POLICE BHAVAN KALABURAGI

POLICE BHAVAN KALABURAGI

14 July 2012

GULBARGA DIST REPORTED CRIMES


ಮೋಸ ವಂಚನೆ ಪ್ರಕರಣ:
ಗ್ರಾಮೀಣ ಠಾಣೆ ಗುಲಬರ್ಗಾ: ಶ್ರೀಮತಿ ಮಹಾದೇವಮ್ಮಾ ಗಂಡ ಕೋಟೇಶ ಸಿತಾಳೆ ಸಾ||ಸಿದ್ರಾಮೇಶ್ವರ ನಿಲಯ ಬಿದ್ದಾಪೂರ ಕಾಲೋನಿ ಗುಲಬರ್ಗಾ ರವರು ದಿ|| 13/07/2012 ರಂದು ಬೆಳ್ಳಿಗೆ 6:30 ಗಂಟೆ ಸುಮಾರಿಗೆ ನಮ್ಮ ಓಣಿಯಲ್ಲಿರುವ ಹನುಮಾನ ಮತ್ತು ಲಕ್ಷ್ಮಿ ದೇವರ ದರ್ಶನ ಮಾಡಿಕೊಂಡು ಮನೆಯ ಕಡೆಗೆ ಹೊರಟಾಗ ಗುರಪಾದಪ್ಪಾ ಮಾಲಿ ಇವರ ಮನೆಯ ಹತ್ತಿರ ಮೋಟಾರ ಸೈಕಲ ಮೇಲೆ ಇಬ್ಬರು ಯುವಕರು 25-30 ವಯಸ್ಸಿನವರು ಬಂದವರೇ ನೋಡಿ ಗಾಡಿ ನಿಲ್ಲಿಸಿ ನಾವು ಪೊಲೀಸರಿದ್ದೇವೆ ಕೊರಳಲ್ಲಿ ಬಂಗಾರದ ಆಭರಣ ಹಾಕಿಕೊಂಡು ಹೋಗಬೇಡರಿ ಮನೆಯಲ್ಲಿ ಹಾಕಿಕೊಳ್ಳಿರಿ ಅಂತಾ ಹೇಳಿ ನನಗೆ ಸಿಟ್ಟು ಮಾಡಿ ಆಭರಣ ಕೊಡಿ ಪುಡಿ ಕಟ್ಟಿ ಕೊಡುತ್ತೇವೆ ಆಂತಾ ಹೇಳಿದಾಗ ನಾನು ಕೊರಳಲ್ಲಿದ್ದ 4 ತೋಲಿ ಬಂಗಾರದ ಮಂಗಳ ಸೂತ್ರ ಅ.ಕಿ 110000/- ರೂ ನೇದ್ದನ್ನು ಕಾಗದದ ಪುಡಿಯಲ್ಲಿ ಮಂಗಳ ಸೂತ್ರದ ಬದಲಾಗಿ ಮಣ್ಣನ್ನು ಕಟ್ಟಿಕೊಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 229/2012 ಕಲಂ 420 ಸಂಗಡ 34  ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮಹಾದೇವಪ್ಪ ತಂದೆ ಕುಶಪ್ಪ ನರೋಣಾ ರವರು ನನ್ನ ಮಗನಾದ ಸಂಜೀವಕುಮಾರ ಈತನ ಲಗ್ನ ಕಳೆದ ವರ್ಷ ಗುಲಬರ್ಗಾ ನಗರದ ಯಮುನಾ ನಗರ ಬಡಾವಣೆಯ ಮಹಾದೇವಪ್ಪ ತಂದೆ ಗುಂಡಪ್ಪ ಪಾಟೀಲ್ ಈತನ ಮಗಳಾದ ಅಶ್ವಿನಿ ಇವಳ ಜೊತೆ ಲಗ್ನ ಮಾಡಿದ್ದು, ಸಂಜೀವಕುಮಾರ ಈತನು ಬೆಂಗಳೂರು ನಗರದ ಸ್ಮಾಟ್ ಪ್ಲೇ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದು, ಸದರಿಯವನು ತನ್ನ ಹೆಂಡತಿಯೊಂದಿಗೆ 3-4 ತಿಂಗಳು ಕಳೆದು ಮರಳಿ ಮನೆಗೆ ಬಂದಿದ್ದು, ನನ್ನ ಸೊಸೆ ಅಶ್ವಿನಿ ಇವಳು ತನ್ನ ತವರು ಮನೆಗೆ ಹೋದವಳು ನಾವು ಸೊಸೆಗೆ ಕರೆಯಲು ಅಲ್ಲಿಗೆ ಹೋದಾಗ ಸೊಸೆ ಬರದೇ ಇರುವದರಿಂದ ನನ್ನ ಮಗ ತನ್ನ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ತಾನು ಬೆಂಗಳೂರಿಗೆ ನೌಕರಿಗೆ ಹೋಗುತ್ತೇನೆಂದು ಹೋದವನು ಮರಳಿ ಫೋನ್ ಮಾಡದೇ ಇರುವದರಿಂದ ನಾನು ಬೆಂಗಳೂರಿಗೆ ಹೋಗಿ ಸದರಿ ಕಂಪನಿಗೆ ಹೋಗಿ ವಿಚಾರಿಸಿದ್ದು, ನನ್ನ ಮಗ ನೌಕರಿಗೆ ಬಂದಿರುವದಿಲ್ಲಾ ಅಂತ ಕಂಪನಿಯವರು ತಿಳಿಸಿದರು. ಈ ಬಗ್ಗೆ ಬೆಂಗಳೂರು ನಗರದ ಮಹಾದೇವಪೂರ ಪೊಲೀಸ್ ಠಾಣೆಯಲ್ಲಿ ತನ್ನ ಮಗ ಕಾಣೆಯಾದ ಬಗ್ಗೆ ದೂರು ಸಲ್ಲಿಸಿದ್ದರಿಂದ ಪ್ರಕರಣ ದಾಖಲಾಗಿದ್ದು ಇರುತ್ತದೆ. ದಿನಾಂಕ 12-07-2012 ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಮಹಾದೇವಪ್ಪ ತಂದೆ ಗುಂಡಪ್ಪ ಪಾಟೀಲ್, ಸಿದ್ದಾರೂಢ ತಂದೆ ಮಹಾದೇವಪ್ಪ ಪಾಟೀಲ್ ಸಂಗಡ 10-12 ಜನರು ಸಾ || ಎಲ್ಲರೂ ಯಮುನಾ ನಗರ ಕುಸನೂರ ರೋಡ ಗುಲಬರ್ಗಾ ರವರು ಬಂದು ನಿನ್ನ ಮಗ ಸಂಜೀವಕುಮಾರ ಎಲ್ಲಿದ್ದಾನೆ ಅಂತ ಅವಾಚ್ಯದಿಂದ ಬೈಯುತ್ತಾ, ಮಹಾದೇವಪ್ಪ ಪಾಟೀಲ್ ಈತನು ತಾನು ತನ್ನ ಮಗಳಿಗೆ ಲಗ್ನದಲ್ಲಿ ಕೊಟ್ಟಿದ್ದ ಬಂಗಾರ, ಬೆಳ್ಳಿ ಕೊಡು ಅಂತ ಹೊಡೆ, ಬಡೆ ಹಲ್ಲೆ ಮಾಡಿದ್ದು ಅಲ್ಲದೇ, ನನ್ನ ಹೆಂಡತಿಗು ಸಹ ಸಿದ್ದಾರೂಡ ತಂದೆ ಮಹಾದೇವಪ್ಪ ಪಾಟೀಲ್ ಈತನು ಮಾನಭಂಗ ಮಾಡುವ ಉದ್ದೇಶದಿಂದ ಕೈ ಹಿಡಿದು ಎಳೆದಾಡಿರುತ್ತಾನೆ. ಅಲ್ಲದೆ ಮಹಾದೇವಪ್ಪ ಹಾಗು ಇನ್ನುಳಿದ 10-12 ಜನರು ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 50/2012 ಕಲಂ 143, 147, 323, 354, 504 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ. ಗುಂಡೇರಾವ ತಂದೆ ನರಹರರಾವ ಕುಲಕರ್ಣಿ ಸಬ್. ಡಿವಿಜನ್ ಇಂಜಿನಿಯರ್ :ಬಿ.ಎಸ್.ಎನ್.ಎಲ್ ಆಫೀಸ್ ಆಳಂದ ರವರು, ಹಿರೋಳ್ಳಿ ಗ್ರಾಮದಲ್ಲಿ ದಿನಾಂಕ:12/07/2012 ರ ರಾತ್ರಿ 2 ಗಂಟೆಯಿಂದ ಬೆಳಗಿನ 4-00 ಗಂಟೆಯ ಮಧ್ಯದ ಅವಧಿಯಲ್ಲಿ ಹಿರೋಳ್ಳಿಯ ಗ್ರಾಮದಲ್ಲಿನ  ಬಿ.ಎಸ್.ಎನ್.ಎಲ್ ಟಾವರ ಆರ್.ಎಫ್.ಕೇಬಲ್ ವಾಯರ್ ಅಂದಾಜು 120 ಮೀಟರ ನಷ್ಟು ಅ.ಕಿ 38000/- ಕೀಮ್ಮತ್ತಿದು ಯಾರೋ ಕಳ್ಳರು ಕತ್ತರಿಸಿಕೊಂಡು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 39/2012 ಕಲಂ: 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಅಪಘಾತ ಪ್ರಕರಣ:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ಚಿತಾವಲಿ ತಂದೆ ಅಲ್ಲಾವುದ್ದಿನ ಕೋಟಿ ವ-21 ಸಾ|| ಹೊಸೂರ ಗ್ರಾಮ ರವರು ನಾನು ಮತ್ತು ಖಾಸಿಂಸಾಬ ತಂದೆ ಬಡೆಸಾಬ ಚಿಂತಗುಂಟಿ ರವರು  ದಿನಾಂಕ 13/07/12 ರಂದು 7-00 ಪಿ.ಎಮ್.ಕ್ಕೆ  ಟಿ.ವಿ.ಎಸ್. ಗಾಡಿ ನಂಬರ ಕೆಎ-32-ಆರ್-6104 ನೇದ್ದರ ಮೇಲೆ ಚಿತ್ತಾಫೂರದಿಂದ ಹೊಸೂರಕ್ಕೆ ಹೋಗುತ್ತಿರುವಾಗ ಹಣಮಂತ ಸುಲ್ತಾನಪುರ ಇವರ ಹೊಲದ ಹತ್ತಿರ ರೋಡಿನಲ್ಲಿ ಎದುರಿನಿಂದ ಟಂಟಂ ಗಾಡಿ ನಂ ಕೆಎ-32-ಬಿ-5146 ನೇದ್ದರ ಚಾಲಕ ಈಶ್ವರರಾಜ ತಂದೆ ಸಿದ್ದಣ್ಣ ರಾಮತೀರ್ಥ ಸಾ|| ಸಾತನೂರ ಈತನು ಅತಿವೇಗ ಹಾಗು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಮ್ಮ ಗಾಡಿಗೆ ಡಿಕ್ಕಿ ಪಡಿಸಿ ನನಗೆ ಮತ್ತು ಹಿಂದೆ ಕುಳಿತ ಖಾಸಿಂಸಾಬನಿಗೆ ಗಾಯಗೊಳಿಸಿದ್ದು, ಇಬ್ಬರಿಗೂ ಚಿತ್ತಾಫೂರ ಆಸ್ಪತ್ರೆಯಲ್ಲಿ ಉಪಚಾರ ಪಡೆದುಕೊಂಡು ಖಾಸಿಂಸಾಬನಿಗೆ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯದಲ್ಲಿ ಖಾಸಿಂಸಾಬನು ಮೃತಪಟ್ಟಿರುತ್ತಾನೆ  ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 68/2012 ಕಲಂ, 279,337,304(ಎ) ಐ.ಪಿ.ಸಿ ಸಂಗಡ 187 ಐ.ಎಮ್.ವಿ ಆಕ್ಟ್   ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.    

No comments: