ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ
ಪೊಲೀಸ್ ಠಾಣೆ:ಶ್ರೀ.ಗೊಬರುರಾವ  ತಂದೆ  ಕೃಷ್ಣ ರಾವುತ್ ಸಾ:ಟೀಮನಪೂರ
ರಾಯಗಡ ಪೋಷ್ಟಿ ನವರಂಗಪೂರ  ಜಿಲ್ಲೆ  ರಾಜ್ಯ|| ಒರಿಸ್ಸಾ
ರವರು  ನಾನು ಕೆಎ-01 ಡಿ-9547 ರ ಬೋರವೆಲ್  ಲಾರಿಯ  ಮೇಲೆ ಹೆಲ್ಪರ್ ಅಂತಾ ಕೆಲಸ
ಮಾಡಿಕೊಂಡಿರುತ್ತೆನೆ.  ನಮ್ಮ ಗ್ರಾಮದ ಗಾಗುಡರಾಮ ತಂದೆ ಬಾಲಕ  ಯಾದವ  ಖೇತುರಾಮ ತಂದೆ ಖಟಲಿ ಮಾಲಿ  ಹಾಗೂ ಲಾಲು ತಂದೆ ಲಕ್ಕಮ್ಮ
ವಡ್ಡೆ  ನಾಲ್ಕು ಜನರು
ಬೋರವೆಲ್ ಲಾರಿ ಮೇಲೆ  ಹೇಲ್ಪರ್  ಕೆಲಸ  ಮಾಡುತ್ತಿದ್ದೆವೆ. ದಿನಾಂಕ:29/05/2012 ರಂದು  ಬೆಳಿಗ್ಗೆ ಆಳಂದ  ತಾಲೂಕಿನ  ಚಿಂಚೋಳಿ  ಗ್ರಾಮದ   ಹೊಲದಲ್ಲಿ ಬೊರವಲ್  ಹಾಕಿ ನಾವು
ಅಕ್ಕಲಕೋಟಕ್ಕೆ ಹೋಗಲು ಚಿಂಚೋಳ್ಳಿ ಮಾರ್ಗವಾಗಿ ಹೋಗುತ್ತಿದೆವು, ಲಾರಿ ಎಮ್, ಮೋಹನ ತಂದೆ  ಮುತ್ತು ಸ್ವಾಮಿ ಸಾ:ಪಾಳಮೇಡ  ಇತನು ನಡೆಸುತ್ತಿದ್ದನು .ಮದ್ಯಾನ 2:30 ಗಂಟೆಯ ಸುಮಾರಿಗೆ ನಾವು ಕುಳಿತ ಹೊರಟ ಬೊರವೆಲ್ಲ ಲಾರಿ ಚಾಲಕನು
ಸರಸಂಬಾ ಗ್ರಾಮದ  ಕೆಇಬಿ ಖಜಾನೆ ಹತ್ತಿರ ರಸ್ತೆಯಲ್ಲಿ
ಜೊತು ಕೆಳಗೆ ಆಗದ  ಕರೇಂಟ ಇರುವ
ವಿದ್ಯುತ್ ವೈಯರ್ ನೋಡದೆ ನಿರ್ಲಕ್ಷತನದಿಂದ ಎಮ್.
ಮೋಹನ ತಂದೆ ಮುತ್ತು ಸ್ವಾಮಿ ಇತನು ಲಾರಿ ಚಲಾಯಿಸಿದ್ದರಿಂದ ಲಾರಿಯಲ್ಲಿ ಕುಳಿತ ಗಾಗುಡರಾಮ ತಂದೆ ಬಾಲಕ ಯಾದವ ಸಾ:ಟೀಮನಪೂರ ಇತನಿಗೆ ಹತ್ತಿ
ಶಾಖ  ಹೊಡೆದಿದ್ದರಿಂದ   ವಿದ್ಯೂತ್ ವೈಯರ್ ಶಾಖದಿಂದ  ಮೃತಪಟ್ಟಿರುತ್ತಾನೆ ಸರಸಂಭಾ ಗ್ರಾಮದ ರೋಡಿನ ಹತ್ತಿರದ  ರಸ್ತೆಯಲ್ಲಿ  ಜೇಸ್ಕಾ ಕೇಂದ್ರದ  ಅಧಿಕಾರಿಗಳು  ಜೋತು ಬಿದ್ದ ವಿದ್ಯೂತ್  ಕಂಬದ ವೈಯರ್ ಜೇಸ್ಕಾಂ ಅಧಿಕಾರಿಗಳು
ಸರಿಪಡಿಸದೆ ಕರ್ತವ್ಯದಲ್ಲಿ ನಿರ್ಲಕ್ಷತನ ತೋರಿಸಿರುತ್ತಾರೆ.ಕಾರಣ ಜೇಸ್ಕಾಂ
ಅಧಿಕಾರಿಗಳಾದ ಅಶೋಕ ಕುಮಾರ  ಗೂಡುರೆ  ಮತ್ತು   ಬೋರವೇಲ್ ಲಾರಿ ನಂ ಕೆ,- ಎ 01 ಡಿ- 9547
ರ  ಚಾಲಕನ  ಮೇಲೆ   ಕಾನೂನು ಪ್ರಕಾರ  ಕ್ರಮ ಜರುಗಿಸಬೇಕು  ಅಂತಾ  ಹೇಳಿಕೆ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ
ಗುನ್ನೆ  ನಂ 24/2012
ಕಲಂ 285 304 (ಎ) ರ  ಪ್ರಕಾರ  ಗುನ್ನೆ ದಾಖಲಿಸಿಕೊಂಡು
ತನಿಖೆ  ಕೈಕೊಂಡಿರುತ್ತಾರೆ. 
ಕಳ್ಳತನ
ಪ್ರಕರಣ:
ಗುಲಬರ್ಗಾ
ಗ್ರಾಮೀಣ ಪೊಲೀಸ ಠಾಣೆ: ಶ್ರೀಶರಣರೆಡ್ಡಿ  ತಂ/ ಅನಾಂತರೆಡ್ಡಿ ಬಂಡಿ ಮು:ರಾಘಾಪೂರ ರಾಮ ನಗರ ಗುಲಬರ್ಗಾ ರವರು
ನಾನು ಸಫಾರಿ ದಾಭಾದಲ್ಲಿ  ಕೆಲಸ ಮಾಡು ತ್ತಿದ್ದು  ನಾನು ದಿನಾಲು 
ಹೋಗಿ ಬರಲಿಕ್ಕೆ  ನನ್ನ ಮೋಟಾರ ಸೈಕಲ ನಂ ಕೆಎ
32 ಜೆ 4759  ನೇದ್ದನ್ನು  ಉಪಯೋಗಸುತ್ತೇನೆದಿನಾಂಕ: 26-04-2012 ರಂದು
ರಾತ್ರಿ  ಕೆಲಸ ಮುಗಿಸಿಕೊಂಡು ಸಫಾರಿ ದಾಭಾದ
ಪಾರ್ಕಿಂಗ ನಲ್ಲಿ  ಗಾಡಿ  ನಂ ಕೆಎ 32 ಜೆ 4759  ನೇದ್ದನ್ನು ನಿಲ್ಲಿಸಿದ್ದು, ರಾತ್ರಿ 12  ಗಂಟೆಗೆ 
ಮನೆಗೆ ಹೋಗುವ ಕುರಿತು ಮೋಟಾರ ಸೈಕಲ ನೋಡಲಾಗಿ 
ನನ್ನ ಮೋಟಾರ ಸೈಕಲ ಇರಲಿಲ್ಲ .ಯಾರೋ 
ಕಳ್ಳರು  ಕಳವು ಮಾಡಿಕೊಂಡು ಹೋಗಿರುತ್ತಾರೆ.
ಅಂತಾ  ಹೇಳಿಕೆ ದೂರು ಸಲ್ಲಿಸಿದ ಸಾರಾಂಶದ  ಮೇಲಿಂದ ಠಾಣೆ
ಗುನ್ನೆ  ನಂ: 179/2012 ಕಲಂ 379 ಐಪಿಸಿ ಪ್ರಕಾರ  ಗುನ್ನೆ ದಾಖಲಿಸಿಕೊಂಡು
ತನಿಖೆ  ಕೈಕೊಂಡಿರುತ್ತಾರೆ. 
 
 
 
 
No comments:
Post a Comment