POLICE BHAVAN KALABURAGI

POLICE BHAVAN KALABURAGI

10 February 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಫರಹತಾಬಾದ ಪೊಲೀಸ್ ಠಾಣೆ: ಶ್ರೀ ಸಿದ್ದು ತಂದೆ ಶರಣಪ್ಪಾ ಸುಬೇದಾರ ಸಾ: ಕರುಣೇಶ್ವರ ನಗರ ಗುಲಬರ್ಗಾರವರು ದಿನಾಂಕ: 9-2-2012 ರಂದು ಬೆಳಗ್ಗೆ ನಮ್ಮ ಅಳಿಯನಾದ ನೀಲಕಂಠಪ್ಪಾ ಹಿರೇಗೌಡರ, ಅಂಜನಾಬಾಯಿ ಗಂಡ ನೀಲಕಂಟಪ್ಪಾ, ಶಕುಂತಲಾ ಚಿನಗುಡಿ, ಅಕ್ಕನಾಗಮ್ಮ ಗಂಡ ಚಂದ್ರಕಾಂತ, ಶ್ರೀದೇವಿ ಗಂಡ ಶರಣಬಸಪ್ಪಾ ಕಲ್ಲಾ ಎಲ್ಲರೂ ಸಾ: ಕರುಣೇಶ್ವರ ನಗರ ಗುಲಬರ್ಗಾರವರು ಕೂಡಿಕೊಂಡು ಕೆಎ-32 ಎನ್-208 ಮಾರುತಿ ಕಾರ ನೇದ್ದರಲ್ಲಿ ಗುಲಬರ್ಗಾದಿಂದ ಜೇವರ್ಗಿಗೆ ಶ್ರೀ ಶಾಂತಲಿಂಗ ಸ್ವಾಮಿಜಿಯವರ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ನಂದಿಕೂರ ತಾಂಡಾದ ಹತ್ತಿರ ರಸ್ತೆ ಮೇಲೆ ಒಂದು ಕುರಿ ಅಡ್ಡ ಬಂದಿದ್ದರಿಂದ ಅದನ್ನು ಉಳಿಸಲು ಹೋಗಿ ನೀಲಕಂಠಪ್ಪಾ ಇವರು ಕಾರಿನ ವೇಗದ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಗಡೆಯ ಸೇತುವೆಗೆ ಡಿಕ್ಕಿ ಪಡಿಸಿರುತ್ತಾರೆ. ಇದರಿಂದ ಅಕ್ಕನಾಗಮ್ಮಳಿಗೆ,ಅಂಜನಾಬಾಯಿ,ಶಕುಂತಲಾ, ಇವರಿಗೆ ಭಾಯಿಗೆ, ತಲೆಗೆ, ಕಣ್ಣಿಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ನೀಲಕಂಠಪ್ಪ ಈತನು ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಾ ರಾತ್ರಿ 8-00 ಗಂಟೆಗೆ ಮೃತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2012 ಕಲಂ 279, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆಗೆ ಪ್ರಯತ್ನ ಪ್ರಕರಣ:

ನಿಂಬರ್ಗಾ ಪೊಲೀಸ ಠಾಣೆ: ಶ್ರೀ ಹಣಮಂತ ತಂದೆ ಅನಂತ ಒಡೆಯರ ಸಾ|| ಯಳಸಂಗಿ ರವರು ನಾನು ದಿನಾಂಕ 25/01/2012 ರಂದು ಸಾಯಂಕಾಲ ನಿಂಬರ್ಗಾದ ಸಂತೆಯಲ್ಲಿ ನನ್ನ ಎರಡನೆಯ ಹೆಂಡತಿಯ ಮಗನಾದ ಬಾಬಾಸಿದ್ದ ಒಡೆಯರ ವ|| 11 ವರ್ಷ, || 5 ನೇ ತರಗತಿ ವಿಧ್ಯಾಭ್ಯಾಸ ಈತನು ನಿಂಬರ್ಗಾದ ಹಾಸ್ಟೇಲನಿಂದ ಸಂತೆಯಲ್ಲಿ ಬಂದಿದ್ದನು. ನನ್ನ ಮೊದಲನೆಯ ಹೆಂಡತಿಯ ಮಗನಾದ ಅನಂತ ಈತನಿಗೆ ಬಾಬಾಸಿದ್ದನು ಬಾಳೆಹಣ್ಣು ಕೊಡಿಸಲು ಕೇಳಿದ್ದರಿಂದ, ಅನಂತ ತಂದೆ ಹಣಮಂತ ಒಡೆಯರ ಇನತು ಮತ್ತು ಬಾಳೆ ಹಣ್ಣು ಮಾರುವ ಅಪರಿಚಿತ ವ್ಯಕ್ತಿ ಇಬ್ಬರೂ ಕೂಡಿಕೊಂಡು (ಆಸ್ತಿಯ ವಿಷಯದ ಸಂಭಂಧ ತಕರಾರು ಇದ್ದು ಎರಡನೆಯ ಹೆಂಡತಿಯ ಮಗನಿಗೆ ಕೊಲೆ ಮಾಡುವ ಉದ್ದೇಶದಿಂದ) ಬಾಳೆ ಹಣ್ಣಿನಲ್ಲಿ ವಿಷ ಬೆರೆಸಿ ಕೊಟ್ಟಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 10/2012 ಕಲಂ 307, 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಸಂಜಯಕುಮಾರ ತಂದೆ ಹಣಮಂತ ಜಮಖಂಡಿ ಉ:ಟಾಟಾ ಇಂಡಿಕಾ ಕಾರ ಚಾಲಕ ಕೆಎ 28 ಎಂ 3376 ಸಾ: ಬಾಳೇನಗಲ್ಲಿ ಆಳಂದರವರು ದಿಃ 09-02-2012 ರಂದು ರಾತ್ರಿ 10-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗೆಳೆಯರು ಗುಲಬರ್ಗಾದ ಅಪ್ಪಾ ವ್ಹೀಲ್ಸಗೆ ಬಂದು ರಿಪೇರಿ ಮಾಡಿಕೊಂಡು ಆಳಂದ ಕಡೆಗೆ ಹೊರಟಿದ್ದು, ಆಳಂದ ಗುಲಬರ್ಗಾ ರೋಡಿಗೆ ಇರುವ ದಸ್ತಯ್ಯ ದಾಬಾದ ಎದುರಿನ ರೋಡಿನ ಮೇಲೆ ಹೊರಟಾಗ ಹಿರೋ ಹೊಂಡಾ ಫ್ಯಾಶನ ಕೆಎ 05 ಇಎಫ 7933 ನೇದ್ದರ ಮೇಲೆ ಇಬ್ಬರು ಕುಳಿತುಕೊಂಡು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮುಂದೆ ಹೊರಟ ನಮ್ಮ ಕಾರಿಗೆ ಡಿಕ್ಕಿ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 44/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಶಿವಕುಮಾರ ತಂದೆ ಅಣ್ಣಾರಾವ ಪಾಟೀಲ ಸಾ:ಶೇಖರೇಜಾ ಗುಲ್ಬರ್ಗಾರವರು ದಿನಾಂಕ: 07-02-12 ರಂದು ರಾತ್ರಿ 8-00 ಗಂಟೆಯಿಂದ ರಾತ್ರಿ 10 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಸಾವಳಗಿ ಸೀಮೆಯಲ್ಲಿ ಬರುವ ಸರ್ವೆ ನಂ. 236/3 ಕಂಕರ ಮಶೀನನಕ್ಕೆ ಕೂಡಿಸಿದ 60 ಹೆಚ್.ಪಿ ಕೀರಲೋಸ್ಕರ ಮಶೀನದ ಮೋಟಾರ ಬಿಚ್ಚಿ ಅದರಲ್ಲಿ ಅಳವಡಿಸಿದ ತಾಮ್ರದ ತಂತಿಯನ್ನು ಮತ್ತು ಕ್ರ್ಯಾಂಕ 2 ತುಕಡಿಗಳು ಅಂದಾಜು ಕಿಮ್ಮತ್ತು ರೂ. 45,000-00 ಗಳದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:45/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:

ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ 09/02/2012 ರಂದು ಮುಂಜಾನೆ 8.30 ಗಂಟೆಗೆ ಭೀಮಪೂರ ಗ್ರಾಮದ ಅಣ್ಣಪ್ಪ ಶಹಾಪೂರ ಇವರ ಮನೆಗೆ ಗುರನಾಥ ತಂದೆ ಶಿವಲಿಂಗಪ್ಪ ಶೇಷಗಿರಿ ಸಂಗಡ ಇನ್ನೂ 6 ಜನರು ಕೂಡಿಕೊಂಡು ಬಂದು ಸಂಜುಕುಮಾರ ಸಣ್ಮೂಖ, ಶಿವಾನಂದ ಮಣ್ಣೂರೆ, ಅಣ್ಣಪ್ಪ ಶಹಾಪೂರೆ ಇವರಿಗೆ ಅವಿಶ್ವಾಸ ಗೊತ್ತುವಳಿಯ ನಮ್ಮ ಪರವಾಗಿ ಕೈ ಎತ್ತಬೇಕು ಇಲವಾದರೆ ನೀಮ್ಮನ್ನು ಹೊಡೆಯುತ್ತೆವೆ ಅಂತಾ ಅವರ ಎದೆಯ ಮೇಲೆ ಕಾಲಿಟ್ಟು ಹೊಡೆದಿರುತ್ತಾರೆ ಅಂತಾ ಸಿದ್ರಾಮಪ್ಪ ತಂದೆ ಶಂಕ್ರೆಪ್ಪ ಸಣ್ಮೂಖೆ ಸಾ: ಹಿರೊಳ್ಳಿ ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ 02/2012 ಕಲಂ 143, 147, 148, 323, 506 ಸಂಗಡ 149 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: