POLICE BHAVAN KALABURAGI

POLICE BHAVAN KALABURAGI

04 January 2012

Gulbarga Dist Reported Crimes

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ನವಲಸಿಂಗ್ ತಂದೆ ಗೋಪಾಲಸಿಂಗ್ ಸಿಕ್ಕಲಗರ್ ಸಾ ಆಶ್ರಯ ಕಾಲೊನಿ ಗುಲಬರ್ಗಾರವರು ನಮ್ಮ ಸಂಬಂಧಿಕರು ಪಂಚ ಶೀಲನಗರದಲ್ಲಿದ್ದ ಅವರು ಸಹ ಲೋಹಾರ ಕೆಲಸ ಮಾಡುತ್ತಾರೆ ನಾವು ಊರು-ಊರು ಮತ್ತು ಪಟ್ಟಣಗಳಲ್ಲಿ ನಡೆಯುವ ಸಂತೆ ಜಾತ್ರೆಗಳಿಗೆ ಹೋಗಿ ಲೋಹದ ಸಾಮಾನುಗಳಾದ ಇಳಿಗೆ ಜಾರಿ ಮಾರಾಟ ಮಾಡುತ್ತೇವೆ ಪಂಚ ಶೀಲನಗರದಲ್ಲಿರುವ ನಮ್ಮ ಸಂಬಂಧಿಕರ ಮತ್ತು ನನ್ನ ನಡುವೆ ವ್ಯಾಪಾರದ ಸಲುವಾಗಿ ಆಗಾಗ ಬಾಯಿ ಮಾತಿನ ಜಗಳ ಆಗಿದ್ದು ಅಲ್ಲದೆ ಅವರ ಮತ್ತು ನನ್ನ ನಡುವೆ ವೈಮನಸ್ಸು ಆಗಿತ್ತು ದಿನಾಂಕ: 3-1-2012 ರಂದು ಮಧ್ಯಾನ 2 ಗಂಟೆ ಸುಮರಿಗೆ ನಾನು ಮತ್ತು ವಿಜಯಸಿಂಗ್ ಮತ್ತು ನಾನಕೂರ, ದರ್ಶನಸಿಂಗ್, ಕರ್ತಾರಸಿಂಗ್, ತಾರಸಿಂಗ್ ಎಲ್ಲರು ಕೂಡಿ ಪಂಚ ಶೀಲನಗರದ ಮುಖ್ಯ ರಸ್ತೆಗೆ ಹೊಂದಿ ಕೊಂಡಿರುವ ಹೊಟೇಲ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಾವೆಲ್ಲರು ವ್ಯಾಪರಕ್ಕಾಗಿ ಜೇವರ್ಗಿಗೆ ಹೋಗುತ್ತಿರುವಾಗ ನಮ್ಮನ್ನು ನೋಡಿದ ಜೇವರ ಸಿಂಗ್, ಜಗಬಾರಸಿಂಗ್ , ಲಖನಸಿಂಗ್ ಲಾತೂರ , ಶಾನಾಸಿಂಗ್ , ಆಕಾಶ ಸಿಂಗ್ , ರಾಮಾಸಿಂಗ್ ಲಾತೂರ ಸಂಗಡ 2 ಜನರು ಇವರೆಲ್ಲರು ಕೂಡಿ ಬಂದು ನನಗೆ ಎಡ ತೊಡೆಗೆ ತಲವಾರದಿಂದ ರಾಡಿನಿಂದ ಹೊಡೆದು ಬಲವಾದ ರಕ್ತ ಗಾಯ ಗುಪ್ತಗಾಯ ಮಾಡಿದನು ಬಿಡಿಸಲು ಬಂದ ವಿಜಯ ಸಿಂಗ್ ಇವನಿಗೂ ಸಹ ತಲವಾರಿದಂದ ಹೊಡೆದು ಭಾರಿ ರಕ್ತಗಾಗಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 1/2012 ಕಲಂ 143,147,148,341,324,325,323,506, [2] ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .
ಮುಂಜಾಗ್ರತೆ ಕ್ರಮ:
ಬ್ರಹ್ಮಪೂರ ಠಾಣೆ:
ಶ್ರೀ.ಗಜೇಂದ್ರ ಸಿ.ಪಿ.ಸಿ ಬ್ರಹ್ಮಪೂರ ಠಾಣೆರವರು ನಾನು ಮತ್ತು ಸುಧಾಕರ ಸಿ.ಪಿ.ಸಿ ರವರು ಠಾಣಾ ಹದ್ದಿಯಲ್ಲಿ ಪೆಟ್ರೋಲಿಂಗ ಮತ್ತು ಹಳೆ ಗುನ್ನೆಗಳ ಪತ್ತೆ ಕುರಿತು ದಿನಾಂಕ: 04/01/12 ರಂದು ನಗರದ ಸಿ.ಟಿ ಬಸ್ ನಿಲ್ದಾಣ ಹತ್ತಿರ ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡುವುದನ್ನು ಕಂಡು ಸಂಶಯ ಬಂದು ಸದರಿಯವನನ್ನು ಹಿಡಿದು ಹೆಸರು ಮತ್ತು ವಿಳಾಸ ವಿಚಾರಿಸಲು ಚನ್ನಾರೆಡ್ಡಿ ತಂದೆ ಬಾಬುರೆಡ್ಡಿ, ಸಾ ನಂದಮ್ಮ ಹೊಟೇಲ ಹತ್ತಿರ ಮಿನಾರ ಶೇಖ ರೋಜಾ ಗುಲಬರ್ಗಾ ಅಂತಾ ತಿಳಿಸಿದ್ದು ಸ್ಥಳದಲ್ಲಿ ಇರುವಿಕೆಯ ಬಗ್ಗೆ ವಿಚಾರಿಸಲು ಯಾವುದೇ ಸಮಂಜಸ ಉತ್ತರ ಕೊಡಲಿಲ್ಲಾ. ಸದರಿಯವನನ್ನು ಸ್ಥಳದಲ್ಲಿ ಹಾಗೆಯೆ ಬಿಟ್ಟಲ್ಲಿ ಯಾವುದಾದರೊಂದು ಸ್ವತ್ತಿನ ಅಪರಾಧ ಮಾಡಬಹುದೆಂದು ತಿಳಿದು ವಶಕ್ಕೆ ತೆಗೆದುಕೊಂಡು ಠಾಣೆಗೆ ಬಂದು ವರದಿ ಸಲ್ಲಿಸಿದ್ದರ ಮೇರೆಗೆ ಠಾಣಾ ಗುನ್ನೆ ನಂ: 1/12 ಕಲಂ: 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗ ಕಾಣೆಯಾದ ಪ್ರಕರಣ:
ಚಿತ್ತಾಪೂರ ಠಾಣೆ:
ದಿನಾಂಕ:31-12-2011 ರಂದು ಮಧ್ಯಾಹ್ನ ಸುಮರಿಗೆ ನಾಜೀಮ ತಂದೆ ಮಹಿಬೂಬಸಾಬ ವ 11 ಎತ್ತರ 4” ದುಂಡು ಮುಖ, ಸಾದಾರಣ ಮೈಕಟ್ಟು, ಕೆಂಪು ಬಣ್ಣ, ಕಪ್ಪು ಕೂದಲು, ನೀಟಾಗ ಮೂಗು, 5 ನೇ ತರಗತಿ ಒದುತ್ತಿದ್ದು, ಕನ್ನಡ, ಉರ್ದು ಭಾಷೆ ಬಲ್ಲವನಾಗಿರುತ್ತಾನೆ, ಶಾಲೆ (ಬಿಳಿ ಶರ್ಟ ಬಿಳಿ ಹಾಪ್ ಪ್ಯಾಂಟ) ಸಮವಸ್ತ್ರ ಧರಿಸಿರುತ್ತಾನೆ ಇತನು ಬಾರೆಹಣ್ಣು ತರುತ್ತೆನೆಂದು ಮನೆಯಿಂದ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ ಎಲ್ಲಾ ಕಡೆಗೆ ಹುಡಕಾಡಿದರೂ ಸಿಕ್ಕಿರುವದಿಲ್ಲ ಅಂತಾ ಹುಸೇನ ಖಾನ ತಂದೆ ಶೇಖ ಖಾನ ಗುಂಡಗುರ್ತಿ ಸಾ ಬಸವ ನಗರ ಚೀತ್ತಾಪೂರ ರವರು ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 03/2012 ಕಲಂ ಹುಡಗ ಕಾಣೆಯಾದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ಚಿತ್ತಪೂರ ಠಾಣೆ ಪೋನ ನಂ: 08474-236123 ಅಥವಾ ಮೋಬಾಯಿಲ್ ನಂಬರ: 9480803573 ಅಥವಾ ಗುಲಬರ್ಗಾ ಕಂಟ್ರೋಲ್ ರೂಮ ನಂ: 08472-263604 ನೇದ್ದಕ್ಕೆ ಸಂಪರ್ಕಿಸಲು ಕೊರಲಾಗಿದೆ.

No comments: