POLICE BHAVAN KALABURAGI

POLICE BHAVAN KALABURAGI

07 April 2012

GULBARGA DIST REPORTED CRIMES

ಮಟಕಾ ಜೂಜಾಟ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ:ದಿನಾಂಕ 06/04/2012 ರಂದು ಮುಂಜಾನೆ ದುತ್ತರಗಾಂವ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ಶ್ರೀ ಎಸ.ಎಸ. ದೊಡ್ಡಮನಿ ಮತ್ತು ಠಾಣೆಯ ಸಿಬ್ಬಂದಿಯವರಾದ ಶಿವರಾಯ, ಹಜರತ ಅಲಿ, ಮಲ್ಲಿಕಾರ್ಜುನ,ಸಿಪಿಸಿ ಮತ್ತು ಪಂಚರಾದ ಶ್ರೀ ಧರ್ಮರಾಯ ತಿಗಶೇಟ್ಟಿ, ಶ್ರೀ ಬಸವರಾಜ ಕೋರೆ ಸಾ|| ನಿಂಬರ್ಗಾ ಇವರನ್ನು ಜೋತೆಗೆ ಕರೆದುಕೊಂಡು ದುತ್ತರಗಾಂವ ಗ್ರಾಮದ ಗ್ರಾಮ ಪಂಚಾಯತ ಮುಂದೆ ಇಬ್ಬರು ವ್ಯಕ್ತಿಗಳು ಹಿರೋ ಹೊಂಡಾ ಮೋಟಾರ ಸೈಕಲ ನಿಲ್ಲಿಸಿಕೊಂಡು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಟ್ಟು ಸಾರ್ವಜನಿಕರಿಗೆ ಮೋಸ ಮಾಡುತ್ತಿರುವವರನ್ನು ದಾಳಿ ಮಾಡಲಾಗಿ ಒಬ್ಬ ವ್ಯಕ್ತಿ ಮಾತ್ರ ಸಿಕ್ಕಿದ್ದು ಇನ್ನೊಬ್ಬನು ಓಡಿ ಹೋಗಿರುತ್ತಾನೆ. ಆತನ ಹೆಸರು ಸಿದ್ದಲಿಂಗಯ್ಯಾ ತಂದೆ ಗುರುಮುರ್ತಯ್ಯಾ ವಿಶ್ವನಾಥ ಮಠ ಸಾ|| ದುತ್ತರಗಾಂವ ಅಂತ ತಿಳಿಸಿದನು, ಅತನನ್ನು ಚೆಕ್ಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 920/-, ಮಟಕಾ ಚೀಟಿ, ನೋಕಿಯಾ ಮೋಬೈಲ, ಹೀರೊ ಹೊಂಡಾ ಸ್ಪ್ಲೆಂಡರ ಮೋಟಾರ ಸೈಕಲ ನಂ. ಕೆ.ಎ-32, ಇಎ-6806 ನೇದ್ದುವಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಓಡಿ ಹೋಗಿದ್ದ ಆತನ ಹೆಸರು ವಿಚಾರಿಸಲು ರಾಜಕುಮಾರ ತಂದೆ ಶರಣಪ್ಪ ಜಮಾದಾರ ವ|| 36 ವರ್ಷ, ಜಾ|| ಕಬ್ಬಲಿಗರು, || ಕೂಲಿಕೆಲಸ, ಸಾ|| ದುತ್ತರಗಾಂವ ಅಂತ ತಿಳಿಸಿದ್ದು, ಮತ್ತು ಮಟಕಾ ಚೀಟಿಗಳನ್ನು ಮುನ್ನಳ್ಳಿ ಗ್ರಾಮದ ಶಿವಾನಂದ ಫಿರಂಗೆ ಎಂಬುವವನಿಗೆ ಕೊಡುತ್ತಿದ್ದು ಅವನೆ ಬಂದು ತೆಗೆದುಕೊಂಡು ಹೋಗುತ್ತಾನೆ ತಿಳಿದು ಬಂದ ಮೇರೆಗೆ ಠಾಣೆ ಗುನ್ನೆ ನಂ: 25/2012 ಕಲಂ 78 (3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮಟಕಾ ಜೂಜಾಟ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 06/04/2012 ರಂದು ಮಧ್ಯಾಹ್ನ ನಿಂಬರ್ಗಾ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರವಿರುವ ಮರಗಮ್ಮಾ ದೇವಸ್ಥಾನದ ಕಟ್ಟೆಯ ಮೇಲೆ ಮಟಕಾ ಜೂಜಾಟ ನಡೆದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ಶ್ರೀ ಎಸ.ಎಸ. ದೊಡ್ಡಮನಿ ಮತ್ತು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ಶಿವರಾಯ, ಹಜರತ ಅಲಿ, ಮಲ್ಲಿಕಾರ್ಜುನ, ಭೀಮಾಶಂಕರ ಸಿಪಿಸಿ ರವರೆಲ್ಲರೂ ನಿಂಬರ್ಗಾ ಗ್ರಾಮದ ಮರಗಮ್ಮಾ ದೇವಸ್ಥಾನದ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ 3 ಜನರು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಟ್ಟು ಸಾರ್ವಜನಿಕರಿಗೆ ಮೋಸ ಮಾಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಮಲ್ಲಿಕಾರ್ಜುನ ತಂದೆ ಶರಣಪ್ಪ ಬಿದನಕರ ಸಾ|| ನಿಂಬರ್ಗಾ, ಇತನ ಹತ್ತಿರ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 210/-, ಬಾಲ ಪೆನ್ನ, ಒಂದು ಮಟಕಾ ಚೀಟಿ ಮತ್ತು ಒಂದು ಸ್ಪೈಸ ಮೋಬೈಲ ಇದರಲ್ಲಿ ಸಿಮ ಕಾರ್ಡ ನಂ. 01] 9902616621, & 8197931160 ಅ.ಕಿ 500/- ರೂ. ದೊರೆತವು, ದಾನಪ್ಪ ತಂದೆ ನಿಂಗಪ್ಪ ಭೂಸನೂರ ಸಾ|| ಹಿತ್ತಲಶಿರೂರ ಇವನ ಹತ್ತಿರ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 190/-, ಒಂದು ಬಾಲ ಪೆನ್ನ, ಒಂದು ಮಟಕಾ ಚೀಟಿ ಮತ್ತು ಒಂದು ನೋಕಿಯಾ ಮೋಬೈಲ ಇದರಲ್ಲಿ ಸಿಮ ಕಾರ್ಡ ನಂ: 9741801220 ಅ.ಕಿ 400/- ರೂ. ದೊರೆತವು, ಶಿವಯೋಗೆಪ್ಪ ತಂದೆ ಶಿವಲಿಂಗಪ್ಪ ಹುಗ್ಗಿ ಸಾ|| ಹಿತ್ತಲಶಿರೂರ ಇವನ ಹತ್ತಿರ ಮಟಕಾ ಜೂಜಾಟಕ್ಕೆ ಬಳಸಿದ ನಗದು ಹಣ 260/-, ಒಂದು ಬಾಲ ಪೆನ್ನ, ಒಂದು ಮಟಕಾ ಚೀಟಿ ದೊರೆತವು, ಹೀಗೆ ಒಟ್ಟು ಈ ಮೂರು ಜನರಿಂದ ನಗದು ಹಣ 660/-, 3 ಮಟಕಾ ಚೀಟಿ, 03 ಬಾಲ ಪೆನ್ನ, 2 ಮೋಬೈಲಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಳ್ಳಲಾಗಿದೆ.ಈ ಮೂರು ಜನರು ಮಟಕಾ ಚೀಟಿಗಳನ್ನು ಭಾಷಾಸಾಬ ಸಾ|| ಜೇವೂರ ಇವರಿಗೆ ಕೊಡುತ್ತಿದ್ದು ಅವರೆ ಬಂದು ತೆಗೆದುಕೊಂಡು ಹೋಗುತ್ತಾರೆ ಬರದೆ ಇದ್ದಲ್ಲಿ ಅವರ ದೂರವಾಣಿ ಸಂಖ್ಯೆ 09545920976 ನೇದ್ದಕ್ಕೆ ನಮೂದಿಸುತ್ತೆವೆ ಅಂತ ಹೇಳಿದ್ದ ಮೇರೆಗೆ ಠಾಣೆ ಗುನ್ನೆ ನಂ. 26/2012 ಕಲಂ 78(3) ಕೆ.ಪಿ ಆಕ್ಟ ಮತ್ತು 420 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: