POLICE BHAVAN KALABURAGI

POLICE BHAVAN KALABURAGI

25 December 2012

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀಮತಿ ಇಶ್ರಾತ ಪರ್ವೀನ ಗಂಡ ಸೈಯ್ಯದ ಫಾರೂಕ ಉ:ದೈಹಿಕ ಶಿಕ್ಷಕಿ ಸಾ|| ಶ್ರೀ ಅಬ್ದುಲ ಸತ್ತಾರ ಪಹಾಡವಾಲೆ ಇವರ ಮನೆಯಲ್ಲಿ ಬಾಡಿಗೆ ಹಳೆಯ ಮೋರೆ ಆಸ್ಪತ್ರೆ ಮಿಜಗುರಿ ಗುಲಬರ್ಗಾ ರವರು ನಾನು ದಿನಾಂಕ:23/12/2012 ರಂದು ಸಾಯಂಕಾಲ ಕರ್ತವ್ಯ ಮುಗಿಸಿಕೊಂಡು ನನ್ನ ತಾಯಿಯ ಮನೆಗೆ ಹೋಗಿ ನನ್ನ ತಾಯಿಯ ಮನೆಯಿಂದ ನನ್ನ  5 ತೊಲಿಯ ಬಂಗಾದ ಆಭರಣಗಳನ್ನು ನನ್ನ ವ್ಯಾನಿಟಿ ಬ್ಯಾಗದಲ್ಲಿ ಹಾಕಿಕೊಂಡು ಮನೆಗೆ ಬಂದು ವ್ಯಾನಿಟಿ  ಬ್ಯಾಗ್  ಸೋಫಾದ ಮೇಲೆ  ಸಾಯಂಕಾಲ 6:30 ಗಂಟೆಗೆ ಇಟ್ಟು ಮನೆಯ ಕೆಲಸ ಮಾಡಿ  7:30 ಗಂಟೆಗೆ ಸುಮಾರಿಗೆ ನಾನು ಸೋಫಾದ ಮೇಲೆ ಇಟ್ಟಿರುವ ಬ್ಯಾಗ ನೋಡಲಾಗಿ ಬ್ಯಾಗ ಇರಲಿಲ್ಲಾ ಯಾರೋ ಸೋಫಾದ ಮೇಲೆ ಇಟ್ಟ ನನ್ನ ವ್ಯಾನಿಟಿ ಬ್ಯಾಗ ಅದರಲ್ಲಿ ಇಟ್ಟಿರುವ 5 ತೊಲಿಯ ಬಂಗಾರದ ಆಭರಣಗಳು ಅ||ಕಿ||1,25,000/-ರೂಪಾಯಿ ಬೆಲೆಯುಳ್ಳದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.90/2012 ಕಲಂ. 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: