POLICE BHAVAN KALABURAGI

POLICE BHAVAN KALABURAGI

16 August 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ, ದಿಪಕಕುಮಾರ  ತಂದೆ ರಾಮಕೀಶನ ಪವಾರ  ಹುದ್ದೆ. ಎನ್‌.ಇ.ಕೆ.ಎಸ್‌.ಆರ್‌.ಟಿ.ಸಿ ಆಳಂದ ವಿಭಾಗದಲ್ಲಿ ಮೇಕ್ಯಾನಿಕ ಕೆಲಸ  ಸಾ|| ವಿದ್ಯಾನಗರ ಗುಲಬರ್ಗಾರವರು ನಾನು ದಿನಾಂಕ 12/08/2012 ರಂದು ಸಾಯಂಕಾಲ 4-30 ಗಂಟೆಗೆ  ಶ್ರಾವಣ ಮಾಸದ ನಿಮಿತ್ಯ ಗೋಕರ್ಣ ದೇವಾಲಯಕ್ಕೆ ಕುಟುಂಬ ಸಮೇತ ಮನೆಗೆ ಬೀಗ ಹಾಕಿಕೊಂಡು ಹೋಗಿರುತ್ತೆವೆ.ದಿನಾಂಕ 15/08/2012 ರಂದು ಬೆಳಿಗ್ಗೆ 4-30 ಗಂಟೆ ಸುಮಾರಿಗೆ  ಗೋಕರ್ಣ ದಿಂದ  ಮರಳಿ ಗುಲಬರ್ಗಾಕ್ಕೆ ಬಂದು ನಮ್ಮ ಮನೆಗೆ ಬಂದಾಗ ಅಲಮಾರಾದ ತೆರೆದಿದ್ದು,  ಅಲಮಾರಾದಲ್ಲಿಟ್ಟಿದ್ದ  5000/- ರೂಪಾಯಿ ನಗದು ಹಣ ಮತ್ತು  ಒಂದು ತೊಲೆಯ ಬಂಗಾರದ ಬೊರಮಾಳ ಸರ್‌ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ.  ಇವುಗಳ ಒಟ್ಟು ಕಿಮ್ಮತ್ತು 24,500/- ಆಗಬಹುದು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಮೇಲಿಂದ ಠಾಣೆ ಗುನ್ನೆ ನಂ. 73/2012 ಕಲಂ. 454,457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ರಾಷ್ಟ್ರ ದ್ವಜದ ಬಗ್ಗೆ:
ಚಿತ್ತಾಪೂರ ಪೊಲೀಸ ಠಾಣೆ: ದಿನಾಂಕ 15/08/2012 ರಂದು ಮುಂಜಾನೆ 8-00 ಗಂಟೆಗೆ ಎ.ಎಮ್. ರಿಂದ 9-00 ಎ.ಎಮ್.ಕ್ಕೆ ಚಿತ್ತಾಪುರದ ಆಶ್ರಯ ಕಾಲನಿ ಹತ್ತಿರ ಇರುವ ಬ್ರಿಡ್ಜ ಆಫ್ ಹೋಪ ಎಂಬ ಸಂಸ್ಥೆಯವರು ಧ್ವಜಾರೋಹಣ ಮಾಡಿದ್ದು ಆ ಧ್ವಜದಲ್ಲಿ ಅಶೋಕ ಚಕ್ರದ ಮುದ್ರಣ ಒಂದೇ ಕಡೆ ಇದ್ದು ಮತ್ತೊಂದು ಕಡೆ ಅಶೋಕ ಚಕ್ರದ ಮುದ್ರೆ ಇರುವದಿಲ್ಲಾ ಆಂತ ಶ್ರೀ ಮಹೆಶ ಎಸ್. ಕಾಶಿ ಸಾ|| ಚಿತ್ತಾಪೂರ ರವರು ದೂರು ಸಲ್ಲಿಸಿದ  ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 75/2012 ಕಲಂ 2 Prevention of Insult to National Honor Act 1971 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ರಾಜು ತಂದೆ ಗುರುಶಾಂತಪ್ಪ ಅಷ್ಟಗಿಕರ ಸಾ: ಜಾಪರಾಬಾದ ತಾ||ಜಿ||ಗುಲಬರ್ಗಾ ರವರು ನಾನು ದಿ:14/8/2012 ರಂದು ರಾತ್ರಿ 9:30 ಗಂಟೆಗೆ ಟ್ರಾಕ್ಟರ ಇಳಿದು ಟ್ರಾಕ್ಟರ ದ ಹಿಂದುಗಡೆ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಟ್ರಾಕ್ಟ್‌ ರ ನಂ ಕೆಎ 28 ಟಿ- 1830- 1831 ನೇದ್ದರ ಚಾಲಕನು ತನ್ನ ಟ್ರಾಕ್ಟರನ್ನು ಒಮ್ಮೇಲೆ ನಿಷ್ಕಾಳಜಿತನದಿಂದ ಹಿಂದಕ್ಕೆ ತೆಗೆದುಕೊಂಡಿದ್ದರಿಂದ  ಭಾರಿ ಗಾಯವಾಗಿರುತ್ತದೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 268/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಸೂಗಪ್ಪಾ ತಂದೆ ಶಾಂತಮಲ್ಲಪ್ಪಾ ಮಣ್ಣೂರ ಸಾ: ಖಾದ್ರಿ ಚೌಕ ಹತ್ತಿರ ಆಳಂದ ರಸ್ತೆ ಗುಲಬರ್ಗಾರವರು ನಾನು ದಿನಾಂಕ.15-8-2012 ರಂದು ಬೆಳಿಗ್ಗೆ 10-30 ಗಂಟೆಗೆ ಡಬರಾಬಾದ ಕ್ರಾಸ ಸಮೀಪ ಟ್ರ್ಯಾಕ್ಟರ ನಂ.ಕೆ.ಎ.32 ಟಿಎ.4105 ನೆದ್ದರ ಚಾಲಕ ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ ನಂ.ಕೆ.ಎ.32 ಕ್ಯೂ.7934 ನೇದ್ದಕ್ಕೆ ಡಿಕ್ಕಿ ಪಡಿಸಿದ್ದರಿಂದ ಎಡಗಾಲು ಮೋಳಕಾಲು,ತೊಡೆಗೆ ಭಾರಿಗಾಯ ಮತ್ತು   ಬಲಕೈ ಮುಂಗೈಗೆ, ಎಡಗೈ ಮೊಳಕೈಗೆ ಹಾಗು ಎಡಭುಜಕ್ಕೆ  ಗುಪ್ತ ಪೆಟ್ಟು ಆಗಿರುತ್ತದೆ. ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 267/12  ಕಲಂ. 279,338  ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: