POLICE BHAVAN KALABURAGI

POLICE BHAVAN KALABURAGI

16 December 2011

GULBARGA DIST REPORTED CRIMES

ಕಳವು ಪ್ರಕರಣ:
ಬ್ರಹ್ಮಪೂರ ಠಾಣೆ:
ಶ್ರೀ.ನಂದಕುಮಾರ ತಂದೆ ಶ್ರೀನಿವಾಸ ಕುಲಕರ್ಣಿ ಸಾ ಮನೆ ನಂ:2-811/6ಎ ಸುಂದರ ನಗರ ಗುಲಬರ್ಗಾರವರು ನಾನು ನನ್ನ ಚಿಕ್ಕಪ್ಪನಾದ ವೇಣುಗೋಪಾಲ ಕುಲಕರ್ಣಿ ಇವರ ಮನೆ ನಂ:2-811/6ಎ ನೇದ್ದರಲ್ಲಿ ಸುಮಾರು 8-10 ವರ್ಷಗಳಿಂದ ಇರುತ್ತೆನೆ ದಿನಾಂಕ: 15/12/2011 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ಮನೆಯಲ್ಲಿ ಊಟ ಮುಗಿಸಿಕೊಂಡು ಅಣ್ಣ ಅತ್ತೆಯವರ ಮನೆಯಲ್ಲಿ ಅವರ ಸೊಸೆ ಮತ್ತು ಮಗಳು ಊರಿಗೆ ಹೋಗಿದ್ದರಿಂದ ಅತ್ತೆಯವರ ಮನೆಯಲ್ಲಿ ಮಲಗಲು ಹೋಗಿದ್ದು, ಬೆಳಿಗ್ಗೆ 7:00 ಗಂಟೆಯ ಸುಮಾರಿಗೆ ಮನೆಗೆ ಬಂದು ನೋಡಲಾಗಿ ಬಾಗಿಲ ಬೀಗ ಮುರಿದು ಬಂಗಾರದ ಆಭರಣಗಳು ಮತ್ತು ನಗದು ಹಣ 4,4,00-0 ಮತ್ತು ಒಂದು ಮೊಭಾಯಿಲ್ ಹೀಗೆ ಒಟ್ಟು 47,400/- ಬೆಲೆ ಬಾಳುವ ಆಭರಣಗಳು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮೋಸ ಪ್ರಕರಣ:
ಸ್ಟೇಶನ ಬಜಾರ ಠಾಣೆ:
ಶ್ರೀ ಬಸವಂತರಾಯ ತಂದೆ ಕರಿಬಸಯ್ಯ ಮಠಪತಿರವರು ಖಾಸಗಿ ದೂರು ಅರ್ಜಿ ಸಾರಂಶ ಎನೆಂದರೆ ಸರ್ವೆ ನಂ 18/2ಎ 40*60 ಬಿದ್ದಾಪೂರ ಕಾಲೋನಿಯಲ್ಲಿರುವ ಆಸ್ತಿಯು ಬಸವಂತರಾಯ ತಂದೆ ನಾಗಪ್ಪ ಪಾಟೀಲ್ ಸಾ ಗುಲಬರ್ಗಾ ಇವರದಾಗಿದ್ದು ಮಲ್ಲಯ್ಯ ತಂದೆ ಕರಬಸಯ್ಯ ಮಠಪತಿ ವಯಾ 50 ಉ ವ್ಯಾಪಾರ ಸಾ ಮಾಕಾ ಲೇಔಟ ಹನುಮಾನ ನಗರ ಗುಲಬರ್ಗಾ ಸಂಗಡ ಇನ್ನೊಬ ಇವರಿಬ್ಬರೂ ಕೂಡಿ ಉಪ ನೊಂದಣಿಧಿಕಾರಿಯವರಿಗೆ ನಂಬಿಕೆ ದ್ರೊಹ ಮಾಡಿ ಕಾಗದ ಪತ್ರಗಳು ತಿರುಚಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:212/೨೦೧೧ ಕಲಂ 419,420,425,426,448,463,467,468,471, ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ದರೋಡೆ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ ಠಾಣೆ:
ಶ್ರೀ ಹರೀನ ತಂದೆ ಸೀನಪ್ಪ ಉ:ಸನ್ ಡೈರೆಕ್ಟ ಟಿವಿ ಪ್ರೈ,ಲಿ. ಎ.ಎಸ.ಎಂ ವೃತ್ತಿ ಸಾ: ಮೈಸೂರ #358/1 ಕಾವೇರಿ ಮೇನ ರೋಡ ಮುಕುಂದ ಸ್ಟೋರ ರಾಘವೇಂದ್ರ ನಗರ ಹಾವ ರಂಗರಾವ ಕಲುಲ್ಕರ್ಣಿ ನಂ-3 ಶ್ರೀಗುರು ಕಾಲೇಜ ರಸ್ತೆ ಓಜಾ ಬಡಾವಣೆ ಗುಲಬರ್ಗಾರವರು ನಾನು ದಿನಾಂಕ 15-11-2011 ರಂದು ಸಾಯಂಕಾಲ 7-30 ಗಂಟೆಗೆ ಬಿಜಾಪೂರದಿಂದ ಬಾಲಾಜಿ ಬಸ್ಸಿನ ಮುಖಾಂತರ ಗುಲಬರ್ಗಾದ ಜೇವರ್ಗಿ ರಿಂಗ ರೋಡ ಹತ್ತಿರ ಇಳಿದು ಮನೆ ಕಡೆಗೆ ನಡೆದುಕೊಂಡು ಶ್ರೀಗುರು ಕಾಲೇಜ ಹತ್ತಿರ ಹೋಗುತ್ತಿದ್ದಾಗ ಇಬ್ಬರು ಆಟೋದಿಂದ ಇಳಿದು ಬಂದು ಮೋಬೈಲ ಕೇಳುವ ನೇಪದಲ್ಲಿ ಕೈ ಹಿಡಿದು ದಬ್ಬಿದರು ನಂತರ ನಾಗನನಳ್ಳಿ ರಸ್ತೆ ಕಡೆಯಿಂದ ಇಬ್ಬರೂ ಬಂದು ಹಿಡಿದರು ನಂತರ ಬಲಗೈಯಲ್ಲಿದ್ದ 5 ಗ್ರಾಂ ಉಂಗುರು 2 ಮೊಬೈಲ ಪೋನ, ಕೈಯಲ್ಲಿದ್ದ ಕೈ ಗಡಿಯಾರ ಮತ್ತು ಜೇಬಿನಲ್ಲಿದ್ದ ಅಂದಾಜು 3000/- ರೂ ನಗದು ಹಣ ಒಟ್ಟು ಅಂದಾಜು 29000/- ಕಿಮ್ಮತ್ತಿನ ವಸ್ತುಗಳನ್ನು ಹೆದರಿಸಿ ದೋಚಿಕೊಂಡು ಆಟೊದಲ್ಲಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 283/11 ಕಲಂ 392 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: