POLICE BHAVAN KALABURAGI

POLICE BHAVAN KALABURAGI

28 March 2012

GULBARGA DIST

ಆರು (6) ಜನ ಸರಗಳ್ಳರ ಬಂಧನ, ಸುಮಾರು 10 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳು, ಹಾಗೂ ಮೋಟಾರ ಸೈಕಲಗಳ ವಶ .
ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೋಪಿತ ಪತ್ತೆ ಕುರಿತು ಮಾನ್ಯ ಶ್ರೀ ಮಹಮ್ಮದ ವಜೀರ ಅಹ್ಮದ ಐ.ಪಿ.ಎಸ್ ಐ.ಜಿ.ಪಿ ಸಾಹೇಬರು ಈಶಾನ್ಯ ವಲಯ ಗುಲಬರ್ಗಾ ಹಾಗೂ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಶ್ರೀ ಭೂಷಣ ಭೋರಸೆ ಐಪಿಎಸ್ ಎ.ಎಸ್.ಪಿ ಗುಲಬರ್ಗಾ, ಶ್ರೀ ಎ.ಡಿ ಬಸಣ್ಣನವರ ಡಿ.ಎಸ್.ಪಿ ರವರ ಮಾರ್ಗದರ್ಶನದಲ್ಲಿ ನಿನ್ನೆ ದಿನಾಂಕ 27/3/2012 ರಂದು ಮದ್ಯಾಹ್ನ ವಿಶೇಷ ತನಿಖಾ ತಂಡದ ಆಧಿಕಾರಿಗಳಾದ ಶ್ರೀ ಚಂದ್ರಶೇಖರ ಬಿ.ಪಿ, ಡಿಜಿ ರಾಜಣ್ಣ, ಜೆ.ಹೆಚ್. ಇನಾಮದಾರ, ವಿಜಯ ಅಂಚಿ, ಟಿ.ಹೆಚ್. ಕರಿಕಲ್, ಪಂಡಿತ ಸಗರ, ಸಂಜೀವಕುಮಾರ, ಪ್ರದೀಪ ಕೊಳ್ಳಾ , ಮಾಣಿಕಸಿಂಗ ರಾಠೋಡ ಹಾಗೂ ಸಿಬ್ಬಂದಿ ಜನರು ಖಚಿತ ಭಾತ್ಮಿ ಮೇರೆಗೆ ನಗರದ ವಿರೇಂದ್ರ ಪಾಟೀಲ ಬಡಾವಣೆ ಜಿಡಿಎ ಕಾಲೋನಿ ಹತ್ತಿರ ಸಂಶಯಾಸ್ಪದವಾಗಿ ಮೋಟಾರ ಸೈಕಲಗಳ ಮೇಲೆ ತಿರುಗಾಡುತ್ತಿದ್ದವರ ಮೇಲೆ ಮಿಂಚಿನ ದಾಳಿ ಮಾಡಿ ಕುಖ್ಯಾತ ಸರಗಳ್ಳತನ ಮಾಡುವ ಜನರಾದ ಅರುಣ ತಂದೆ ಮೊಹನ ಆಡೆ ವಃ 24 ವರ್ಷ ಸಾ ಪಿಲ್ಟರ ಬೇಡ್ ತಾಂಡಾ ಗುಲಬರ್ಗಾ, ಲಕ್ಷ್ಮಿಕಾಂತ @ ಚಿನ್ಯಾ ತಂದೆ ರಮೇಶ ಕೌರವ ವಃ 20 ವರ್ಷ ಸಾ ಗಾಜಿಪುರ ಗುಲಬರ್ಗಾ, ಶರಣು ತಂದೆ ಶ್ರೀಮಂತ ತಳವಾಡ ವಃ 21 ವರ್ಷ ಸಾ ಮಕ್ತಮಪುರ ಗುಲಬರ್ಗಾ, ಮಲ್ಲು ತಂದೆ ಶಿವಶರಣಪ್ಪಾ ಉಪ್ಪಾರ ವಃ 18 ವರ್ಷ ಉಃ ವಿದ್ಯಾರ್ಥಿ ಸಾ ಗಾಜಿಪುರ ಗುಲಬರ್ಗಾ, ವಿಕ್ರಮ ತಂದೆ ಬಾನು ಪ್ರತಾಪಸಿಂಗ ವಃ 22 ವರ್ಷ ಸಾ ಗಾಜಿಪುರ ಗುಲಬರ್ಗಾ, ಚೇತನ್ ತಂದೆ ಮರಳಿಸಿದ್ದ ಜೇವರಗಿ ವಃ 19 ವರ್ಷ ಸಾ ಗಾಜಿಪುರ ಗುಲಬರ್ಗಾರವರನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಸದರಿಯವರು ಈಗ ಸುಮಾರು ಒಂದು ವರ್ಷದಿಂದ ಗುಲಬರ್ಗಾ ನಗರದ ಜಿಡಿಎ ಕಾಲೋನಿ, ಜಯ ನಗರ, ಕುಸನೂರ, ವೆಂಕಟೇಶ ನಗರ, ಜಗಜೀವನರಾಮ ನಗರ, ಬನಶಂಕರಿ ಕಾಲೋನಿ, ಕೊತಂಬರಿ ಲೇಔಟ, ರಾಘವೇಂದ್ರ ನಗರ, ವಿವೇಕಾನಂದ ನಗರ, ಮುಂತಾದ ಕಡೆ ಸರಗಳ್ಳತನ ಮತ್ತು ಸುಲಿಗೆ ಮಾಡಿರುವ ಬಗ್ಗೆ ತನಿಖೆ ಕಾಲಕ್ಕೆ ಒಪ್ಪಿಕೊಂಡಿರುತ್ತಾರೆ. ಆರೋಪಿತರ ವಶದಿಂದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, ಮೊಬಾಯಿಲ್ ಫೋನಗಳು, ಮತ್ತು ಸರಗಳ್ಳತನ ಮಾಡಲು ಬಳಸುತ್ತಿದ್ದ 3 ಮೂರು ಮೊಟಾರ ಸೈಕಲಗಳು ( 2 ಬಜಾಜ ಪಲ್ಸರ & ಒಂದು ಎಪ್.ಜೆಡ್) ಜಪ್ತು ಪಡಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ತನಿಖೆ ಮುಂದುವರಿಸಿರುತ್ತಾರೆ. ಆರೋಪಿತರು ನಗರದ ಬೇರೆ ಬೇರೆ ಸ್ಥಳಗಳಲ್ಲಿ ಇನ್ನೂ ಸುಲಿಗೆ ಮಾಡಿರಬಹುದಾದ ಸಂಶಯ ಮೇರೆಗೆ ತನಿಖೆ ಮುಂದುವರೆದಿರುತ್ತದೆ. ಪರಾರಿಯಾಗಿರುವ ಇನ್ನೂ ಕೇಲವು ಆರೋಪಿತರ ತಪಾಸಣೆ ಕಾರ್ಯ ಮುಂದುವರೆದಿದೆ, ಮಹತ್ವದ ಸರಗಳ್ಳತನದ ಪ್ರಕರಣಗಳನ್ನು ಭೇಧಿಸಿದ ವಿಶೇಷ ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಇಲಾಖಾ ವತಿಯಿಂದ ಸೂಕ್ತ ಬಹುಮಾನವನ್ನು ಘೋಷಿಸಲಾಗಿದೆ.

No comments: