POLICE BHAVAN KALABURAGI

POLICE BHAVAN KALABURAGI

05 November 2012

GULBARGA DISTRICT REPORTED CRIMES


ಹಾಗರಗುಂಡಗಿ ಗ್ರಾಮದಲ್ಲಿ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂದನ: ಸುಮಾರು 2 ಲಕ್ಷ 50 ಸಾವಿರ ಮೌಲ್ಯದ ಮಧ್ಯ ಜಪ್ತಿ:
ಮಾನ್ಯ ಶ್ರೀ ಪವಾರ್  ಪ್ರವೀಣ ಮಧುಕರ ಐಪಿಎಸ್  ಪೊಲೀಸ್ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದ ಮೇರೆಗೆ ಡಿಸಿಐಬಿ ಘಟಕದ ಅಧಿಕಾರಿಗಳಾದ ಶ್ರೀ ಎಸ. ಎಸ್. ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಮತ್ತು ಸಿಬ್ಬಂದಿಯವರಾದ ಶ್ರೀ ಬಸವರಾಜ ಎ.ಎಸ.ಐ, ಹೆಚ.ಸಿಗಳಾದ ವಿಜಯಕುಮಾರ, ಅಣ್ಣರಾವ, ಶಿವಯೋಗಿ ಪ್ರಕಾಶ, ಲಕ್ಕಪ್ಪಾ, ಬಸವರಾಜ, ಅಣ್ಣಪ್ಫಾ ಬೆಳ್ಳಿ, ಶಿವಾನಂದ ಮತ್ತು ಚೀಪ ಚಾಲಕ ವೀರಣ್ಣಾ ಹಾಗು ಫರತಬಾದ ಪೊಲೀಸ್ ಠಾಣೆಯ ಪಿ.ಎಸ.ಐ ರಾಠೋಡ, ರವರು ಮತ್ತು ದೇವಿಂದ್ರಪ್ಪಾ ಪಿಸಿ ರವರು ಹಾಗರಗುಂಡಗಿ ಗ್ರಾಮಕ್ಕೆ ಹೋಗಿ ಹಾಗರಗುಂಡಿ ಗ್ರಾಮದಲ್ಲಿ ಮೌನೇಶ ತಂದೆ ಚಂದ್ರಶೇಖರ ರವರು ಯಾವದೇ ದಾಖಲಾತಿ, ಮತ್ತು ಪರವಾನಿಗೆ ಇಲ್ಲದೆ ಆಕ್ರಮವಾಗಿ ಮಧ್ಯ ಶೇಖರಣೆ ಮಾಡಿ ಹಳ್ಳಿಗಳಲ್ಲಿ ಲೈಸನ್ಸ ಇಲ್ಲದೇ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಮೇರೆಗೆ ದಿನಾಂಕ:05-11-2012 ರಂದು ಮಧ್ಯಾಹ್ನ 2-30 ಗಂಟೆಗೆ ದಾಳಿ ಮಾಡಿ ಮಾರಾಟ ಮಾಡಲು ಸಂಗ್ರಹಿಸಿದ ವಿಸ್ಕಿ, ಬ್ರಾಂಡಿ, ಬೀರ  ತುಂಬಿದ 107 ಬಾಕ್ಸಗಳು ಅಂದಾಜು ಕಿಮ್ಮತ್ತು 2 ಲಕ್ಷ 50 ಸಾವಿರ ಮೌಲ್ಯದ್ದು ದಾಳಿ ಮಾಡಿ ಜಪ್ತಿ ಮಾಡಿಕೊಂಡು ಮೌನೇಶ ತಂದೆ ಚಂದ್ರಶೇಖರ ರವರಿಗೆ ದಸ್ತಗಿರ ಮಾಡಿಕೊಂಡು ಜಪ್ತಾದ ಮಧ್ಯ ಮತ್ತು ಮೌನೇಶ ಇತನನ್ನು ಮುಂದಿನ ಕ್ರಮಕ್ಕಾಗಿ ಫರತಬಾದ ಪೊಲೀಸ ಠಾಣೆಗೆ ಒಪ್ಪಿಸಿರುತ್ತಾರೆ.  ಈ ಬಗ್ಗೆ ಫರತಬಾದ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 134/2012 ಕಲಂ, 32 34 ಕೆ.ಇ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ಶ್ರೀ ಅಣ್ಣರಾವ ತಂದೆ ಅಮರಪ್ಪ ನೀಷ್ಠೆದೇಶಮುಖ ಸಾ||ಜೇರಟಗಿ ನಾನು ನಮ್ಮೂರ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಕಮೀಟಿಯ ಅಧ್ಯಕ್ಷನಾಗಿರುತ್ತೆನೆ ಬಸಣ್ಣ. ಸೈಬಣ್ಣ ಹೂಗಾರ ಇತನು ಗುಡಿಯ ಪೂಜಾರಿ ಇರುತ್ತಾನೆ.ದಿನಾಂಕ:04-11-2012 ರಂದು ರಾತ್ರಿ 10.00 ಗಂಟೆಯ ಸುಮಾರಿಗೆ ಬಸಣ್ಣ ಹೂಗಾರ ಇವರು ಕೀಲಿ ಹಾಕಿ ಅಂಗಳದಲ್ಲಿ ಮಲಗಿದ್ದು ನಾಲ್ಕು ಗಂಟೆಯ ಪೂಜೆ ಮಾಡುವ ಸಲುವಾಗಿ ಎದ್ದು ನೋಡಿದ್ದಾಗ ಗುಡಿಯ ಬಾಗಿಲು ಕೀಲಿ ಹಾಗೂ ಗಲ್ಲಾ ಪೆಟ್ಟೆಗೆ ಕೀಲಿ ಮುರಿದದ್ದನ್ನು ನೋಡಿ ಒಳಗೆ ಹೋಗಿ ನೋಡಿ ನಮ್ಮ ಮನೆಗೆ ಬಂದು ತಿಳಿಸಿದ್ದಾಗ ನಾನು ಮತ್ತು ದೇವಸ್ಥಾನದ ಕಮೀಟಿಯ ಸದಸ್ಯರಾದ ಸುರೇಶ ಬಿಜಾಪುರ ಇಬ್ಬರೂ ಒಳಗೆ ಹೋಗಿ ನೋಡಲಾಗಿ ಅಂದಾಜು ಮೂರು ಕೇಜಿ ತೂಕದ ಮೂರು ಬೆಳ್ಳಿಯ ಮೂರ್ತಿಗಳು ಅಂ.ಕೀ.180000/-, 1 ½ ತೂಕದ ಬೆಳ್ಳಿಯ ನಾಗರ ಹೆಡಿ ಅಂ.ಕಿ.90000/- ರೂ ,ಒಂದು ಕೆ.ಜಿ.ತೂಕದ ಎರಡು ಬೆಳ್ಳಿಯ ಪಾದರಕ್ಷೆಗಳು ಅ.ಕಿ.60000/- ರೂ,ಒಂದು 600 ಗ್ರಾಮದ ತೂಕದ ಬೆಳ್ಳಿಯ ಬೆತ್ತ ಅಂ.ಕಿ..36000/- ರೂ,ಗಲ್ಲಾ ಪೆಟ್ಟಿಗೆಯಲ್ಲಿದ ಅಂದಾಜು 1 ಲಕ್ಷ ರೂಪಾಯಿ ನಗದು ಹಣ ಹಿಗೇ ಎಲ್ಲಾ ಸೇರಿ ಒಟ್ಟು 4,66,000=00 ಕಿಮ್ಮಿತ್ತಿನ ಸಾಮಾನುಗಳು ಕಳ್ಳತನವಾಗಿರುತ್ತವೆ.  ಯಾರೋ ಕಳ್ಳರು ದೇವಸ್ಥಾನದ ಕೀಲಿ ಮುರಿದು ಕಳ್ಳತನ  ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.143/2012 ಕಲಂ. 457,380, ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: