POLICE BHAVAN KALABURAGI

POLICE BHAVAN KALABURAGI

18 December 2011

Gulbarga Dist Reported Crimes

ಹಲ್ಲೆ ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀಮತಿ.ಗೀತಾ ಗಂಡ ದಿರಾಜು ಟಾಕ್ ಸಾ ಮೇತಾರ ಗಲ್ಲಿ ಗಾಜೀಪುರ ಗುಲಬರ್ಗಾ ರವರು ನಾನು ಮುಂಜಾನೆ ಮನೆಯಲ್ಲಿದ್ದಾಗ ವಿಕಾಸ ಟಾಕ ಇತನು ನಮ್ಮ ಮನೆಗೆ ಬಂದು ಅವಾಚ್ಯವಾಗಿ ಬೈದು ವಿನಾಕಾರಣ ನನ್ನೊಂದಿಗೆ ಜಗಳಕ್ಕೆ ಬಿದ್ದು ನನ್ನ ಹೊಡೆ ಬಡೆ ಅವಮಾನ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಯತ್ನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ :
ಶ್ರೀಮತಿ ಸಪ್ನಾ ಗಂಡ ಶಿವರಾಜ ಪಾಟೀಲ ಮತ್ತು ಪುಷ್ಪಾ ಗಂಡ ಚಂದ್ರಶೇಖರ ಪಾಟೀಲ ಸರ್ವಜ್ಞ ಕಾಲೇಜ ರವರು ನಾನು ಮತ್ತು ನಮ್ಮ ಅತ್ತೆ ಹಾಗು ನೇಗಣಿ ಎಲ್ಲರೂ ದೈನಂದಿನ ರೀತಿಯಲ್ಲಿ ಕಾಲೇಜ ಕಟ್ಟಡದಲ್ಲಿ ಪಾಠ ಮಾಡುತ್ತಿರುವಾಗ ಶ್ರೀ ಚನ್ನಾರೆಡ್ಡಿ ಮುನಿಯಪ್ಪ ಪಾಟೀಲ, ಗೀತಾ ಚೆನ್ನಾರೆಡ್ಡಿ ಪಾಟೀಲ, ಲಿಂಗಾರೆಡ್ಡಿ ಪಾಟೀಲ, ಕರುಣೇಶ ಬಿ. ಹಿರೇಮಠ, ಹಾಗು ಇತರರು ಸೇರಿಕೊಂಡು ನಮ್ಮ ಚೆಂಬರದಲ್ಲಿ ಬಂದು ಬಡಿಗೆ ಹಾಗು ಚಾಕು ತೊರಿಸಿ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ಈ ಮೇಲ್ಕಂಡ ಜನರು ಶ್ರೀಮತಿ ಶಾಂತಾದೇವಿ ತೇಜರಾಜ ಪಾಟೀಲ ಹಾಗು ಸಪ್ನಾ ಶಿವರಾಜ ಪಾಟೀಲ, ಪುಷ್ಪಾ ಚಂದ್ರಶೇಖರ ಪಾಟೀಲ, ಈ ಮೂವರ ಮೇಲೆ ರಕ್ತ ಬರುವ ಹಾಗೇ ಹೊಡೆದು ನಿಮ್ಮ ಜೀವ ತೆಗೆಯುತ್ತೆನೆಂದು ಜೀವದ ಬೆದರಿಕೆ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ. ಗೀತಾ ಚನ್ನಾರೆಡ್ಡಿ ಪಾಟೀಲ ಮತ್ತು ಚೆನ್ನಾರೆಡ್ಡಿ ಇವರಿಬ್ಬರೂ ಸಪ್ನಾ ಶಿವರಾಜ ಪಾಟೀಲ ಇವಳಿಗೆ 6 ತಿಂಗಳಿಂದ 5 ಲಕ್ಷ ರೂ ಹಾಗು ಬಂಗಾರ ತವರು ಮನೆಯಿಂದ ತೆಗೆದುಕೊಂಡು ಬಾ ಎಂದು ತೊಂದರೆ ಕೊಡುತ್ತಿದ್ದಾರೆ. ಹಣ ತರದೇ ಇದ್ದಾಗ ನನಗೆ ಹೊಡೆದು ಕಾಲೇಜನಿಂದ ಹೊರಗಡೆ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅಂತಾ ಲಿಖಿತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 138/2011 ಕಲಂ. 324,307,354,506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:
ದೇವಲಗಾಣಗಾಪುರ ಠಾಣೆ:
ದಿನಾಂಕ 18-12-2011 ರಂದು ಮದ್ಯಾಹ್ನ ಠಾಣೆಯಲ್ಲಿದ್ದಾಗ ಗೊಬ್ಬೂರ[ಬಿ], ಬೈರಾಮಡಗಿ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜನರು ಪಣಕ್ಕೆ ಹಣ ಹಚ್ಚಿ ಅಂದರ ಬಾಹರ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ಮಂಜುನಾಥ ಎಸ್. ಕುಸುಗಲ್ ಪಿಎಸ್ಐ ಮತ್ತು ಠಾಣೆಯ
ಸಿಬ್ಬಂದಿಯವರೊಂದಿಗೆ ಜೂಜಾಟ ನಡೆದ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಅಂದರ ಬಾಹರ ಜೂಜಾಟ ಆಡುತ್ತಿದ್ದ ಮುಕ್ತೇಶ ತಂದೆ ನಾಗಣ್ಣ ಬಿರಾದಾರ ಅರವಿಂದ ತಂದೆ ರಾಮು ವಡ್ಡರ, ನಾಗೇಂದ್ರ ತಂದೆ ಗುರುಪ್ಪ ಪಡಸಾವಳಗಿ, ಶಿವಾನಂದ ತಂದೆ ಸಿದ್ದಣ್ಣ ಪಡಶೆಟ್ಟಿ, ರಾಜು ತಂದೆ ಶ್ರೀಮಂತ ಪಡಶೆಟ್ಟಿ ಸಾ ಎಲ್ಲರು ಗೊಬ್ಬುರ (ಬಿ) ಗ್ರಾಮ ಅಂತಾ ತಿಳಿಸಿದರು ಜೂಜಾಟದ ಸ್ಥಳದಿಂದ ಇಸ್ಪೇಟ ಎಲೆಗಳು ಮತ್ತು ನಗದು ಹಣ 15763-00 ರೂ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂಬರ:128/2011 ಕಲಂ.87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: