ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಸತೀಶ ತಂದೆ ಬೈಲಪ್ಪಾ ಸಾ:ಅಪ್ಪರಮಡ್ಡಿ  ಶಹಾಬಾದ ರವರು ನಾನು ನನ್ನ ಮೋಟಾರ ಸೈಕಲ್ ನಂ: ಕೆಎ 32 ಈಕ್ಯೂ2163 ನೇದ್ದು ಶಹಾಬಾದ ನಗರದ ಸಭೆ ಆಪೀಸ್ ಎದುರುಗಡೆ ದಿನಾಂಕ:16/11/2011 ರಂದು 10.00 ಗಂಟೆ ಸುಮಾರಿಗೆ ನಿಲ್ಲಿಸಿದನ್ನು  ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 178/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .
ಶಹಾಬಾಧ ನಗರ ಠಾಣೆ: ದಿನಾಂಕ 26/11/11 ರಂದು  ಮುಂಜಾನೆ 11-05 ಗಂಟೆಯ ಸುಮಾರಿಗೆ  ಪೊಲೀಸ್ ಇನ್ಸಪೇಕ್ಟರ್ ರವರು ಮತ್ತು ಮತ್ತು ಸಿಬ್ಬಂದಿಯವರು ಪೆಟ್ರೋಲಿಂಗ ಮಾಡುತ್ತ ಹೊರಟಾಗ ರೈಲ್ವೇ ನಿಲ್ದಾಣದ ಎದುರಗಡೆ ಸತೀಶ ತಂದೆ ಶಂಕರ ಇತನು ತನ್ನನ್ನು ಮರೆ ಮಾಚಿಕೊಳ್ಳುತ್ತಿರುವದ್ನು ಗಮನಿಸಿ ಸಂಶಯ ಬಂದ್ದಿದ್ದರಿಂದ ಅವನನ್ನು ಚೆಕ್ಕ ಮಾಡಲಾಗಿ ಆತನಲ್ಲಿ  4 ಮೋಬೈಲಗಳು ದೊರೆತ್ತಿದ್ದು ಅವುಗಳ ಬಗ್ಗೆ ಸರಿಯಾದ ಉತ್ತರ ನೀಡಲಾರದ ಕಾರಣ ಆತನನ್ನು ವಶಕ್ಕೆ ತೆಗೆದುಕೊಂಡು ಅವನಿಂದ ಮೋಬಾಯಿಲ್ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 179/2011 ಕಲಂ 41 (ಡಿ) ಸಿ.ಅರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. 
ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ: ಶ್ರೀ ಪದ್ಮನಾಭ ತಂದೆ ಹನುಮಂತಚಾರಿ ವಯ 55 ವರ್ಷ ಉಃ ಎಸ್.ಬಿ.ಹೆಚ್  ಬ್ಯಾಂಕ ನೆಹರು ಗಂಜದ ಮ್ಯಾನೇಜರ ಗುಲಬರ್ಗಾ ರವರು ನೆಹರು ಗಂಜದ ಎದುರುಗಡೆ ಇರುವ ನಮ್ಮ ಎಸ.ಬಿ.ಎಚ. ಎ.ಟಿ.ಎಮ್ ಮಶೀನ್ ನ್ನು   ದಿನಾಂಕ 27.11.2011 ರಿಂದ 28-11-2011 ರ ಬೆಳಗಿನ ಜಾವದ ತನಕ  ಯಾರೋ ಕಳ್ಳರು ಎ.ಟಿ.ಎಂ ಮಶಿನ ಒಡೆದು ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 238/2011 ಕಲಂ 454, 457, 380 , 511 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಮತಿ ಚಂದ್ರಕಲಾ    ಗಂಡ ರಾಜಕುಮಾರ ಮೂಲಭಾರತಿ ಸಾ; ಕೆ.ಹೆಚ್.ಬಿ.ಕಾಲೋನಿ  ರಾಜಾಪೂರ ಗುಲಬರ್ಗಾ ರವರು ನಾನು ದಿನಾಂಕ  26-11-2011  ರಂದು ರಾತ್ರಿ 9-30 ಗಂಟೆಗೆ  ಸುಪರ ಮಾರ್ಕೇಟ ದಿಂದ ಎಸ್.ವಿ.ಪಿ.ಸರ್ಕಲ್  ಮೇನ ರೋಡಿನಲ್ಲಿ ಬರುವ ಜಗತ ಸರ್ಕಲ್ಹ ಹತ್ತಿರದ ಮಹಾನಗರ ಪಾಲಿಕೆಯ ಕಮಿಷನರ ಮನೆಯ ಕಂಪೌಡ ಗೋಡೆಯ ಹತ್ತಿರ    ರೋಡಿನ ಮೇಲೆ   ಅಟೋರೀಕ್ಷಾ  ನಂ: ಕೆಎ 32 ಎ 7537  ನೇದ್ದರ ಚಾಲಕ ರಾಜಕುಮಾರ ಇತನು   ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ತನ್ನಿಂದ ತಾನೆ ಅಟೋ ಪಲ್ಟಿಮಾಡಿ ಭಾರಿ ಗಾಯಹೊಂದಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 152/2011 ಕಲಂ 278, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
 
 
 
 
No comments:
Post a Comment