POLICE BHAVAN KALABURAGI

POLICE BHAVAN KALABURAGI

16 January 2012

Gulbarga Dist Reported Crimes

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಶಿವಕುಮಾರ ತಂದೆ ಬಸಯ್ಯ ಸಾ: ಮನೆ :ಸಿ 2-01 ಹೈ ಕೋರ್ಟ ಕ್ವಾಟರ್ಸ ಗುಲಬರ್ಗಾ ರವರು ನಾನು ದಿನಾಂಕ 16-01-2012 ರಂದು 12-00 ಗಂಟೆಗೆ ಜಗತ ಸರ್ಕಲ್ ದಿಂದ ಎಸ್.ವಿ.ಪಿ.ಸರ್ಕಲ್ ಮೇನ ರೋಡಿನಲ್ಲಿ ಬರುವ ಸಿದ್ದಿ ಪಾಶಾ ದರ್ಗಾ ಹತ್ತಿರ ಕಾರ ನಂ: ಕೆಎ 01 ಜಿ 4860 ನೇದ್ದರಲ್ಲಿ ಹೋಗುತ್ತಿದ್ದಾಗ ಅಟೋರೀಕ್ಷಾ ನಂ: ಕೆಎ 32 ಎ 889 ನೇದ್ದರ ಚಾಲಕ ಜಗತ ಸರ್ಕಲ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಂದಗಡೆ ಹೋಗುತ್ತಿದ್ದ ಕಾರಿಗೆ ನೆದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಕಾರಿಗೆ ಜಕಂ ಮಾಡಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 9/2012 ಕಲಂ 279 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಾವು ಕಚ್ಚಿ ಬಾಲಕ ಸಾವು:
ಗುಲಬರ್ಗಾ ಗ್ರಾಮೀಣ ಠಾಣೆ:
ಗೌಸ @ ಗೌಸಮಿಯ್ಯಾ ತಂದೆ ಜಿಲಾನಮಿಯ್ಯಾ @ ಜಿಲಾನಿ ಮುಜಾವರ @ ಖಾದೀಮ ವ:16 ವರ್ಷ ಇತನು ದಿನಾಂಕ 16-01-12 ರಂದು ಮಧ್ಯಾಹ್ನ 12-30 ಸುಮಾರಿಗೆ ತಮ್ಮ ಅಡುಗೆ ಮನೆಯಲ್ಲಿ ಗೋಳಕಲ್ಲಿನ ಗೋಡೆಗೆ ಹತ್ತಿ ನಿಂತಾಗ ಗೋಡೆ ಒಳಗಿನಿಂದ ಹಾವು ಬಂದು ಗೌಸನ ಎಡಗಾಲ ಹಿಂಬದಿಯ ಹಿಂಭಾಗದ ಮೇಲೆ ಕಚ್ಚಿದ್ದರಿಂದ ರಕ್ತ ಚಿಮ್ಮಿದ ಗಾಯವಾಗಿದ್ದು, ಅವನಿಗೆ ಉಪಚಾರ ಕುರಿತು ಸರಕಾರಿ ದವಾಖಾನೆಗೆ ತರುವಾಗ ಮೃತಪಟ್ಟಿರುತ್ತಾನೆ ಅಂತಾ ವೈಧ್ಯರು ತಿಳಿಸಿರುತ್ತಾರೆ. ಈತನ ಸಾವಿನಲ್ಲಿ ಯಾವದೇ ಸಂಶಯ ಇರುವುದಿಲ್ಲಾ ಅಂತಾ ಶ್ರೀ ಜಾನಿಮಿಯ್ಯಾ ತಂದೆ ಮಹಿಮೊದಮಿಯ್ಯಾ ಮುಜಾವರ @ ಖಾದೀಮ ಸಾ: ಸೈಯ್ಯದ ಚಿಂಚೋಳಿ ಗ್ರಾಮ ತಾ:ಜಿ: ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯು,ಡಿ,ಅರ್, ನಂ: 04/2012 ಕಲಂ 174 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಕೆ ಕೈಕೊಂಡಿರುತ್ತಾರೆ.

No comments: