POLICE BHAVAN KALABURAGI

POLICE BHAVAN KALABURAGI

18 November 2012

GULBARGA DISTRICT REPORTED CRIMES


ಜೂಜಾಟ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:17/11/2012 ರಂದು 3-30 ಪಿ.ಎಂಕ್ಕೆ ಎಸ್.ಪಿ ಕಾರ್ಯಲಯದಲ್ಲಿರುವಾಗ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೇಂದ್ರ ಬಸ್ ನಿಲ್ದಾಣ ಹತ್ತಿರದ ಮಮತಾ ಲಾಡ್ಜ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಅಂದರ/ಬಾಹರ ಇಸ್ಪಿಟ್ ಜೂಜಾಟ ನಡೆಯುತ್ತಿದೆ ಅಂತಾ ಬಾತ್ಮಿ ಬಂದ ಮೇರೆಗೆ ನಾನು ಶ್ರೀ ಎಸ್.ಎಸ್ ಹುಲ್ಲೂರ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ಮತ್ತು ಸಿಬ್ಬಂದಿ ಜನರಾದ ಬಸವರಾಜ ಎ.ಎಸ್.ಐ,ಶಿವಯೋಗಿ ಹೆಚ್.ಸಿ,ಅಣ್ಣಪ್ಪ ಹೆಚ್.ಸಿ,ವಿಜಯಕುಮಾರ ಹೆಚ್.ಸಿ,ಬಸವರಾಜ ಹೆಚ್.ಸಿ,ಪ್ರಕಾಶ ಹೆಚ್.ಸಿ, ಹಾಗೂ ನನ್ನ ಪೊಲೀಸ್ ಜೀಪ್ ನಂ:ಕೆಎ-32 ಜಿ-456 ರ ಚಾಲಕನಾದ ವೀರಣ್ಣ ಎ.ಪಿ.ಸಿ ರವರೊಂದಿಗೆ ಅಶೋಕ ನಗರ ಪೊಲೀಸ್ ಠಾಣೆಗೆ ಬಂದು ಶ್ರೀ ಟಿ.ಹೆಚ್. ಕರೀಕಲ್ ಪಿ.ಐ ಅಶೋಕ ನಗರ ರವರ ಸಂಗಡ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಮಮತಾ ಲಾಡ್ಜ ಎದುರುಗಡೆ ಕೇಲವು ಜನರು ಹಣವನ್ನು ಪಣಕ್ಕೆ ಹಚ್ಚಿ ಅಂದರ/ಬಾಹರ ಇಸ್ಪಿಟ್ ಜೂಜಾಟ  ಆಡುತ್ತಿರುವರ ಮೇಲೆ ದಾಳಿ ಮಾಡಿ ಹಿಡಿದು 5 ಜನ ಜೂಜುಕೊರರಾದ ಅಶೋಕ ತಂದೆ ಗುರುಲಿಂಗಪ್ಪ ಜಮಾದಾರ ಸಾ|| ಕುರಿಕೋಟಾ ಹಾ.ವ|| ವಡ್ಡರಗಲ್ಲಿ ಬ್ರಹ್ಮಪೂರ ಗುಲಬರ್ಗಾ,ಕಾಶಿನಾಥ ತಂದೆ ಶಂಕರ ಶೇರಿಕಾರ ಸಾ|| ಸಿರಸಗಿ ಮಡ್ಡಿ,ಶಿವಾನಂದ ತಂದೆ ಸುಭಾಸ ಭೀಮಳ್ಳಿ ಸಾ|| ಕಪನೂರ ಬೆಲೂರ ಕ್ರಾಸ ಗುಲಬರ್ಗಾ, ಸಿದ್ರಾಮಪ್ಪ ತಂದೆ ಶೀವಶರಣಪ್ಪ ಪಾಟೀಲ ಸಾ|| ಹಾರತಿಹಡಗಿಲ ಮತ್ತು ಶಿವಯೋಗಿ ತಂದೆ ಸಿದ್ದಪ್ಪ ಸುಭೆದಾರ ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟದ ನಗದು ಹಣ 2960/- ನಾಲ್ಕು ಮೊಬೈಲಗಳು ಅ.ಕಿ 2000/- ಹಾಗೂ ಒಂದು ಕ್ಯಾಲ್ಕುಲೇಟರ್ ನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಳ್ಳಲಾಗಿದೆ. ಜಪ್ತಿ ಪಂಚನಾಮೆ ಮತ್ತು 5 ಜನ ಆಪಾಧಿತರು ಹಾಗೂ ಮುದ್ದೆಮಾಲನ್ನು ತಂದು ಶ್ರೀ ಎಸ್.ಎಸ್ ಹುಲ್ಲೂರ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವ ರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:102/2012 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ವೈಶ್ಯವಾಟಿಕೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ:17/11/2012 ರಂದು ಸಾಯಂಕಾಲ 6-00 ಗಂಟೆಗೆ ಮಮತಾ ಲಾಡ್ಜಿನ ಅಂಡರ ಗ್ರೌಡ ರೂಮಿನಲ್ಲಿ ಲಾಡ್ಜಿನ ಮ್ಯಾನೇಜರ ಹಾಗು ಮಾಲಿಕರವರು ವೈಶ್ಯಾ ವಾಟಿಕೆ ದಂಧೆ ನಡೆಸುತ್ತಿದ್ದಾರೆ ಅಂತಾ ಬಾತ್ಮಿ ಬಂದ ಮೇರೆಗೆ ನಾನು ಶ್ರೀ ಎಸ್.ಎಸ್ ಹುಲ್ಲುರ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ, ಮಾನ್ಯ ಎಸ್.ಪಿ ಸಾಹೇಬ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮಾನ್ಯ ಡಿ.ಎಸ್.ಪಿ ಗ್ರಾಮೀಣ ಪ್ರಭಾರಿ (ಎ) ಉಪ ವಿಭಾಗ ರವರ ಅನುಮತಿ ಪಡೆದುಕೊಂಡು ಶ್ರೀ ಟಿ.ಹೆಚ.ಕರೀಕಲ್ ಪಿ.ಐ ಅಶೋಕ ನಗರ ಮತ್ತು ನಮ್ಮ ಡಿ.ಸಿ.ಐ.ಬಿ ಸಿಬ್ಬಂದಿ ಜನರಾದ ಬಸವರಾಜ ಎ.ಎಸ್.ಐ, ಬಸವರಾಜ ಹೆಚ್.,ಪ್ರಕಾಶ ಹೆಚ್.ಸಿ. 151, ಹಾಗು ಪ್ರಿಯಂಕಾ ಮಪಿಸಿ ರವರೊಂದಿಗೆ ಮಮತಾ ಲಾಡ್ಜ ಅಂಡರ ಗ್ರೌಡ ಒಳಗೆ ಹೋಗಿ ರೂಮಿನ ಬಾಗಿಲು ಬಡೆದು ಬಾಗಿಲು ತೆರೆಯುವಂತೆ ಹೇಳಿದಾಗ ರೂಮಿನಲ್ಲಿದ್ದ ಒಬ್ಬ ವ್ಯಕ್ತಿ ಬಾಗಿಲು ತೆರೆದಾಗ ಪಂಚರ ಸಮಕ್ಷಮದಲ್ಲಿ ರೂಮಿನ ಒಳಗಡೆ ಹೋಗಿ ಪರಿಶೀಲಿಸಲು ಬೆಡಿನ ಮೇಲೆ ಒಬ್ಬ ಹೆಣ್ಣು ಮಗಳು ಅರೆ ಬತ್ತಲೆ ಸ್ಥಿತಿಯಲ್ಲಿದ್ದು ಮತ್ತು ರೂಮಿನಲ್ಲಿ  ಕಂಡೋಮ್ಸ್ ಪ್ಯಾಕೇಟ ಬಿದ್ದಿದ್ದು ಆ ಹೆಣ್ಣು ಮಗಳಿಗೆ ವಿಚಾರಿಸಿದಾಗ ಮಾಣಿಕೇಶ್ವರಿ ಕಾಲೋನಿಯ ಚಂದ್ರಕಾಂತ ತಂದೆ ಮಾಹಾತೇಶ ಜಮಾದಾರ ರವರು ತನಗೆ ನೌಕರಿ ಕೊಡಿಸುವುದಾಗಿ ಮತ್ತು ದುಡ್ಡು ಕುಡಿಸುದಾಗಿ ಸುಳ್ಳು ಹೇಳಿ ಮಮತಾ ಲಾಡ್ಜಿಗೆ ಕರೆದುಕೊಂಡು ಬೇರೆ ಗಂಡಸರಿಂದ ಹಣ ತೆಗೆದುಕೊಂಡು ರೂಮಿನ ಒಳಗೆ ಕಳುಹಿಸಿ ವ್ಯಭಿಚಾರ ಮಾಡಿಸುತ್ತಿದ್ದಾನೆ. ಮತ್ತು ಈ ಕೆಲಸಕ್ಕೆ ಮಮತಾ ಲಾಡ್ಜ ಮ್ಯಾನೇಜರ ವಿನಾಯಕ ತಂದೆ ಶೇಖ ಮಹಿಬೂಬ ಮತ್ತು ಲಾಡ್ಜಿನ ಮಾಲಿಕರವರು ಕೂಡಿಕೊಂಡು ಗಿರಾಕಿಗಳಿಂದ ಹಣ ತೆಗೆದು ಲೈಂಗಿಕ ಕ್ರಿಯೆ ಮಾಡಲು ರೂಮಿನಲ್ಲಿ ಕಳುಹಿಸುತ್ತಾರೆ. ಅಂತಾ ತನ್ನ ಅಸಹಾಯಕತೆ ತೋರಿಸಿದ್ದರಿಂದ ವೈಶ್ಯಾವಾಟಿಕೆಗೆ ಕರೆದುಕೊಂಡು ಬಂದಿದ್ದ ಚಂದ್ರಕಾಂತ ತಂದೆ ಮಾಹಾತೇಶ ಜಮಾದಾರ ಸಾ:ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾ ಇತನಿಗೆ ಪರಿಶೀಲಿಸಿದಾಗ ವೈಶ್ಯಾ ವಾಟಿಕೆಯಿಂದ ಗಳಿಸಿದ ಹಣ 4200/- ರೂ ಮತ್ತು ಒಂದು ಕಾರ್ಬನ ಮೋಬಾಯಿಲ್, ಲಾವಾ ಮೋಬೈಲಗಳನ್ನು ವಶಪಡಿಸಿಕೊಳ್ಳಲಾಯಿತು. ನಂತರ ಲಾಡ್ಜ ಕೌಂಟರ ಹತ್ತಿರ ಮ್ಯಾನೇಜರ ಇನಾಯಿತ ತಂದೆ ಶೇಖ ಮಹಿಬೂಬ ಸಾ:ಭಗವತಿ ನಗರ ಇತನನ್ನು ಪರಿಶೀಲಿಸಿದಾಗ ವೈಶ್ಯಾ ವಾಟಿಕೆಯಿಂದ ಕೂಡಿದ 4500/- ರೂ ಮತ್ತು ಲಾಡ್ಜಿನ ಹಾಜರಾತಿ ಪುಸ್ತಕವನ್ನು ವಶಪಡಿಸಿಕೊಳ್ಳಲಾಯಿತು. ಲಾಡ್ಜಿನ ಮಾಲಿಕನ ಹೆಸರು ವಿಚಾರಿಸಿದಾಗ ಬಂದೇಲಿ ನಿವೃತ್ತ ಎಸ್.ಟಿ.ಓ ಅಂತಾ ಹೆಳಿದನು.  ಕಾರಣ ವೈಶ್ಯಾ ವಾಟಿಕೆಯನ್ನು ನಡೆಸಲು ಕರೆದುಕೊಂಡು ಬಂದ ಚಂದ್ರಕಾಂತ ಮತ್ತು ಲಾಡ್ಜಿನ ಮ್ಯಾನೇಜರ ರವರಿಗೆ ವಶಕ್ಕೆ ತೆಗೆದುಕೊಂಡು ಜಪ್ತಿ ಪಂಚನಾಮೆ ಮತ್ತು ಮುದ್ದೆ ಮಾಲಿನೊಂದಿಗೆ ಮುಂದಿನ ಕ್ರಮ ಕುರಿತು ಶ್ರೀ ಎಸ್.ಎಸ್ ಹುಲ್ಲುರ ಪಿ.ಐ ಡಿ.ಸಿ.ಐ.ಬಿ ಘಟಕ ಎಸ್.ಪಿ ಆಫೀಸ್ ಗುಲಬರ್ಗಾ ವರದಿ ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 103/2012 ಕಲಂ. 3,4,5,6, ಪ್ರಿವೇಷನ್ ಆಫ್ ಇಮ್ಮೋರಲ್ ಟ್ರಾಫೀಕ್ ಆಕ್ಟ್ ( ಪಿ.ಐ.ಟಿ ಆಕ್ಟ) ಪ್ರಕಾರ ಕ್ರಮ ಜರೂಗಿಸಲಾಗಿದೆ.

No comments: