮಾರ್ಗವಾಗಿ ಸುಪರ ಮಾರ್ಕೆಟಿಗೆ ಕರೆದುಕೊಂಡು ಹೋಗಿ ಆಟೋದಿಂದ ಇಳಿದು ನನ್ನ ಮಗುವನ್ನು ಕೆಂಪಗೆ ದಪ್ಪಗೆ ಇದ್ದವಳು ನಿನ್ನ ಮಗುವನ್ನು ನನ್ನ ಕೈಯಲ್ಲಿ ಕೊಡು ನೀನು ಆಹಾರ ಧಾನ್ಯ ಚೀಲ್ ತೆಗೆದುಕೊ  ಅಂತಾ ಹೇಳಿದಂತೆ ನಾನು ಕೆಂಪ್ಪಗೆ ಇದ್ದ ಹೆಣ್ಣ ಮಗಳಿಗೆ ನನ್ನ ಮಗುವಿಗೆ ಅವರ ಕೈಯಲ್ಲಿ ಕೊಟ್ಟೆನು. ಇಲ್ಲಿಯೇ ಇರುವ ಪುಟಾಣಿ ಗಲ್ಲಿಯ ಒಂದು ದುಕಾನ ಹತ್ತಿರ ನನ್ನನ್ನು ನಿಲ್ಲಲು ಹೇಳಿ ನೀನು ರೇಶನ ತೆಗೆದುಕೋ ಅಂತಾ ಹೇಳಿ ಖರ್ಚಿಗೆ 200 ರೂ ಕೊಟ್ಟರು. ಕಪ್ಪಗೆ ತಳಗೆ ಇದ್ದ ಹೆಣ್ಣು ಮಗಳು ಮತ್ತು ಕೆಂಪಗೆ ಇದ್ದ ಹೆಣ್ಣು ಮಗಳು ನಾನು ಆಟೋ ತೆಗೆದುಕೊಂಡು ಬರುತ್ತೇವೆ ನೀನು ಇಲ್ಲಿಯೇ ರೇಶನ ತೆಗೆದಿಕೋ ಅಂತಾ ಹೇಳಿ ಅಲ್ಲಿಂದ ಇಬ್ಬರು ನನ್ನ 35 ದಿವಸದ ಮಗುವಿನೊಂದಿಗೆ ಹೊರಟು ಹೋದರು. ಸುಮಾರು ಸಾಯಂಕಾಲ 5.00 ಗಂಟೆಯಾದರು ಅವರಿಬ್ಬರೂ ಆಟೋ ತರಲು ಹೋದವರು ಬರದೇ ಇದ್ದುದ್ದರಿಂದ ನಾನು ಮನೆಗೆ ಬಂದಿದ್ದು ನಾನು ನಮ್ಮ ಓಣಿಯ ಜನರಿಗೆ ಅಪಹರಣದ ಬಗ್ಗೆ ತಿಳಿಸಿದ್ದು.ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ. ನಮ್ಮ ಜಾತಿ ಹೆಣ್ಣು ಮಕ್ಕಳಾದ ನನ್ನ ಮಗುವನ್ನು ಅಪಹರಣ ಮಾಡಿದ ಕೆಂಪು ಮತ್ತು ಕಪ್ಪು ಬಣ್ಣದ ಹೆಣ್ಣು ಮಕ್ಕಳಿಬ್ಬರಿಗೆ ಪತ್ತೆ ಹಚ್ಚಬೇಕು ಅವರ ಮೇಲೆ ಕಾನೂನು ಕ್ರಮ್ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:89/2012 ಕಲಂ 363.ಸಂಗಡ 34 ಐ.ಪಿ.ಸಿ ಪ್ರಕರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀದೇವಿ ಗಂಡ ಸೈಬಣ್ಣಾ ನಾಟಿಕಾರ ವ:26 ವರ್ಷ ಜಾ:ಕಬ್ಬಲಿಗ ಉ:ಮನೆಕೆಲಸ ಸಾ:ತೊನಸಳ್ಳಿ (ಎಸ್‌) ಗ್ರಾಮ ರವರು ದಿನಾಂಕ:19/06/2010 ರಂದು ತೊನಸಳ್ಳಿ (ಎಸ್‌) ಗ್ರಾಮದ ಸೈಬಣ್ಣ ಇತನೊಂದಿಗೆ ಮದುವೆಯಾಗಿದ್ದು ಮದುವೆಯಾದಾಗಿನಿಂದಲೂ ನನ್ನ  ಗಂಡ ಸೈಬಣ್ಣಾ ಇತನು ತನ್ನ ತಾಯಿ ಶರಣಮ್ಮಾ ಹಾಗೂ ಅಕ್ಕಂದಿರಾದ ಸಾತಮ್ಮಾ, ಚಂದಮ್ಮಾ ಇವರ ಪ್ರಚೋದನೆಯಿಂದ ಅಡಿಗೆ ಮಾಡಲು ಬರುವದಿಲ್ಲಾ, ಮನೆ ಸ್ವಚ್ಛವಾಗಿ ಇಡಲು ಬರುವದಿಲ್ಲಾ ಅಂತಾ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದು, ನಾನು ಜೀವಂತವಿರುವಾಗಲೆ ನನ್ನ ಗಂಡನು ಹೂನಳ್ಳಿ ಗ್ರಾಮದ ದೇವಿಂದ್ರಪ್ಪಾ ಇವರ ಮಗಳಾದ ಅಂಬಿಕಾ ಇವಳ ಜೊತೆ ಎರಡನೇ ಮದುವೆಯಾಗಿರುತ್ತಾನೆ. ದೇವಿಂದ್ರಪ್ಪಾ ಮತ್ತು ಆತನ ಹೆಂಡತಿ ಬಸಮ್ಮಾ ಹಾಗೂ ಭಾವ ಮೈದುನನಾದ ಶರಣಪ್ಪಾ ರವರಿಗೆ ಗೊತ್ತಿದ್ದರೂ ಕೂಡಾ ತನ್ನ ಮಗಳನ್ನು ನನ್ನ ಗಂಡನಿಗೆ ಕೊಟ್ಟು ಎರಡನೆ ಮದುವೆ ಮಾಡಿರುತ್ತಾರೆ.ದಿನಾಂಕ:26/12/2012 ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ಶಹಾಬಾದದ ಬಂಜಾರ ನಗರದಲ್ಲಿರುವ ಬಾಡಿಗೆ ಮನೆಯಲ್ಲಿ ನಾನು ಮತ್ತು ನನ್ನ ತಾಯಿ ತಿಪ್ಪಮ್ಮಾ ಮನೆಯಲ್ಲಿದ್ದಾಗ ನನ್ನ ಗಂಡನು ಬಂದು ಅವಾಚ್ಯವಾಗಿ ಬೈದು ವಿರುದ್ದ ದೂರು ಕೋಡಲು ಪೊಲೀಸ ಸ್ಟೇಷನಗೆ ಹೋಗುತ್ತಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:170/2012 ಕಲಂ:323,498(ಎ),494,109,504,506 ಸಂ:149 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗಂಡನು ಎರಡನೆ ಮದುವೆಯಾಗಿದ್ದಕ್ಕೆ ಹೆಂಡತಿಯಿಂದ ಹಲ್ಲೆ   :
ಶಹಾಬಾದ ನಗರ ಪೊಲೀಸ ಠಾಣೆ:ದಿನಾಂಕ:26/12/2012 ರಂದು ನನ್ನ ಹೆಂಡತಿ ಶ್ರೀದೇವಿ ಹಾಗೂ ಅತ್ತೆ ತಿಪ್ರಮ್ಮಾ ಇವರು ಜಗಳ ತೆಗೆದು ಕೆಟ್ಟದಾಗಿ ಬೈದು, ಚಪ್ಪಲಿ ಮತ್ತು ಕೈಗಳಿಂದ ಹೊಡೆದಿರುತ್ತಾರೆ ಅಂತಾ ಶ್ರೀ ಸಾಯಿಬಣ್ಣಾ ತಂದೆ ವಜೀರಪ್ಪಾ ನಾಟಿಕಾರ ವ:35 ಸಾ:ತೊನಸಳ್ಳಿ (ಎಸ್‌) ರವರು ಅರ್ಜಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:169/2012 ಕಲಂ, 341,323,355,504,506 ಸಂ:34  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅತ್ಯಾಚಾರ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ. ದೇವಿಂದ್ರಪ್ಪ ತಂದೆ ಭೀಮಶಪ್ಪ ಗಂಟೇರ ಸಾ:ಹಂದರಕಿ ಗ್ರಾಮ ತಾ:ಸೇಡಂ ರವರು ನನಗೆ ನಾಲ್ಕು ಜನ ಹೆಣ್ಣುಮಕ್ಕಳು ಮೂರು ಗಂಡು ಮಕ್ಕಳು ಇದ್ದು, ನನ್ನ ಮಗಳು ಕೂಲಿ ಕೆಲಸಕ್ಕೆಂದು ಬೇರೆಯವರ ಹೊಲಕ್ಕೆ ಹೋಗುತ್ತಿರುತ್ತಾಳೆ. ನನ್ನ ಮಗಳು ಕೆಲಸ ಮಾಡುವ ಹೊಲಗಳಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ಸಾಬಣ್ಣ ತಂದೆ ಲಾಲಪ್ಪ ಪುಜಾರಿ ವ|| 24 ವರ್ಷ ಸಾ:ಕಾಕಲವಾರ ತಾ:ಯಾದಗಿರಯವನ ಪರಿಚಯವಾಗಿರುತ್ತದೆ.ದಿನಾಂಕ:19-12-2012 ರಂದು ನನ್ನ ಮಗಳು ನಮ್ಮೂರಿನವರ ಜೊತೆ ಹತ್ತಿ ಬಿಡಿಸಲು ಅಂತ ಹೋಗಿದ್ದು, ಸಾಯಂಕಾಲ ಕೂಲಿ ಕೆಲಸದಿಂದ ಮನೆಗೆ ಬರಬೇಕಾದ ನನ್ನ ಮಗಳು ಬರದೇ ಇದ್ದಾಗ ನನ್ನ ಮಗಳ ಜೊತೆಗೆ ಹೋದವರನ್ನು  ವಿಚಾರಿಸಲು ನಾವು ಹೊಲದಿಂದ ಕೆಲಸ ಮುಗಿಸಿಕೊಂಡು ನಾವೆಲ್ಲರೂ ಮನೆಗೆ ಬರುತ್ತಿರುವಾಗ, ನಿಮ್ಮ ಮಗಳು ನೀವು ಮುಂದೆ ನಡೆಯಿರಿ ನಾನು ಆಮೇಲೆ ಬರುತ್ತೇನೆ ಅಂತ ಹೇಳಿದ್ದರಿಂದ ನಾವು ಮನೆಗೆ ಬಂದಿರುತ್ತೇವೆ ಅಂತ ತಿಳಿಸಿರುತ್ತಾರೆ. ಮನೆಯವರೆಲ್ಲರೂ ಎಲ್ಲಾ ಕಡೆ ಹುಡುಕಾಡಲಾಗಿ ನನ್ನ ಮಗಳು ಕಾಣಿಸಲಿಲ್ಲ. ದಿನಾಂಕ:26-12-2012 ರಂದು ಕಾಣೆಯಾಗಿರುತ್ತಾಳೆ ಅಂತ ಕೇಸ ಮಾಡಿರುತ್ತೆವೆ. ದಿನಾಂಕ:28-12-2012 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ಕಾಣೆಯಾದ ನನ್ನ ಮಗಳು ಇವಳು ನಮ್ಮ ಮನೆಗೆ ಬಂದು ತಿಳಿಸಿದ್ದೇನೆಂದರೆ, ದಿನಾಂಕ:19-12-2012 ರಂದು ಸಾಯಂಕಾಲ ಕೆಲಸದಿಂದ ಮನೆಗೆ ಬರುತ್ತಿದ್ದಾಗ, ಆತನು ನನ್ನ ಹತ್ತಿರ ಬಂದು ನಾನು ನಿನಗೆ ಮದುವೆ ಆಗುತ್ತೇನೆ, ನಿನಗೆ ತುಂಬಾ ಪ್ರೀತಿಸುತ್ತಿದ್ದೇನೆ, ಇಬ್ಬರೂ ಮದುವೆ ಆಗೋಣ ಅಂತ ನನಗೆ ಪುಸಲಾಯಿಸಿದಾಗ ನಾನು ಅದಕ್ಕೆ ಒಪ್ಪದೇ ಇದ್ದಾಗ, ತನು ಹೇದರಿಸಿ  ಒಂದು ಜೀಪಿನಲ್ಲಿ ನನಗೆ ಕೂಡಿಸಿಕೊಂಡು ತನ್ನ ಊರಾದ ಕಾಕಲವಾರ ಗ್ರಾಮಕ್ಕೆ ಕರೆದುಕೊಂಡು ಹೋದನು. ನನ್ನನ್ನು ಹೇದರಿಸಿ ಜಬರದಸ್ತಿಯಿಂದ ಸಂಭೋಗ ಮಾಡಿರುತ್ತಾನೆ. ಈಗಾಗಲೇ ಮದುವೆ ಆಗಿರುತ್ತದೆ. ಅವನಿಗೆ ಒಂದು ಮಗು ಇರುತ್ತದೆ ಹಾಗೂ ಅವನ ಹೆಂಡತಿ ತವರು ಮನೆಗೆ ಹೋಗಿರುತ್ತಾಳೆ ಅಂತ ನನಗೆ ಗೊತ್ತಾಗಿರುತ್ತದೆ. ತನು ಮನೆಯಿಂದ ಹೊರಗೆ ಹೋದಾಗ ನಾನು ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದಿರುತ್ತೇನೆ. ಅಂತ ನನ್ನ ಮಗಳು ನನಗೆ ತಿಳಿಸಿರುತ್ತಾಳೆ ಅಂತಾ ದೇವಿಂದ್ರಪ್ಪಾ  ರವರು ಠಾಣೆಗೆ ಬಂದು ದೂರು ಅರ್ಜಿ ಸಲ್ಲಿಸಿದ ಮೇಲಿಂದ ಠಾಣೆ ಗುನ್ನೆ ನಂ:249/2012 ಕಲಂ, 376,504,506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: