POLICE BHAVAN KALABURAGI

POLICE BHAVAN KALABURAGI

03 November 2011

GULBARGA DIST REPORTED CRIMES

ಹಲ್ಲೆ ಪ್ರಕರಣ :

ಶಹಾಬಾದ ನಗರ ಠಾಣೆ : ಅಬ್ದುಲನಬಿ ತಂದೆ ಅನ್ವರಸಾಬ ಮೌಜನ ಸಾ:ಹಳೆ ಶಹಾಬಾದ ರವರು ನಾನು ಶಂಕರಲಿಂಗ ಗುಡಿಯ ಹತ್ತಿರ ಹೋಗುತ್ತಿರುವಾಗ ಮಹ್ಮದ ಇಕ್ಬಾಲ ತಂದೆ ಮಹ್ಮದ ಇಬ್ರಾಹಿಂ ಸಂಗಡ ಇನ್ನೂ 7 ಜನರು ಎಲ್ಲರೂ ಹಾಳೆ ಶಹಾಬಾದ ರವರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ನನಗೆ ಎಡ ಕುತ್ತಿಗೆಗೆ ಎಡಗೈ ಮೊಳಕೈಗೆ ಕೈ ಮುಷ್ಠಿಮಾಡಿ ಬೆನ್ನಿಗೆ ಎಡಕುತ್ತಿಗೆಗೆ ಹೊಡೆದನು ನಮ್ಮ ಅತ್ತಿಗೆಗೆ ಕೈಯಿಂದ ಬೆನ್ನಿಗೆ ಹೊಡೆದು ಸೀರೆ ಹಿಡಿದು ಎಳೆದಾಡಿ ಮತ್ತು ಉಮರನಿಗೂ ಕೂಡಾ ಕೈಮುಷ್ಠಿಮಾಡಿ ಮುಖಕ್ಕೆ ಹೊಡೆದಿದ್ದರಿಂದ ರಕ್ತಗಾಯ ಮತ್ತು ಗುಪ್ತಗಾಯ ಆಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ 164/2011 ಕಲಂ: 427 323 504 341 354 147 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಯು.ಡಿ.ಅರ್. ಪ್ರಕರಣ :

ಮಳಖೇಡ ಪೊಲೀಸ್ ಠಾಣೆ : ದೊಡ್ಡಪ್ಪ ತಂದೆ ಗುಂಡಪ್ಪ ಬೈಯರ ಸಾ|| ಮಳಖೇಡ ರವರು ನಾನು ದಿನಾಂಕ 02/11/2011 ರಂದು ಕೆಲಸ ಮುಗಿಸಿಕೊಂಡು ದರ್ಗಾದಿಂದ ಮಳಖೇಡಕ್ಕೆ ಬರುತ್ತಿರುವಾಗ ಸಾಯಂಕಾಲ 7:30 ಗಂಟೆಯ ಸುಮಾರಿಗೆ ಮಳಖೇಡ ಚಿತ್ತಾಪುರ ರೋಡಿನ ಮೇಲೆ ಒಬ್ಬ ಅಪರಿಚಿತ ವ್ಯಕ್ತಿ ಬಿದ್ದು ನರಳಾಡುತ್ತಿದ್ದು ನಾನು ಮತ್ತು ನಮ್ಮೂರು ರಾಜಶೇಖರ ಪುರಾಣಿಕ ಇಬ್ಬರು ಕೂಡಿಕೊಂಡು ಬಿದ್ದಿರುವನಿಗೆ ನೋಡಲಾಗಿ ಪೇಪರಿ ಬಂದು ಒದ್ದಾಡುತ್ತಿದ್ದನು ಅವನ ಬಾಯಿಯಿಂದ ಜೊಲ್ಲು ಬುರುಗು ಸೋರುತ್ತಿದ್ದು ಆಗ ನಾನು 108 ಅಂಬುಲೆನ್ಸಗೇ ಪೋನ್ ಮಾಡಿ ಉಪಚಾರ ಕುರಿತು ಸೇಡಂ ಸರ್ಕಾರಿ ಆಸ್ಪತ್ರೇಗೆ ಸೇರಿಕೆ ಮಾಡಿದ್ದು ಸದರಿ ಅಪರಿಚಿತ ವ್ಯಕ್ತಿಯು ಸೇಡಂ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತ ಮೃತಪಟ್ಟಿದ್ದು ಇರುತ್ತದೆ ಅಂತ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಯು.ಡಿ.ಆರ್.ನಂ.11/2011 ಕಲಂ 174 ನೇದ್ದರ ಪ್ರಕಾರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: