POLICE BHAVAN KALABURAGI

POLICE BHAVAN KALABURAGI

30 November 2011

GULBARGA DIST REPORTED CRIMES

ಗ್ರಾಮೀಣ ಠಾಣೆ : ಶ್ರೀ ನಾಗೇಶ ತಂದೆ ಸುಬ್ರಮಣ್ಯಂ ಭಟ್ ಸಾ: ಬ್ಯಾಂಕ ಕಾಲನಿ ಗುಲಬರ್ಗಾ ರವರು, ದಿನಾಂಕ 28-11-11 ರಂದು ಸೋಮುವಾರ ರಾತ್ರಿ 18 ಟಾಯರಗಳು ರೂಮನಲ್ಲಿ ಇಟ್ಟು ಹೋಗಿರುತ್ತೇವೆ ಎಂದಿನಂತೆ ನಾವು ಆಪೀಸಿಗೆ ಬಂದಿದ್ದು ಬೆಳ್ಳಿಗ್ಗೆ 9:30 ಎಎಮಕ್ಕೆ 29-11-2011 ರಂದು ಬಂದಾಗ ನಮ್ಮ ಲಾರಿ ಚಾಲಕನಾದ ಚಂದ್ರಕಾಂತ ರೂಮ ಕೊಂಡಿ ಮುರಿದಿದನ್ನು ಕಂಡು ನಮಗೆ ಬಂದು ತಿಳಿಸಿದನು ನಾನು ಮತ್ತು ಹರೀಶ ಕೂಡಿ ಹೋಗಿ ನೋಡಲಾಗಿ ನಾವು ಇಟ್ಟಿದ್ದ 18 ಟಾಯರಗಳನ್ನು 10 ಟಾಯರಗಳನ್ನು ರಾತ್ರಿ ವೇಳೇಯಲ್ಲಿ ಯಾರೋ ಕಳ್ಳರು ಬಂದು ನಮ್ಮ ಸ್ಟೋರ ರೂಮಿನ ಕೀಲಿ ಮುರಿದು ಜೆ, ಕೆ ಕಂಪನಿಯ ಹತ್ತು ಟಾಯರಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಅದರ ಮೊತ್ತ 1,40,000/-ರೂ.ಗಳು ಆಗುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಗುನ್ನೆ ಸಂಖ್ಯೆ 357/2011 ಕಲಂ 457 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀಮತಿ ಲಕ್ಷ್ಮೀ ಅಂಬಿಕಾ ಗಂಡ ಚಂದ್ರಕಾಂತ ಮಾಲಿ ಪಾಟೀಲ ಮು:ಆಳಂದ ಚೆಕ್ಕಪೊಸ್ಟ ರಾಮತೀರ್ಥ ಹತ್ತಿರ ಗುಲಬರ್ಗಾ ರವರು, ದಿನಾಂಕ:27-11-2011 ರಂದು ನಾನು ಮತ್ತು ನನ್ನ ತಂದೆ ತಾಯಿ ಹಾಗು ನಮ್ಮ ತವರುಮನೆಯ ಶಿವಶರಣಪ್ಪಾ ತಂದೆ ಬವಂತರಾವ ಪಟೀಲ ಮತ್ತು ಅಶೋಕ ತಂದೆ ನೀಲಕಂಟಪ್ಪಾ ವಾಗಣಗೇರಿ ಇವೆಲ್ಲರೂ ಕೂಡಿ ನನ್ನ ಗಂಡನ ಮೆನೆಗ ಹೋಗಿದ್ದು ಮನೆಯಲ್ಲಿ ನನ್ನ ಗಂಡ ಚಂದ್ರಕಾಂತ ತಂದೆ ಸುಬಾಷ ಮಾಲಿಪಾಟೀಲ ಮಾವ ಸುಭಾಶ ಮಾಲಿಪಾಟೀಲ ಅತ್ತೆ ಶ್ರೀದೇವಿ ಮತ್ತು ಮೈದುನ ರವಿ ಇವರೆಲ್ಲರೂ ಇದ್ದು ಅವರಿಗೆ ನಮ್ಮೂರಿನ ಮುಖಂಡರಾದ ಶಿವಶರಣಪ್ಪ ಮತ್ತು ಅಶೋಕ ಕೂಡಿ ನನ್ನ ಗಂಡನಿಗೆ ನಿನ್ನ ಹೆಂಡತಿಗೆ ಮನೆಯಲ್ಲಿಟ್ಟು ಕೊಳ್ಳು ಹೀಗೆ ಎಷ್ಟು ವರ್ಷ ಅಂತಾ ಅವಳು ತವರುಮನೆಯಲ್ಲಿ ಇರಬೆಕು ಅಂತ ಅಂದಾಗ ಹಾಗು ನನ್ನ ಗಂಡ ಚಂದ್ರಕಾಂತ ಅತ್ತೆ ಮಾವ ಮೈದುನ ಕೂಡಿ ಬಂದು ನನಗೆ ಮತ್ತು ನನ್ನ ತಂದೆ ತಾಯಿಯವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಎಷ್ಟು ಸಾರಿ ಹೇಳಬೇಕು ನಿಮಗೆ ಅವಳನ್ನು ನಾವು ನಮ್ಮ ಮನೆಯಲ್ಲಿ ಇಟ್ಟುಕೊಳ್ಳುದಿಲ್ಲಾ ಅಂತಾಹೇಳಿ ಕೈಯಿಂದ ಹೊಡೆ ಬಡೆಮಾಡಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ಸಂಖ್ಯೆ 358/2011 ಕಲಂ 498 (ಎ) 323 504 506 ಸಂ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ : ಶ್ರೀ ಶ್ರೀನಾಥ ತಂದೆ ಶಂಕ್ರೆಪ್ಪ ಮಿಂಚನ್ ಸಾ:ಸಾವಳಗಿ (ಬಿ) ಗ್ರಾಮ ಹಾ:ವ:ಬಿದ್ದಾಪೂರ ಕಾಲನಿ ಗುಲಬರ್ಗಾ ರವರು, ದಿನಾಂಕ 29-11-2011 ರಂದು ನಾನು ಮತ್ತು ನನ್ನ ಅಳಿಯ ಮಲ್ಲಪ್ಪ ಮೋಟಾರ ಸೈಕಲ ಹಿರೋ ಹೊಂಡಾ ಶೈನ್ ಕೆಎ 32 ಎಕ್ಸ 6875 ನೇದ್ದರ ಮೇಲೆ ಕುಳಿತು ಕೊಂಡು ಮನೆಯ ಹೊರಟಿದ್ದು, ರೇಲ್ವೆ ಗೇಟ ದಾಟಿ ಸ್ವಲ್ಪ ಮುಂದೆ ರೋಡಿನ ಮೇಲೆ ಮಧ್ಯದಲ್ಲಿ ಹೊರಟಾಗ ಎದುರು ನಿಂದ ಅಂದರೆ ಅಫಜಲಪೂರ ರೋಡ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರ ಕೂಡಾ ತನ್ನ ಮೋಟಾರ ಸೈಕಲನ್ನು ಅತಿವೇಗದಿಂದ ನಡೆಸುತ್ತಾ ರೋಡ ಮಧ್ಯದಲ್ಲಿ ಹೊರಟಿದ್ದು ಎರಡು ಮೋಟಾರ ಸೈಕಲ ಚಾಲಕರು ತಮ್ಮ ತಮ್ಮ ಸೈಡಿಗೆ ಹೋಗದೇ ರೋಡಿನ ಮಧ್ಯದಲ್ಲಿ ವೇಗವಾಗಿ ನಡೆಯಿಸುತ್ತಾ ಬಂದವರೇ ಒಮ್ಮಿಂದ ಒಮ್ಮೇಲೆ ಎರಡು ವಾಹನ ಚಾಲಕರು ಮುಖಾಮುಖಿ ಡಿಕ್ಕಿ ಹೊಡೆದರು. ಅಪಘಾತವಾಗಿ ನನಗೆ ಭಾರಿ ರಕ್ತಗಾಯವಾಗಿದ್ದು, ಕಾರಣ ಸದರಿ ಎರಡು ಮೋಟಾರ ಸೈಕಲ ಸವಾರರಾದ 1. ಮಲ್ಲಪ್ಪ @ ಮಲ್ಲಿಕಾರ್ಜುನ ತಂದೆ ಪ್ರಭು ದೊಡ್ಡಮನಿ ಸಾ: ಗೋಬ್ಬುರ(ಕೆ) ಮೋಟಾರ ಸೈಕಲ ನಂ ಕೆಎ 32 ಎಕ್ಸ್‌‌ 6875 ನೇದ್ದರ ಸವಾರ 2. ಲಕ್ಷ್ಮೀಪುತ್ರ ತಂದೆ ಶಿವಲಿಂಗಪ್ಪ ಸಾ: ಗೋಟುರು ಸಧ್ಯ ಕಾಂತಾ ಕಾಲನಿ ಗುಲಬರ್ಗಾ ಮೋಟಾರ ಸೈಕಲ ನಂ ಕೆಎ 32 ಎಚ 9763 ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ಸಂಖ್ಯೆ 359/2011 ಕಲಂ 279 337 338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

No comments: