POLICE BHAVAN KALABURAGI

POLICE BHAVAN KALABURAGI

17 December 2012

GULBARGA DISTRICT REPORTED CRIME


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:ಶ್ರೀ ಲೊಕೇಶ ತಂದೆ ಭಗವಾನ ಕಾಂಬ್ಳೆ ಸಾ|| ವಿದ್ಯಾನಗರ ಗುಲಬರ್ಗಾರವರು ನಾನು ದಿನಾಂಕ:16.12.2012 ರಂದು ಸಾಯಂಕಾಲ 7.30 ಗಂಟೆ ಸುಮಾರಿಗೆ ನಡೆದುಕೊಂಡು ಕೆ.ಎಸ್.ಆರ್.ಟಿ.ಸಿ ಬಸ ಡಿಪೋ ನಂ.3 ರ ರಸ್ತೆಯಲ್ಲಿ ಹೋಗುತ್ತಿರುವಾಗ ಶೇಖರ ದುದನಿ ಮತ್ತು ಆತನ ಜೊತೆ ಇನ್ನೊಬ್ಬ ಅಪರಿಚಿತ ವ್ಯಕ್ತಿ ಇಬ್ಬರು ಕೂಡಿ ನನ್ನನ್ನು ನಿಲ್ಲಿಸಿ ಜಾತಿ ನಿಂದನೆ ಮಾಡಿದ್ದು ಅಲ್ಲದೆ ಆ ವೇಳೆಯಲ್ಲಿ ಶೇಖರನ ಗೆಳೆಯರಾದ ಇನ್ನು ನಾಲ್ಕು ಜನ ಅಪರಿಚಿತರು ಬಂದವರೆ ಶೇಖರ ಈ ಮಗ ಲೊಕೇಶನಿಗೆ ಬಿಡುವುದು ಬೇಡ ಈ ಹಿಂದೆ 7-8 ದಿನಗಳ ಹಿಂದೆ ಶೇಖರ ಮತ್ತು ನನ್ನ ನಡುವೆ ಜಗಳವಾಗಿತದ್ದು, ಅದೇ ಉದ್ದೇಶ ಇಟ್ಟುಕೊಂಡು ಶೇಖರ ಮತ್ತು ಆತನ ಗೆಳೆಯರೆಲ್ಲರೂ ಕೂಡಿ ನನ್ನನ್ನು ಶ್ರೀ ಕೃಷ್ಣ ದೇವಸ್ಥಾನದ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಎಲ್ಲರೂ ಕೂಡಿ ಹೊಡೆದು ಬಾರಿ ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:155/12 ಕಲಂ. 143,147,341,323,324 ಸಂ. 149 ಐ.ಪಿ.ಸಿ ಮತ್ತು 3(1)(10) ಎಸ್.ಸಿ ಎಸ್.ಟಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: