POLICE BHAVAN KALABURAGI

POLICE BHAVAN KALABURAGI

22 December 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ರಾಯಮ್ಮಾ ಗಂಡ  ಸುಭಾಶ್ಚಂದ್ರ ಜಿವಣಗಿ  ಸಾ|| ಕಪನೂರ ಗುಲಬರ್ಗಾ ರವರು ನಾನು ದಿನಾಂಕ:21-12-2012 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಭೀಮಶ್ಯಾ ಪೂಜಾರಿ ಹೊಲದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಮನೆಯ ಕಡೆಗೆ ಹೊರಟಾಗ ಬಂಡೆಪ್ಪ ಬಾಚನಳ್ಳಿ ಇವರ ಅಂಗಡಿ ಎದುರುಗಡೆ ಇರುವ ರೋಡ ಕ್ರಾಸ್ ಮಾಡುತ್ತಿರುವಾಗ ಬಜಾಜ ಬಾಕ್ಸರ ಕೆಎ 32 ಕ್ಯೂ 1725 ನೇ ದ್ದರ ಚಾಲಕ ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ನನ್ನ ಬಲಗಾಲಿಗೆ ಅಪಘಾತ ಪಡಿಸಿದ್ದರಿಂದ ಭಾರಿಗಾವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 422/12 ಕಲಂ 279, 338 ಐಪಿಸಿ ಸಂ. 187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಚಿತ್ತಾಪೂರ ಪೊಲೀಸ್ ಠಾಣೆ:ಗೋದಾವರಿ ಗಂಡ ಮರೆಪ್ಪಾ ಮರತೂರ ಸಾ|| ಭಾಗೋಡಿ ತಾ|| ಚಿತ್ತಾಪೂರ ರವರು ನಾವು ದಿನಾಂಕ.21/12/2012 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಜಗದೇವಪ್ಪ ತಂದೆ ಸಿದ್ರಾಮಪ್ಪ ಬಾಸಬಾ ರವರ ಟಂಟಂ ನಂ-ಕೆಎ-33-4491 ನೇದ್ದರಲ್ಲಿ ನಮ್ಮೂರಿನ ಅಯ್ಯಮ್ಮ ಚವ್ಹಾಣ, ಶರಣಪ್ಪ ಹೆಡಗಿ, ದ್ರೌಪತಿ ಏರಿ, ಶಿವಮ್ಮ ಕುದರಿ, ಸಾಬವ್ವ ಬೆಳಗುಂಪಿ, ಸರಸ್ವತಿ ನಾಟಿಕಾರ. ರತ್ನಮ್ಮ ಚಾಕರಿ, ಕಸ್ತೂರಿಬಾಯಿ ಏರಿ ಗೌರಮ್ಮ ಕೋಡದೂರ, ವೀಠಬಾಯಿ ಹೆಡಗಿರವರು ಕೂಡಿಕೊಂಡು ಟಂಟಂ.ಗಾಡಿಯಲ್ಲಿ ಕುಳಿತುಕೊಂಡಿದ್ದು ನಾನು ಆಸ್ಪತ್ರೆಗೆ ಹೋಗುವ ಕೆಲಸದಲ್ಲಿದ್ದು, ಉಳಿದವರೆಲ್ಲರೂ ಸ್ತ್ರಿ-ಶಕ್ತಿ ವಿಜಯಲಕ್ಷಿ ಸಂಘದ ತರಬೇತಿ ಕುರಿತು ಹೋಗುವವರಿದ್ದು,ಟಂಟಂ ಗಾಡಿಯ ಚಾಲಕ ಅತೀವೇಗ ಹಾಗು ನಿಸ್ಕಾಳಿಜೀತನದಿಂದ ನಡೆಸಿಕೊಂಡು ಹೋಗಿ ಭಾಗೋಡಿ ಮತ್ತು ಮೂಡಬೂಳ ಗ್ರಾಮದ ನಡುವೆ ಮರಗಮ್ಮ ಗುಡಿಯ ಹತ್ತಿರ ರೋಡಿನಲ್ಲಿ ಪಲ್ಟಿಮಾಡಿದ್ದರಿಂದ ನಾವೆಲ್ಲರೂ ಕೆಳಗೆ ಬಿದ್ದೆವು, ನನಗೆ ಬಲಗೈ ಮುಂಗೈಯ ಹತ್ತಿರ ರಕ್ತಗಾಯವಾಯಿತು ಮೇಲ್ಕಂಡವರಿಗೆಲ್ಲ ಸಾಧಾ ಮತ್ತು ಭಾರಿ ಗಾಯಗಳಾಗಿರುತ್ತವೆ. ಇನ್ನೂ 3-4 ಜನರು ಇದ್ದು ಅವರಿಗೆ ಕೂಡಾ ಸಣ್ಣಪುಟ್ಟ ಗಾಯಗಳಾಗಿರುತ್ತವೆ. ಭಾರಿ ಗಾಯ ಹೊಂದಿದವರಿಗೆ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ  ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆ.ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:121/2012 ಕಲಂ, 279,337,338 ಐ.ಪಿ.ಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು, ಉಪಚಾರದಲ್ಲಿದ್ದ ಗೌರಮ್ಮ ಗಂಡ ಮಲ್ಕಪ್ಪ ಕೋಡದೂರ ಮತ್ತು ದ್ರೌಪತಿ ಗಂಡ ಪರಮೆಶ್ವರ ಏರಿ ಇವರು ಉಪಚಾರ ಹೊಂದುತ್ತಿದ್ದಾಗ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿರುತ್ತಾರೆ ಅಂತಾ ಪುರಾವಣೆ ಹೇಳಿಕೆ ನೀಡಿದ್ದರಿಂದ ಸಾರಂಶದ ಮೇಲಿಂದ ಸದರ ಪ್ರಕರಣದಲ್ಲಿ ಕಲಂ, 304(ಎ) ಐ.ಪಿ.ಸಿ ಅಳವಡಿಸಿಕೊಳ್ಳಲಾಗಿದೆ. 

No comments: