POLICE BHAVAN KALABURAGI

POLICE BHAVAN KALABURAGI

20 November 2012

GULBARGA DISTRICT REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ; ಶ್ರೀ ದುರ್ಗಾ ಪ್ರಸಾದ ತಂದೆ ನಾಗೇಶ ಬಿಸಿ  ಸಾ|| ಭೀಮಾವರಂ ಜಿ|| ಈಸ್ಟ ಗೋದಾವರಿ ರಾಝ್ಯ ಆಂದ್ರ ಪ್ರದೇಶ ಸಧ್ಯ ಸ್ವಾಮಿ ಸಮರ್ಥಆಶ್ರಮ ಗುಲಬರ್ಗಾ ರವರು ನಾನು ಮತ್ತು ನನ್ನ ಅಣ್ಣನಾದ ಶೀನು ಇಬ್ಬರು ಮೋಬಾಯಿಲ ಕರೆನ್ಸಿ ಹಾಕಿಕೊಂಡು ಬರಲು ದಿನಾಂಕ 19-11-12 ರಂದು ಸಂಜೆ 6-00 ಗಂಟೆ ಸುಮಾರಿಗೆ ಸ್ವಾಮಿ ಸಮರ್ಥಕ್ಕೆ ಎಡ ರೋಡ ಬದಿಯಿಂದ ನಡೆದುಕೊಂಡು ಹೊರಟಾಗ ಸಾಯಂಕಾಲ 7-30 ಗಂಟೆ ಸುಮಾರಿಗೆ ಎಸ್.ಬಿ. ಪಾಟೀಲ ಫ್ಯಾಕ್ಟರಿ ಸ್ವಲ್ಪ ಮುಂದೆ ಹಿಂದಿನಿಂದ ಮೋಟಾರ ಸೈಕಲ ಕೆಎ:32/8346 ಮೇಲೆ ಇಬ್ಬರು ಕುಳಿತುಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನನ್ನ ಬಲಗಾಲ ಮೊಳಕಾಲ ಮೇಲೆ ಡಿಕ್ಕಿ ಹೊಡೆದು ಭಾರಿ ರಕ್ತಗಾಯಗೊಳಿಸಿ ಗುಲಬರ್ಗಾ ಕಡೆಗೆ ವಾಹನ ಸಮೇತ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ಗುನ್ನೆ ನಂ:378/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: