POLICE BHAVAN KALABURAGI

POLICE BHAVAN KALABURAGI

23 November 2012

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ನಾಗಪ್ಪ ತಂದೆ ಕಾಶಪ್ಪ ಕಟ್ಟಿ ಸಾ: ಪಿಲಕಮ್‌ ಏರಿಯಾ ಸಾ||  ವಾಡಿ ತಾ:ಚಿತ್ತಾಪೂರ ಜಿ: ಗುಲಬರ್ಗಾ ರವರು ನಾನು ದಿ:22/11/12 ರಂದು ನರೋಣಾದಲ್ಲಿಯ ದಾದಾ ಪೀರ ದರ್ಗಾ ದೇವರ ಕಾರ್ಯಕ್ರಮಕ್ಕೆ ದೇವಪ್ಪ ತಳವಾರ ಇವರ ಕ್ರೋಜರ್‌ ಕೆಎ 37 4395 ನೇದ್ದನ್ನು ಬಾಡಿಗೆಗೆ ಮಾಡಿಕೊಂಡು ನನ್ನ ಪತ್ನಿ ಹಾಗೂ ಸಂಬಂಧಿಕರನ್ನು ಕರೆದುಕೊಂಡು  ಹೊರಟಿದ್ದು. ಮದ್ಯಾಹ್ನ 2-00 ಗಂಟೆಯ ಸುಮಾರಿಗೆ ಆಳಂದ ಚೆಕ್ಕಪೋಸ್ಟ್‌‌ ಮುಂದೆ ರಾಣೇಶ ಪೀರ ದರ್ಗಾ ಕ್ಕೆ ಹೋಗುವ ರಸ್ತೆ ಹತ್ತಿರ ಹೋಗುತ್ತಿದ್ದಾಗ ಹಿಂದಿನಿಂದ ಟಿಪ್ಪರ ನಂಬರ ಕೆಎ-32 ಬಿ 5580 ನೇದ್ದರ ಚಾಲಕ ತನ್ನ  ವಾಹನವನ್ನು ಅತಿವೇಗ ಅಲಕ್ಷತನದಿಂದ ಕ್ರೋಜರನ್ನು ಓವರ ಟೇಕ ಮಾಡಲು ಹೋಗಿ ವೇಗದ ನಿಯಂತ್ರಣ ತಪ್ಪಿ ಕ್ರೋಜರಕ್ಕೆ ಡಿಕ್ಕಿ ಹೊಡೆದು  ತರಚಿಕೊಂಡ ಹೋಗಿದ್ದರಿಂದ ವಾಹನದಲ್ಲಿ ನಮಗೇಲ್ಲಾ ಸಾದಾವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:381/12  ಕಲಂ 279 337 ಐಪಿಸಿ ಸಂಗಡ 187 ಐಎಂವಿ ಆಕ್ಟ್‌‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಭೀಮಬಾಯಿ ಗಂಡ ಮಲ್ಲಿಕಾರ್ಜುನ ಕವಲಗಿ ಸಾ|| ಭೂಸನೂರ ರವರು ನಾನು  ದಿನಾಂಕ:22-11-2012 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಮನೆಯಲ್ಲಿ ಕುಳಿತಿರುವಾಗ ರಂಜಿತ @ ರಂಜು ತಂದೆ ಶರಣಪ್ಪ ಬೆಳಮಗಿ ಇತನು ಮಾನ ಭಂಗ ಮಾಡುವ ಉದ್ದೇಶದಿಂದ ಅವಳ ಮನೆಯಲ್ಲಿ ಹೋಗಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಅವಳ ಸೀರೆ ಮತ್ತು ಕುಪ್ಪಸ ಹಿಡಿದು ಅವಳೊಂದಿಗೆ ದಂಗಾಮುಸ್ತಿ ಮಾಡುತ್ತಾ ಮಾನ ಭಂಗಕ್ಕೆ ಪ್ರಯತ್ನಿಸಿದ್ದು ನಾನು  ಚೀರಾಡುತ್ತಿರುವಾಗ ನೀನು  ಚೀರಾಡುತ್ತೀಯಾ ಭೋಸಡಿ ಅಂತ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕಪಾಳ ಮೇಲೆ ಹೊಡೆದಿರುತ್ತಾನೆ ಸದರಿಯವನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆ ಗುನ್ನೆ ನಂ:97/2012 ಕಲಂ, 448, 354, 323, 504 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: