POLICE BHAVAN KALABURAGI

POLICE BHAVAN KALABURAGI

10 December 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ.ವಿಜಯಕುಮಾರ ತಂದೆ ಗುಲಾಬಚಂದ ಕಿವುಡೆ, ಸಾ|| ಚಕ್ರಕಟ್ಟಾ ಗಾಜೀಪೂರ ಗುಲಬರ್ಗಾರವರು ನಾವು ದಿನಾಂಕ:08-12-2012 ರಂದು ಸಾಯಂಕಾಲ ಮನೆಯ ಬಾಗಿಲಗೆ ಕೀಲಿ ಹಾಕಿ ಉಸ್ಮಾನಾಬಾದದಲ್ಲಿರುವ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿರುತ್ತೆವೆ. ದಿನಾಂಕ:09-12-2012 ರಂದು ಬೆಳಗಿನ ಜಾವ ಯಾರೋ ಕಳ್ಳರು ಮನೆಯ ಬಾಗಿಲು ಮುರಿದು ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಮತ್ತು ನಗದು ಹಣ 25,000/- ಹೀಗೆ ಒಟ್ಟು 1,01,400/- ಮೌಲ್ಯದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ ಗುನ್ನೆ ನಂ:131/2012 ಕಲಂ, 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಚಂದ್ರಭಾಗ ಗಂಡ ಶಂಕರ ಕಲ್ಲೂರ ಸಾ|| ಹಡಲಗಿ ಗ್ರಾಮ ರವರು ನಾವು ಮನೆಯವರೆಲ್ಲರೂ ದಿನಾಂಕ:07-12-2012 ರಂದು ಬೆಳಿಗ್ಗೆ  11-00 ಗಂಟೆ ಸುಮಾರಿಗೆ ಮನೆಗೆ ಕೀಲಿ ಹಾಕಿಕೊಂಡು ನಮ್ಮ ಹೊಲಕ್ಕೆ ತೊಗರಿ ಬಡಿಯಲು ಹೋಗಿ ಮರಳಿ ಸಾಯಂಕಾಲ 5-30 ಗಂಟೆ ಸುಮಾರಿಗೆ ಮನೆಗೆ ಬಂದಿದ್ದು. ಮನೆಯ  ಕೋಣೆಯ ಬಾಗಿಲು ತೆಗೆದಿದ್ದು ಒಳಗೆ ಹೋಗಿ ನೋಡಲು ಅಲಮಾರಿ ತೆರೆದಿತ್ತು. ಅಲಮಾರಿಯ ಶೇಫ ಲಾಕರ ಮುರಿದಿತ್ತು ಅದರಲ್ಲಿಟ್ಟಿದ್ದ ಬಂಗಾರದ  ಆಭರಣಗಳು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು47, 000/- ರೂಪಾಯಿ ಬೆಲೆ ಬಾಳುವವುಗಳು  ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:105/2012 ಕಲಂ, 454, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುಧೋಳ ಪೊಲೀಸ್ ಠಾಣೆ: ಮಧು ತಂದೆ ನರಸಪ್ಪಾ ವ|| 18  ಜಾ|| ಕುರುಬರ ಸಾ|| ಹುಲಿಗುಂಡಂ ಇತನು ತನ್ನ ಎತ್ತುಗಳನ್ನು ಹೊಡೆದು ಕೊಂಡು ಹುಲಿಗುಂಡಂ ಕ್ರಾಸ್ ಹತ್ತಿರ ಯಾದಗಿರಿ ಕೊಡಂಗಲ್ ರಸ್ತೆಯಲ್ಲಿ ಬರುತ್ತಿದ್ದಾಗ ಯಾದಗಿರಿ ಕಡೆಯಿಂದ ಕೊಡಂಗಲ ಕಡೆಗೆ ಹೊರಟಿದ್ದ ಟ್ಯಾಂಕರ ನಂ. ಎಮ್.ಹೆಚ್- 04/ಡಿ.ಕೆ- 3027 ನೆದ್ದರ ಚಾಲಕನಾದ ದಶರಥ ಯಾದವ ಇತನು ತನ್ನ ವಾಹನವನ್ನು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಮಧು ತಂದೆ ನರಸಪ್ಪಾ ಇವನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದಾಗ ಸದರಿಯವನಿಗೆ ಭಾರಿಗಾಯಗಳಾಗಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾನೆ ಅಂತಾ ಆತನ ತಾಯಿಯಾದ ಬಿಚ್ಚಮ್ಮಾ ಗಂಡ ನರಸಪ್ಪಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 154/2012 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: