POLICE BHAVAN KALABURAGI

POLICE BHAVAN KALABURAGI

25 May 2012

GULBARGA DIST REPORTED CRIMES


ಮೋಟಾರ ಪಂಪ ಕಳ್ಳತನ:
ಆಳಂದ ಪೊಲೀಸ್ ಠಾಣೆ: ಶ್ರೀ  ಸೂರ್ಯಕಾಂತ ತಂದೆ ವಿಠ್ಠೋಬಾ ಗೂಂಜೊಟಿ ಸಾ||ಖಜೂರಿ  ರವರು ನಮ್ಮೂರಿನ ಸೀಮಾಂತರದಲ್ಲಿ ಹೊಲ ಸರ್ವೆ ನಂ 412 ರಲ್ಲಿ 5 ಎಕರೆ ಜಮೀನು ನನ್ನ ಹೆಸರಿನಲ್ಲಿ ಇದ್ದು ಈ ಹೊಲದಲ್ಲಿ ತೋಗರಿ,ಉಳ್ಳಾಗಡ್ಡಿ ,ಗೋದಿ ಇತ್ಯಾಧಿ ಬೆಳೆಗಳು ಬೆಳೆಯುತ್ತೇವೆ ದಿನಾಂಕ 20/0/2012 ರಂದು ಹೊಲದಲ್ಲಿ ನಾನು ಮತ್ತು ನನ್ನ ಆಣ್ಣನಾದ ಚಂದ್ರಕಾಂತ ಕೆಲಸ ಮಾಡಿಕೊಂಡು ಮನೆಗೆ ಹೋಗಿರುತ್ತೇವೆ ದಿನಾಂಕ: 21/05/2012 ರಂದು ಬೆಳಿಗ್ಗೆ 6.00 ಗಂಟೆಗೆ ಹೊಲಕ್ಕೆ ಹೋಗಿ ನೋಡಲಾಗಿ ಭಾವಿ ಬಳಿ ಇದ್ದ 3. ಹೆಚ್.ಪಿ  ಕರೆಂಟ ಮೋಟಾರ ಅಕಿ 8000/ ರೂ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 101/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಹರಣ ಮತ್ತು ಅತ್ಯಾಚಾರ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ: ನಾನು ದಿನಾಲು ಸಿಂದಗಿಯಲ್ಲಿರುವ ಕಾಲೇಜಿಗೆ ಹೋಗಿ ಬರುತ್ತೆನೆ.  ನಮ್ಮ ಓಣಿಯ ಮಶಾಖಸಾಬ ಎಂಬುವವನು ನಾನು ಕಾಲೇಜಿಗೆ ಹೋಗಿ ಬರುವಾಗ ನನ್ನೊಂದಿಗೆ ಸಲುಗೆಯಿಂದ ಮಾತನಾಡುವುದು, ನಿನ್ನನ್ನು ಮದುವೆ ಮಾಡಿಕೊಳ್ಳುತ್ತೆನೆ ಅಂತಾ ಹೇಳುತ್ತಿದ್ದನು.ಅದಕ್ಕೆ ನಾನು ಸಮ್ಮತಿಸಿರುವದಿಲ್ಲ. ದಿನಾಂಕ 07-05-2012 ರಂದು ರಾತ್ರಿ 9 ಗಂಟೆಯ ಸುಮಾರಿಗೆ ನಾನು ಸಂಡಾಸಕ್ಕೆ ನಮ್ಮ ಮನೆಯ ಮುಂದಿನ ಸಿ.ಸಿ ರೋಡ ಮೇಲೆ ಹೋಗುತ್ತಿದ್ದಾಗ  ನನ್ನ ಹಿಂದಿನಿಂದ ಕ್ರುಜರ್ ಜೀಪ್ ತಂದು ಮಶಾಖಸಾಬ ಇತನು ನನಗೆ ಒತ್ತಾಯ ಪೂರ್ವಕವಾಗಿ ಎತ್ತಿ ಕ್ರೋಜರ್ ಜೀಪ್ ನಲ್ಲಿ ಹಾಕಿದನು ನಾನು ಬೇಡ ಅಂದರು ಕೂಡಾ ಮಶಾಖ ಇತನು ಡ್ರೈವರನಿಗೆ  ಗಾಡಿ  ಎಲ್ಲಿ  ನಿಲ್ಲಿಸಬೇಡಾ  ಶಹಾಪೂರಕ್ಕೆ ನಡಿ ಅಂತಾ ಹೇಳಿದನು ನನಗೆ ಶಾಹಾಪೂರಕ್ಕೆ ಕರೆದುಕೊಂಡು ಹೋದನು ಅಲ್ಲಿ ನಮ್ಮೂರಿನ ಸಿದ್ದು ತಂದೆ ಬಸಣ್ಣ ಯಡ್ರಾಮಿ ಇತನು ಬಂದನು ಅವರಿಬ್ಬರು ನನ್ನನ್ನು ನಿನಗೆ ನಿನ್ನ ತಂದೆ ತಾಯಿ ಹತ್ತಿರ ಕರೆದುಕೊಂಡು ಹೋಗುತ್ತೆವೆ ಅಂತಾ ಹೇಳಿ ಸಿಂದನೂರಕ್ಕೆ  ಕರೆದುಕೊಂಡು ಹೋದರು, ನಾನು ಇಲ್ಲಿಗೆಕೆ ಕರೆದುಕೊಂಡು ಬಂದಿರುವಿರಿ ಅಂತಾ ಅಂದಿದಕ್ಕೆ ನನಗೆ ಜೀವದ ಬೇದರಿಕೆ ಹಾಕಿರುತ್ತಾರೆ. ದಿನಾಂಕ 08-05-2012 ರಿಂದ 11-05-2012 ರ ಬೆಳಗಿನವರೆಗೆ ಅಲ್ಲೆ ಕೂಡಿ ಹಾಕಿ ದಿನಾಂಕ 11-05-2012 ರಂದು ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದ ಮಶಾಖನ ಚಿಕ್ಕಮ್ಮಳ ಮನೆಗೆ ಕರೆದುಕೊಂಡು ಹೋಗಿ ಅಲ್ಲಿಂದ  ದಿನಾಂಕ 19-05-2012 ರ ಬೆಳಿಗಿನ ವರೆಗೆ ನನಗೆ ಮಶಾಖಸಾಬ ಇತನು ಹಗಲು ರಾತ್ರಿಯನ್ನೆದೆ ಒತ್ತಾಯ ಪೂರ್ವಕವಾಗಿ ನನ್ನೊಂದಿಗೆ ಸಂಬೋಗ ಮಾಡಿರುತ್ತಾನೆ. ಆತನ ಗೆಳೆಯನಾದ ಸಿದ್ದು ಇತನು ಪ್ರಚೋದನೆ ಮಾಡಿರುತ್ತಾನೆ.ದಿನಾಂಕ 19-05-2012 ರಂದು ಬೆಳಿಗ್ಗೆ ನಾನು ಸಂಡಾಸಕ್ಕೆ ಹೋಗಿ ಬರುತ್ತೆನೆ ಅಂತಾ ಹೇಳಿ ಊರಿಗೆ ಬಂದು ನಡೆದ ವಿಷಯ ನನ್ನ ತಂದೆ ತಾಯಿವರಿಗೆ ತಿಳಿಸಿರುತ್ತೆನೆ. ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 41/2012 ಕಲಂ 366 (ಎ) 344, 109, 506, 376 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: