POLICE BHAVAN KALABURAGI

POLICE BHAVAN KALABURAGI

26 November 2012

GULBARGA DISTRICT REPORTED CRIMES


ಅಪಹರಣ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ: ದಿನಾಂಕ: 24-11-2012 ರಂದು ನಾನು ಹೊರಗಡೆ ಬಂದಾಗ ಅರೀಫ ತಂದೆ ಬಾಷಾಸಾಬ  ಸಾ:ನಾಗೂರ  ಮತ್ತು ಅಂಬ್ರೀಷ ಸಾ: ತಡಕಲ್ ಇವರು  ಬಂದು 18 ವರ್ಷದ ಹುಡಗಿಯೊಂದಿಗೆ  ಅರೀಫ ತಂದೆ ಬಾಷಾಸಾಬ  ಸಾ:ನಾಗೂರ  ಹಾ:ವ: ತಡಕಲ್  ಇತನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದು, ನನಗೆ ಮೋಟಾರ ಸೈಕಲ ಮೇಲೆ ಕರೆದುಕೊಂಡು ಅರೀಪ ಇತನ ಹೋಲದ ಕೊಂಪೆಯಲ್ಲಿ ನಿನಗೆ ಮದುವೆಯಾಗುತ್ತೆನೆ ಅಂತಾ ಪುಸಲಾಯಿಸಿ ಜಭರಿ ಸಂಭೋಗ ಮಾಡಿರುತ್ತಾನೆ. ಬೆಳಿಗ್ಗೆ 8-00 ಗಂಟೆಗೆ ನಾಗೂರ ಗ್ರಾಮದಲ್ಲಿ ತಂದು ಬಿಟ್ಟಿರುತ್ತಾನೆ ಜಬರಿ ಸಂಭೋಗ ಮಾಡಿದ ಅರೀಪ ಮತ್ತು ಇದಕ್ಕೆ ಸಹಕರಿಸಿದ ಅಂಬರೀಷ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 106/2012 ಕಲಂ, 366, 376 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ತಾಹೇರಾಬೀ ಗಂಡ ಸರದಾರಮಿಯ್ಯಾ  ವಾಡಿ ಸಾ|| ಭೀಮಳ್ಳಿ ಗ್ರಾಮ ರವರು ನಾನು ದಿನಾಂಕ 25-11-12 ರಂದು ಮೂಂಜಾನೆ 7:30 ಗಂಟೆ ಸುಮಾರಿಗೆ  ನನ್ನ ಮನೆಯ ಮುಂದಿನ ಕಟ್ಟೆಯ ಮೇಲಿನ ಕಸಗೂಡಿಸುತ್ತಾ ಇದ್ದಾಗ, ಸಲೀಮ ತಂದೆ ಬಾಬುಮಿಯ್ಯಾ ವಾಡಿ,ಮಹೆಬೂಬ ತಂದೆ ಬಾಬುಮಿಯ್ಯಾ ವಾಡಿ, ಗುಡುಮಾಬೀ, ಗಂಡ ಬಾಬುಮಿಯ್ಯಾ ವಾಡಿ ಸಾ|| ಎಲ್ಲರೂ ಬೀಮ್ಮಳ್ಳಿ ಗ್ರಾಮದವರು ಕೂಡಿಕೊಂಡು ಬಂದವರೇ ಪ್ಲಾಟದಲ್ಲಿ ನಿನಗೆ ಪಾಲು ಬೇಕು ಅಂತಾ ಕೇಳುತ್ತೀ  ಅಂತಾ ಅವಾಚ್ಯವಾಗಿ ಬೈಯುತ್ತಾ ಕೈ ಮುಷ್ಟಿ ಮಾಡಿ ಬೆನ್ನ ಮೇಲೆ ಹೊಡೆಯುತ್ತಿದ್ದಾಗ ಅಲ್ಲೇ ಇದ್ದ ನನ್ನ ಅತ್ತೆ ಗುಡುಮಾಬೀ, ಪ್ರಚೋದನೆ ಮಾಡುತ್ತಿದ್ದಳು. ಆಗ ಅಲ್ಲೇ ಇದ್ದ ಸಲೀಮ ಈತನು ಪಾಲು ಬೇಕು ಅಂತಾ ಕೇಳುತ್ತೀ ಅನ್ನುತ್ತಾ ತನ್ನ ಹತ್ತಿರ ವಿದ್ದ ಚಾಕು ತೆಗೆದು ನನ್ನ ಬಲ ರಟ್ಟೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ಅದೇ ಚಾಕುವಿನಿಂದ ನನ್ನ ಎಡ ಕಿವಿಯ ಹಿಂದೆ ಹೊಡೆದಿದ್ದು ಇದರಿಂದಾಗಿ ಗದ್ದದ ವರೆಗೆ ಹರಿದಂತೆ ಭಾರಿ ರಕ್ತಗಾಯವಾಗಿರುತ್ತದೆ. ಸಲೀಮ ಈತನು ತನ್ನ ಹತ್ತಿರ ಚಾಕು ತೋರಿಸಿ ಇನ್ನೊಮ್ಮೆ ಪ್ಲಾಟನಲ್ಲಿ ಪಾಲು ಕೇಳಲು ಬಂದರೆ ಇದೇ ಚಾಕುವಿನಿಂದ ಹೊಡೆದು ಖಲಾಷ ಮಾಡುತ್ತೇನೆ ಅಂತಾ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 384/2012 ಕಲಂ, 323, 324, 114, 504, 506 (2) ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಅಪಘಾತ ಪ್ರರಕಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ನರಸಪ್ಪ ತಂದೆ ಲಕ್ಕಪ್ಪ ಹೊಸಮನಿ ಸಾ: ಬೋರಗಿ ತಾ:ಇಂಡಿ ಹಾ||ವ||ಘಟಗೆ ಲೇಜೌಟ ಗುಲ್ಬರ್ಗಾ ರವರು ನಾನು ದಿನಾಂಕ:25/11/2012 ರಂದು ಮುಂಜಾನೆ 6:45 ಗಂಟೆಯ ಸುಮಾರಿಗೆ ರೇಲ್ವೆ ಗೇಟ ಹತ್ತಿರದ ಚಾಹ ಕುಡಿಯಲು ಹೋಟೆಲ ಮುಂದೆ ನಿಂತಾಗ ಹೈಕೋರ್ಟ ಕಡೆಯಿಂದ ಒಂದು ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದು  ಆಟೋ ನಿಲ್ಲಿಸಿದಂತೆ ಮಾಡಿ ಆಟೋವನ್ನು ಹಾಗೇ ಒಡಿಸಿಕೊಂಡು ಹೋಗಿದ್ದು ಆಟೋ ನಂ ಕೆಎ 32 8757 ನೇದ್ದು ಇರುತ್ತದೆ  ಆಟೋ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 385/2012 ಕಲಂ, 279, 337 ಐಪಿಸಿ ಸಮಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀಮತಿ ಕಾಶಿಬಾಯಿ ಗಂಡ ಗುಂಡಪ್ಪ ಕಾಂಬಳೆ ಸಾK|ಅವರಾದ(ಬಿ) ತಾ: ಜಿ: ಗುಲಬರ್ಗಾರವರು ನಾವು ದಿನಾಂ:24-11-2012 ರಂದು ರಾತ್ರಿ 9 ಗಂಟೆಗೆ  ಊಟ ಮಾಡಿ ಪಕ್ಕದ ಮನೆಯಲ್ಲಿ ಮಲಗಿದ್ದು ಬೆಳ್ಳಿಗೆ 6-00  ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ಕೀಲಿ ಮುರಿದಿತ್ತು, ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿಟ್ಟಿದ್ದ  ಬಂಗಾರದ ಅಭರಣ ಹಾಗೂ ನಗದು ಹಣ 2000/- ಹೀಗೆ ಒಟ್ಟು 18500/- ಮೌಲ್ಯದ್ದು ಕಳ್ಳತನವಾಗಿದ್ದು, ಹಾಗು ನಮ್ಮ ಮನೆಯಲ್ಲಿ ಭಾಡಿಗೆಯಿಂದ ಇರುವ ಅಂಬಾರಾಯ  ತಂದೆ ಲಕ್ಷ್ಮಣ ತಳಕೇರಿ ಇವನ ಮನೆಯ ಬೀಗ ಮುರಿದು  ಕಬ್ಬಿಣದ ಪೆಟ್ಟಿಗೆಯಲ್ಲಿಟ ಬಟ್ಟೆ ಸಾಮಾನುಗಳನ್ನು  ಚಲ್ಲಾ ಪಲ್ಲೆ ಮಾಡಿ ಪೆಟ್ಟಿಗೆಯಲ್ಲಿ ಇಟ್ಟಿರುವ ನಗದು ಹಣ 1000/- ಕಳವು ಮಾಡಿಕೊಂಡು ಹೋಗಿರುತ್ತಾರೆ.ನಮ್ಮ ಓಣೆಯ  ಬಸವರಾಜ ತಂದೆ ಲಾಲಪ್ಪಾ ಖೇಳಗಿ ಕೃಷ್ಣ ತಂದೆ ಪರಮಣ್ಣ ಮದನಕರ ಹಾಗೂ ಕಲಾವತಿ ಗಂಡ ಭೀಮಾಶಂಕರ ಇವರ ಮನೆಗಳಿಗೆ ಹೋಗಿ ಬಾಗಿಲಿನ ಕೊಂಡಿ ಮುರಿದು ಕಳವು ಮಾಡಲು  ಪ್ರಯತ್ನ ಪಟ್ಟಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 386/2012 ಕಲಂ, 380, 457 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ:25/11/2012 ರಂದು ಸಾಯಂಕಾಲ ಕಪನೂರ ಗ್ರಾಮದ ಮರಗಮ್ಮ ದೇವಿ ಗುಡಿಯ ಮುಂದಿನ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಜೂಜಾಟವಾಡುತ್ತಿದ್ದಾರೆ ಅಂತ ಬಂದ ಬಾತ್ಮಿ ಮೇರೆಗೆ ಶ್ರೀ ಆನಂದರಾವ ಎಸ್.ಎನ್. ಪಿ.ಎಸ್.ಐ. (ಕಾ.ಸು.) ಗ್ರಾಮೀಣ ಠಾಣೆ ಗುಲ್ಬರ್ಗಾ ರವರು ಮತ್ತು ಅವರ ಸಿಬ್ಭಂದಿಯವರು  ದಾಳಿ ಮಾಡಿ  6 ಜನ ಆರೋಪಿತರಾದ ವಿಜಯಕುಮಾರ ತಂದೆ ಅಣ್ಣರಾಯ ಇಟಗಾ ಸಾ|| ಕಪನೂರ,ಅನೀಲ ತಂದೆ ಅರ್ಜುನ ಇಟಗಾ ಸಾ||ಕಪನೂ,ಸುಭಾಶ ತಂದೆ ತುಳಜಪ್ಪಾ ಹಂಗರಗಿ,ಅಬ್ದುಲ ರಶೀದ ತಂದೆ ಮೀರಾಸಾಬ ಪಟ್ಟಣ,ಶರಣು @ ಶರಣಬಸ್ಸಪ್ಪಾ ತಂದೆ ಅಣ್ಣರಾಯ ನೆಲ್ಲೂರ, ನಾಗರಾಜ ತಂದೆ ಹಾಲಪ್ಪಾ ದೊಡ್ಡಮನಿ ಸಾ||ಕಪನೂರ ರವರನ್ನು ವಸಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 2820/- ರೂ ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 387/2012 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: