POLICE BHAVAN KALABURAGI

POLICE BHAVAN KALABURAGI

29 November 2012

GULBARGA DISTRICT REPORTED CRIMES


ಮಹಿಳಾ ಪೊಲೀಸ್ ಪೇದೆ ಆತ್ಮಹತ್ಯೆ, ಯು.ಡಿ.ಅರ್. ಪ್ರಕರಣ ದಾಖಲು:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ಮಲ್ಲಪ್ಪ ತಂದೆ ಬಸಪ್ಪ ಕಲಶೆಟ್ಟಿ ಪ್ರಾದೇಶಿಕ ಭೂ-ಮಾಪನ ತರಬೇತಿ ಸಂಸ್ಥೆಯಲ್ಲಿ ಭೋದಕ ಸಾ|| ಕೆರಕನಳ್ಳಿ ತಾ|| ಅಫಜಲಪುರ ಹಾ||ವ|| ಮಾತಾ ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾ ರವರು ನನ್ನ ಮೂರನೆ ಮಗಳು ಕುಮಾರಿ ರೇಷ್ಮಾ ಇವಳು ಪೊಲಿಸ್ ಇಲಾಖೆಯಲ್ಲಿ ಪೊಲೀಸ್ ಪೇದೆ ಅಂತ ಭರ್ತಿಯಾಗಿ ಚಿತ್ತಾಪೂರ ಠಾಣೆಯಲ್ಲಿ ಮಹಿಳಾ ಪೇದೆ ಅಂತ ಕರ್ತವ್ಯ ನಿರ್ವಹಿಸುತ್ತಿದ್ದಳು. ದಿನಾಂಕ:23/11/2012 ರಂದು ನಾನು ಕರ್ತವ್ಯದ ನಿಮಿತ್ಯ ಮೈಸೂರಿಗೆ ಹೋರಟಾಗ ನನ್ನ ಮಗಳಾದ ರೇಷ್ಮಾ ಇವಳು ರಜೆಯ ಮೇಲೆ ಬಂದು ಮನೆಯಲ್ಲಿ ಇದ್ದಳು. ಸದರಿಯವಳಿಗೆ ವಿಚಾರಿಸಲಾಗಿ ದಿನಾಂಕ:26/11/2012 ರವರೆಗೆ ರಜೆ ತೆಗೆದುಕೊಂಡು ಬಂದಿರುತ್ತೇನೆ ಅಂತ ಹೇಳಿದಳು. ನಾನು ಮರಳಿ ರೈಲು ಮುಖಾಂತರ  ಗುಲಬರ್ಗಾಕ್ಕೆ ಬರುತ್ತಿರುವಾಗ ನನ್ನ ಮಗನಾದ ಪ್ರವೀಣ ಇತನು ನನಗೆ ಫೋನ ಮುಖಾಂತರ ಅಕ್ಕಾ ಚಿತ್ತಾಪುರದಲ್ಲಿ ಮರಣ ಹೊಂದಿರುತ್ತಾಳೆ ನೀನು ನೇರವಾಗಿ ಚಿತ್ತಾಪುರಕ್ಕೆ  ಬಾ ಅಂತ ತಿಳಿಸಿದ ಮೇರೆಗೆ ನಾನು ಚಿತ್ತಾಪೂರದ ಪೊಲೀಸ್ ವಸತಿ ಗೃಹಕ್ಕೆ ಬಂದು ನೋಡಲಾಗಿ ನನ್ನ ಮಗಳು ಮೃತಪಟ್ಟಿದ್ದು ಇರುತ್ತದೆ. ನನ್ನ ಮಗಳಾದ ರೇಷ್ಮಾ  ಇವಳು ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ಔಷಧದ ಗುಳಿಗೆ ನುಂಗಿ ಮೃತಪಟ್ಟಿದ್ದು ನನ್ನ ಮಗಳ ಸಾವಿನಲ್ಲಿ ಯಾರ ಮೇಲೂ  ಯಾವುದೇ ಸಂಶಯ ವಗೈರೆ ಇರುವದಿಲ್ಲಾ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.,ಡಿ.ಆರ್ ನಂ:20/2012 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವರದಕ್ಷಿಣೆ ಕಿರಕುಳು ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಮಾನ್ಯ 2 ನೇ ಅಪರ ಜೇ. ಎಮ್.ಎಫ್.ಸಿ ನ್ಯಾಯಾಲಯ ಪತ್ರ ನಂಬರ 607/12 ದಿನಾಂಕ: 27.11.2012 ನೇದ್ದಆದೇಶ ಕಲಂ 156(3) ಸಿ.ಆರ್.ಪಿ.ಸಿ ಪ್ರಕಾರ ತನಿಖೆ ಕೈಕೊಳ್ಳವುದಂತೆ ಆದೇಶದ ಪ್ರಕಾರ ರುಬೀನಾ ಬೇಗಂ  ಇವಳ ಮದುವೆಯು ದಿನಾಂಕ:17.06.2011 ರಂದು ವಸೀಮ್ ಅಕ್ರಮ್  ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ವರದಕ್ಷಿಣೆ ರೂಪದಲ್ಲಿ 5 ತೊಲೆ ಬಂಗಾರ ಒಂದು ಹೀರೊಹೊಂಡಾ ಮೋಟಾರ ಸೈಕಲ್ ಮತ್ತು ಗೃಹ ಬಳಿಕೆ ಸಾಮಾನುಗಳು ಕೊಟ್ಟಿದ್ದು. ವಸೀಮ್ ಅಕ್ರಮ್ ಇತನು ಬೆಂಗಳೂರಿನಲ್ಲಿ ಖಾಸಗಿ ಕೆಲಸ ಮಾಡಿಕೊಂಡು ಇರುತ್ತಾನೆ . ಮದುವೆಯಾದ ನಂತರ ಗಂಡನ  ಮನೆಯಾದ ಬೆಂಗಳೂರಿಗೆ ಹೋಗಿದ್ದು  ಅಲ್ಲಿ ಸ್ವಲ್ಪ ದಿವಸದ ನಂತರ ಗಂಡ  ಹಾಗೂ ಮನೆಯವರು  ಕೂಡಿ ನೀನು ವರದಕ್ಷಣೆ ಕಡಿಮೆ ತಂದಿದಿಯಾ ನಿನಗೆ ಅಡಿಗೆ ಮಾಡಲು ಬರುವುದಿಲ್ಲಾ ಅಂತಾ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡಲು ಪ್ರಾರಂಬಿಸಿದರು.  ನನ್ನ ತಾಯಿ  ಫ್ರೀಜ್ , ಕೂಲರ್, ವಾಶಿಂಗ್ ಮಶೀನ್ , ಗ್ಯಾಸ ಸ್ಟ್ಯೋ, ಸಿಲಿಂಡರ್ , ಫ್ಯಾನ್ ಕೂಡ ತಂದು ಕೊಟ್ಟಿದ್ದು ಇರುತ್ತದೆ. ಇಷ್ಟ ಎಲ್ಲಾ ತಂದು ಕೊಟ್ಟರು ಕೂಡ ಅವರು ನನಗೆ ಹಿಂಸೆ ಕೊಡುತ್ತಾ ಬಂದಿರುತ್ತಾರೆ. ಇವತ್ತಿಲ್ಲಾ ನಾಳೆ ಸರಿ ಹೋಗ ಬಹುದು ಅಂತಾ ಸಹಿಸಿಕೊಂಡು ಬಂದಿರುತ್ತೇನೆ  ಮೂರು ತಿಂಗಳ ನಂತರ ನನ್ನ ಗಂಡ  ನನ್ನ ತವರು ಮನೆಯವರು ಕೊಟ್ಟ ಸಾಮಾನುಗಳು ಮಾರಿ ತಾವು ಒತ್ತಿ ಹಾಕಿದ ಮನೆ ಬಿಡಿಸಿಕೊಂಡಿರುತ್ತಾರೆ. ಇಷ್ಟೆಲ್ಲಾ ಮಾಡಿದ್ದು ಅಲ್ಲದೇ ಇನ್ನೊಂದು ಮೋಟಾರ ಸೈಕಲ್ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟಾಗ ನನ್ನ ತವರು ಮನೆಯವರು ಇನ್ನೊಂದು ಮೋಟಾರ ಸೈಕಲ್ ಕೊಡಿಸಿದರು. ನಂತರ ನನಗೆ ಸಾಯಿಸಬೇಕು ಅಂತಾ ಸಿಲೇಡಂರ್  ಓಪನ್ ಮಾಡಿ ಮನೆ ಬಾಗಿಲು ಮುಚ್ಚಿಕೊಂಡು ಹೋಗಿರುತ್ತಾರೆ.ನಿನ್ನ ತವರು ಮನೆಯಿಂದ ನೀನು 10 ಲಕ್ಷ ರೂಪಾಯಿ ತರದೇ ಇದ್ದರೇ ತಲಾಖ್ ಕೊಡುತ್ತೇವೆ ಅಂತಾ ರಂಜಾನ ತಿಂಗಳಲ್ಲಿಯೇ ಊಟಕ್ಕೆ ಕೊಡದೇ ಉಪವಾಸ ಹಾಕಿದ್ದು ಇರುತ್ತದೆ.ಈ ವಿಷಯವನ್ನು  ನಾನು ನನ್ನ ತಮ್ಮನಿಗೆ ತಿಳಿಸಿದಾಗ ನನ್ನ ತಮ್ಮ ನನಗೆ  ಗುಲಬರ್ಗಾಕ್ಕೆ ಕರೆದುಕೊಂಡು ಬಂದಿದ್ದು ದಿನಾಂಕ: 02.09.2012 ರಂದು ನನ್ನ ಗಂಡನಾದ ವಸೀಮ್ ಅಕ್ರಮ್ ನನ್ನ ತವರು ಮನೆಗೆ ಬಂದು  ನನಗೆ 10 ಲಕ್ಷ ರೂಪಾಯಿ ಕೊಡು ಇಲ್ಲದ್ದಿದರೆ ತಲಾಖ ಕೊಡು ಅಂತಾ ಜಗಳ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 82/2012 ಕಲಂ 498(ಎ), ಐ.ಪಿ.ಸಿ ಮತ್ತು  3&4 ಡಿ.ಪಿ.ಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ದಿನಾಂಕ 28-11-2012 ರಂದು ರಾತ್ರಿ 9-00 ಗಂಟೆಗೆ ಶ್ರೀ ಎಸ್.ಎಸ್. ಹುಲ್ಲೂರ್ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರು ತಮ್ಮ ಸಿಬ್ಬಂದಿಯೊಂದಿಗೆ ಹಾಗು ನಮ್ಮ ಠಾಣೆಯ ಅಧಿಕಾರಿ ಹಾಗು ಸಿಬ್ಬಂದಿ ಸಹಾಯದೊಂದಿಗೆ ಠಾಣಾ ವ್ಯಾಪ್ತಿಯಲ್ಲಿರುವ ವಿವೇಕಾನಂದ ನಗರದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಪಡೆದುಕೊಂಡು  ದಾಳಿ ಮಾಡಿ  ಅನಿಲಕುಮಾರ ತಂದೆ ರಾಮಣ್ಣ ಗಣೇರ ಇತನಿಗೆ ವಶಕ್ಕೆ ತೆಗೆದುಕೊಂಡು ಮಟಕಾ ನಂಬರ ಬರೆದ ಚೀಟಿ, ನಗದು ಹಣ 1150/-ರೂಪಾಯಿಗಳು, ಪೆನ್ ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣಾ ಗುನ್ನೆ ನಂ:89/2012 ಕಲಂ 420 ಐಪಿಸಿ ಸಂಗಡ 78 (3) ಕರ್ನಾಟಕ ಪೊಲೀಸ್ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಸುಧೀರ ತಂದೆ ಶರಣಪ್ಪ @ ಶಿವಶರಣಪ್ಪ ತಳಕೇರಿ ಸಾ: ಕೆರೆಬೋಸಗಾ ತಾ: ಜಿ: ಗುಲಬರ್ಗಾ ರವರು ನಾನು ದಿನಾಂಕ:28/11/2012 ರಂದು  ಕೆರೆಬೋಸಗಾ ಗ್ರಾಮದಲ್ಲಿ ನಮ್ಮ ಸಂಬಂಧಿಕರಲ್ಲಿ ಜವಳ ಕಾರ್ಯಕ್ರಮದ ಪ್ರಯುಕ್ತ ಆಟೋ ನಂ ಕೆಎ 32 ಬಿ 0188 ನೇದ್ದರಲ್ಲಿ ಕುಳಿತು ಹೋರಟಾಗ  ಆಳಂದ ಚೆಕ್ಕ ಪೋಸ್ಟ್‌ ರಾಣೇಶ ಪೀರ ದರ್ಗಾದ ಹತ್ತಿರ ರೋಡಿನ  ಹತ್ತಿರ  ಹಿಂದಿನಿಂದ ಒಂದು ಕಾರ ಆಟೋಕ್ಕೆ ಓವರ ಟೇಕ ಮಾಡಿ ಯಾವುದೇ ಮುನ್ಸೂಚನೆ ನೀಡಿದೆ ಒಮ್ಮಿಂದ ಒಮ್ಮೇಲೆ ಬಲಕ್ಕೆ ತಿರುಗಿಸಿ ಬ್ರೇಕ ಹಾಕಿ ನಿಲ್ಲಿಸಿದ್ದರಿಂದ  ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದರಿಂದ ಆಟೋದ ಗ್ಲಾಸ ಒಡೆದು ಅದರ ಚೂರುಗಳು ಹಣೆ ಮೇಲೆ & ಎರಡು ಕಣ್ಣೀನ  ಹುಬ್ಬಿನ ಮೇಲೆ ಬಡಿದು ರಕ್ತಗಾಯವಾಗಿದ್ದು . ಕಾರಿನ ಚಾಲಕ ಕಾರನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 393/2012 ಕಲಂ, 279,337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: