POLICE BHAVAN KALABURAGI

POLICE BHAVAN KALABURAGI

30 January 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ:
ಶ್ರೀ ಹಣಮಂತ ತಂದೆ ಲಕ್ಷ್ಮಣ ಮಾನೆ ಸಾ:ಭೀಮಶಪ್ಪ ನಗರ ಶಾಹಾಬಾದ ರವರು ನನ್ನ ತಮ್ಮ ವೇಂಕಟ @ ವೇಂಕಟಿ ಇತನು ದಿನಾಂಕ 28/1/2012 ರಂದು ಸಾಯಂಕಾಲ 16:00 ಗಂಟೆಯ ಸುಮಾರಿಗೆ ಕೂಲಿ ಕೆಲಸಕ್ಕೆ ಶಾಹಾಪೂರಕ್ಕೆ ಹೋಗಿ ಬರುತ್ತೆನೆ ಎಂದು ಮನೆಯಲ್ಲಿ ನನಗೆ ಮತ್ತು ನನ್ನ ತಾಯಿಗೆ ಹೇಳಿ ಹೋಗಿರುತ್ತಾನೆ. ದಿನಾಂಕ 29/1/2012 ರಂದು ಸಾಯಂಕಾಲ 16:30 ಗಂಟೆಯ ಸುಮಾರಿಗೆ ಫರಹತಾಬಾದ ಪೊಲೀಸರು ದೂರವಾಣಿ ಮುಖಾಂತರ ವಿಷಯ ತಿಳಿಸಿದೇನೆಂದರೆ. ಮದ್ಯಾಹ್ನ 14:30 ಗಂಟೆಯ ಸುಮಾರಿಗೆ ಭೀಮಾ ಬ್ರೀಡ್ಜ, ಹಸನಾಪೂರ ಕ್ರಾಸ ಮದ್ಯೆ ರಾಷ್ಟ್ರೀಯ ಹೆದ್ದಾರಿ ಮೇಲೆ ಒಬ್ಬ ಮನುಷ್ಯನು ಮೃತ್ತ ಪಟ್ಟಿದ್ದಾನೆ ಅವನ ಜೇಬಿನಲ್ಲಿ ಡೈರಿನಲ್ಲಿ ನಿಮ್ಮ ಮೊಬೈಲ ನಂಬರ ಇದ್ದು ಕೂಡಲೆ ಮೃತ್ತ ದೇಹವನ್ನು ಗುರುತಿಸಲು ಹೇಳಿದ ಮೇರೆಗೆ ನಾನು ಮತ್ತು ನನ್ನ ತಾಯಿ ನನ್ನ ಹೆಂಡತಿ ನಮ್ಮೂರಿನವರಾದ ನಾಗರಾಜ ಧೋತರೆ. ಭಾಲಪ್ಪಾ ಮರತೂರ ಇವರೊಂದಿಗೆ ಆಸ್ಪತ್ರೆಗೆ ಬಂದು ಮೃತ್ತ ದೇಹವನ್ನು ನೋಡಲಾಗಿ ನನ್ನ ತಮ್ಮ ವೇಂಕಟ @ ವೇಂಕಟಿಯಾಗಿದ್ದು ಆತನು ರಸ್ತೆಯ ಎಡಭಾಗದಲ್ಲಿ ಹಸನಾಪೂರ ಕ್ರಾಸ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಯಾವುದೋ ಒಂದು ವಾಹನ ಚಾಲಕ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನನ್ನ ತಮ್ಮನಿಗೆ ಡಿಕ್ಕಿ ಪಡಿಸಿದ್ದರಿಂದ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೆ ಮೃತ್ತ ಪಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 12/2012 ಕಲಂ 279 304(ಎ) ಐ,ಪಿ.ಸಿ ಸಂಗಡ 187 ಐ.ಎಮ್.ವಿ ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ 29-01-12 ರಂದು ಮಧ್ಯಾಹ್ನ 4-30 ಗಂಟೆ ಸುಮಾರಿಗೆ ಸಿಂದಗಿ (ಬಿ) ಸೀಮೆಯಲ್ಲಿ ಬರುವ ಹಣಮಂತ ಲೊಡ್ಡನ ಹೊಲದಲ್ಲಿ ಇಸ್ಪೀಟ ಜೂಜಾಟ ಆಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಂಚರ ಸಮಕ್ಷಮ ಪಿ.ಎಸ.ಐ ರವರು ಮತ್ತು ಸಿಬ್ಬಂದಿಯವರು ಹೋಗಿ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಶ್ರೀ ಹಣಮಂತ ತಂದೆ ಬಸವಣಪ್ಪ ಲೊಡ್ಡನ ಸಂಗಡ 3 ಜನರು ಇವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 6140 ರೂ. ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 29/2012 ಕಲಂ 87 ಕೆ.ಪಿ.ಎಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

No comments: