POLICE BHAVAN KALABURAGI

POLICE BHAVAN KALABURAGI

24 March 2012

GULBARGA DIST REPORTED CRIMES

ಆಕಸ್ಮಿಕ ಬೆಂಕಿ ಅಪಘಾತ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ. ಶ್ರೀ. ಗಣಪತರಾವ ತಂದೆ ನಾಗಪ್ಪ ಸೋನಾನೆ ಸಾ||ಬೇಲೂರ [ಕೆ] ತಾ||ಜಿ|| ಗುಲಬರ್ಗಾರವರು ನಮ್ಮ ಹೊಲ ಬೇಲೂರ [ಕೆ] ಸೀಮಾಂತರದ ಸರ್ವೆ ನಂಬರ 81 ಇದ್ದು 12 ಪತ್ರಾಗಳನ್ನು ಹಾಕಿ ಮನೆ ಕಟ್ಟಿದ್ದು, ದಿನಾಂಕ:23-03-2012 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಮನೆಗೆ ಆಕಸ್ಮೀಕವಾಗಿ ಬೆಂಕಿ ತಗುಲಿ ಮನೆಯಲ್ಲಿಟ್ಟಿದ್ದ ಒಕ್ಕಲುತನದ ಸಾಮಾನುಗಳು ಮತ್ತು ಮನೆಯೊಳಗಿನ, ಹೊರಗಡೆ ನಿಲ್ಲಿಸಿದ್ದ ಎತ್ತಿನ ಗಾಡಿ,ಮನೆಯ ಹಿಂದೆ ಸಂಗ್ರಹಿಸಿ ಇಟ್ಟಿದ್ದು ಎರಡು ಗಾಡಿ ಜೋಳದ ಕಣಕಿ ಸುಟ್ಟು ಭಸ್ಮವಾಗಿ ಅಂದಾಜು ರೂ. 30000/- ನಾಶವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಎಫ್.ಎ.ನಂ: 03/2012 ಕಲಂ ಆಕಸ್ಮೀಕ ಬೆಂಕಿ ಅಪಘಾತ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಾಣೆಯಾದ ಪ್ರಕರಣ:

ನೆಲೋಗಿ ಪೊಲೀಸ್ ಠಾಣೆ:ಶ್ರೀ ದೇನು ತಂದೆ ಡಾಕು ರಾಠೋಡ ಸಾ||ಮಂದೇವಾಲ ತಾಂಡಾ ವರು ನನ್ನ ಮಗಳಾದ ಕವಿತಾಬಾಯಿ ವಯ: 16-17 ಇದ್ದು (ವರ್ಷ) ಇವಳು ದಿನಾಂಕ 15/03/2012 ರಂದು ರಾತ್ರಿ ಊಟ ಮಾಡಿ ಮಲಗಿಕೊಂಡಿದ್ದು, ರಾತ್ರಿ 11:00 ಗಂಟೆಯ ಸುಮಾರಿಗೆ ಕವಿತಾ ಇವಳು ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿರುತ್ತಾಳೆ. ನಾವು ನಮ್ಮ ಸಂಬಂಧಿಕಕಡೆಗಳಲ್ಲಿ ಹುಡುಕಾಡಿದೆವು ಎಲ್ಲಿಯು ಪತ್ತೆಯಾಗಿರುವದಿಲ್ಲ. ನನ್ನ ಮಗಳಾದ ಕವಿತಾ ಇವಳ ಚೆಹರೆ ಪಟ್ಟಿಯ ಗುರುತುಗಳು ಹೆಸರು-ಕವಿತಾ, ಎತ್ತರ-5 ಅಡಿ ವಯಸ್ಸು- 16-17 , ತೆಳ್ಳನೆ ಮೈಕಟ್ಟು, ದುಂಡು ಮುಖ, ಗೋದಿ ಮೈಬಣ್ಣ, ಜಾತಿ- ಲಮಾಣಿ, ಮಾತನಾಡುವ ಭಾಷೆಗಳು- ಕನ್ನಡ, ಲಮಾಣಿ ಬಾಷೆ ಬಲ್ಲವಳಾಗಿರುತ್ತಾಳೆ, ಇವಳು ಕಪ್ಪು ಬಣ್ಣದ ನೈಟಿ ಹಾಕಿಕೊಂಡಿರುತ್ತಾಳೆ ಇವಳನ್ನು ಪತ್ತೆ ಮಾಡಿಕೊಡಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:35/2012 ಕಲಂ ಹುಡಗಿ ಕಾಣಿಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಸದರಿಯವರ ಸುಳಿವು ಸಿಕ್ಕಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 08442-225033/ 08472-263604 ಮೋಬಾಯಿಲ್ ನಂ: 9480803562 ನೇದ್ದವುಗಳಿಗೆ ಸಂಪರ್ಕಿಸಲು ಕೋರಲಾಗಿದೆ,

No comments: