POLICE BHAVAN KALABURAGI

POLICE BHAVAN KALABURAGI

06 November 2011

GULBARGA DIST REPORTED CRIMES

ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:

ಆಳಂದ ಪೊಲೀಸ ಠಾಣೆ: ರಂಜಿತ ತಂದೆ ಆನಂದರಾವ ಬೇವಿನಕಟ್ಟಿ ಸಾ: ಸನಗುಂದಿ ಗ್ರಾಮ ರವರು ನಾನು ದಿನಾಲು ನಮ್ಮ ಗ್ರಾಮದಿಂದ ಗುತ್ತೆದಾರ ಕಾಲೇಜಿಗೆ ದಿನಾಲು ಬಸ್ಸಿನಲ್ಲಿ ನಮ್ಮ ಗೆಳೆಯರ ಸಂಗಡ ಬಂದು ಹೋಗುವದು ಮಾಡುತ್ತಿರುತ್ತೆನೆ ದಿನಾಂಕ: 03/11/2011 ರಂದು ನಾನು ಮತ್ತು ಗೆಳೆಯರಾದ ನಾಗರಾಜ ಹಾಗೂ ಮಲ್ಲಿಕಾರ್ಜುನ್ , ಮೂವರು ಕೂಡಿ ಬೆಳಿಗ್ಗೆ ಕಾಲೇಜಿಗೆ ಬಂದು ಮದ್ಯಾಹ್ನ 2.30 ರ ಬಸ್ಸಿಗೆ ಸನಗುಂದ ಗ್ರಾಮಕ್ಕೆ ಹೋಗುವಾಗ ಬಸ್ಸಿನಲ್ಲಿ ಮುನ್ನಳ್ಳಿ ಗ್ರಾಮದ ಷಣ್ಮುಖ ಸ್ವಾಮಿ, ಶೇಖರ , ಹಾಗೂ ಸಂತೋಷ ಇವರು ಬಸ್ಸಿನಲ್ಲಿ ದಕ್ಕೆ ಹಚ್ಚಿಸಿ ಕಿರಿಕಿರಿ ಮಾಡಿಕೊಂಡಿದ್ದು ನಮ್ಮಗೆ ಕೈಯಿಂದ ಸತೋಷ ಮತ್ತು ಷಣ್ಮುಖ ಸ್ವಾಮಿ, ಶೇಖರ ಹೊಡೆದಿದ್ದರು ದಿನಾಂಕ 04/11/2011 ರಂದು ಬೆಳಿಗ್ಗೆ ನಮ್ಮ ಗ್ರಾಮದಿಂದ ಬಸ್ಸಿಗೆ ನಾನು ಮತ್ತು ಗೆಳೆಯರಾದ ನಾಗರಾಜ ಬೇವಿನಕಟ್ಟಿ ಹಾಗೂ ಮಲ್ಲಿಕಾರ್ಜುನ್ ಬೇವಿನಕಟ್ಟಿ, ಶ್ರವಣ ಬೇವಿನಕಟ್ಟಿ ಕಾಲೇಜಿಗೆ ಬಂದು ಕಾಲೇಜು ಮುಗಿಸಿಕೊಂಡು ನಾವೆಲ್ಲರೂ ಕೂಡಿ ಆಳಂದದಿಂದ ವಿ.ಕೆ ಸಲಗಾರ ಹೋಗುವ ಬಸ್ಸಿನಲ್ಲಿ ಹೋಗುತ್ತಿದ್ದಾಗ ಹಳ್ಳಿ ಸಲಗಾರ ಪಾಟಿ ಸಮೀಪ ಬಸ್ಸು ನಿಲ್ಲಿಸಿ ಷಣ್ಮುಖ ಸ್ವಾಮಿ ತಂದೆ ರೇವಣಯ್ಯ ಸ್ವಾಮಿ,ಸಂತೋಷ ತಂದೆ ಮಾಹಾದೇವ ಜಾನಿ , ಶೇಖರ ತಂದೆ ಪ್ರಬು ಜಾನಿ , ಅನವೀರ ಜಾನಿ ,ವಿಕ್ರಮ ತಂದೆ ಪ್ರಬು ಬುಜುರ್ಕೆ ಎಲ್ಲರೂ ಕೂಡಿ ಬಸ್ಸ ನಿಲಿಸಿ ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಮತ್ತು ಜಾತಿ ನಿಂದನೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 255/2011 ಕಲಂ143.324,323,148,149,506,504,143,147)ಐಪಿಸಿ 3(I) 3(x) ಎಸಸಿ ಮತ್ತು ಎಸಟಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಮೋಸ ವಂಚನೆ ಪ್ರಕರಣ :

ಆಳಂದ ಪೊಲೀಸ ಠಾಣೆ: ವಿಶ್ವ ಸನ್ಮತಿ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಸವಳೇಶ್ವರ ಶಾಲೆಯಲ್ಲಿ ಬಸವಂತರಾಯ ಕರಕಳ್ಳಿ, ಮಲ್ಕಪ್ಪ ಕುದರೆ, ಬಸವರಾಜ ಪಡಶೆಟ್ಟಿ, ಸಿದ್ದಪ್ಪ ಪಾವಲೆ ರವರುಗಳು ಬಸವಂತರಾಯನು ಇದೆ ಶಾಲೆಯಲ್ಲಿ ನಿವೃತಿ ಹೊಂದಿ ರಿವೈಜಡ್ ಸಂಬಳ ಪಡೆಯುವ ಕುರಿತು ವಂಚಿಸಿ ಉದ್ದೇಶಕ್ಕಾಗಿ ಸುಳ್ಳು ದಸ್ತಾವೇಜಗಳನ್ನು ನೈಜವೆಂದು ಬಳಸಿ ಅಥವಾ ಉಪಯೋಗಿಸಿ ಖೋಟಾ ಮೊಹರು ತಯಾರಿಸಿ ಸಂಬಳ ಪಡೆದು ಸರಕಾರಕ್ಕೆ ಹಾಗು ಸಂಸ್ಥೆಗೆ ನಾಲ್ಕು ಜನರು ಮೋಸಮಾಡಿರುತ್ತಾರೆ ಅಂತ ಶರಣಪ್ಪ ತಂದೆ ಗುಂಡಪ್ಪ ಸಾ: ಸಾವಳೇಶ್ವರ ಗ್ರಾಮ ರವರು ಮಾನ್ಯ ನ್ಯಾಯಾಲಯ ಆಲಂದ ರವರಿಗೆ ವಿನಂತಿಸಿಕೊಂಡ ಮೇರೆಗೆ ಮಾನ್ಯ ನ್ಯಾಯಾಲದ ಆದೇಶದನ್ವಯ ಠಾಣೆ ಗುನ್ನೆ ನಂ: 256/2011 ಕಲಂ 420,468,471,472, ಸಂ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ :
ಶಹಾಬಾದ ನಗರ ಪೊಲೀಸ ಠಾಣೆ
: ಪ್ರಕಾಶ ತಂದೆ ಚಂದ್ರಶೇಖರ ಮಸಬೋ ಸಾ:ಜೀವಣಗಿ ರವರು ನಾನು ದಿ:05/11/2011 ರಂದು ರಾತ್ರಿ ಸಮಯದಲ್ಲಿ ನಮ್ಮ ಅಳಿಯ ಮಂಜುನಾಥ ತಂದೆ ಸಿದ್ದಣ್ಣ ಕರಕಳ್ಳಿ ಸಾ:ನಾಲ್ವಾರ ಇವನು ಶಹಾಬಾದದ ಕೋರ್ಟ ದಾಟಿ 100 ಮೀಟರ ಅಂತರದಲ್ಲಿ ರೋಡಿನ ಮೇಲೆ ಸ್ಕಿಡಾಗಿ ಬಿದ್ದಿರುತ್ತಾನೆ ಅಂತಾ ವಿಷಯ ತಿಳಿದು ಸ್ಥಳಕ್ಕೆ ಹೋಗಿ ನೋಡಲಾಗಿ ಮಂಜುನಾಥ ಇತನು ಬೋರಲಾಗಿ ಬಿದ್ದಿದ್ದು ತನ್ನ ಮೋಟಾರ ಸೈಕಲ್ ನಂ ನಂ.ಕೆಎ-33 ಜೆ-1395 ನೇದ್ದನ್ನು ಅತಿವೇಗ & ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಸ್ಕಿಡಾಗಿ ರೋಡಿನ ಮೇಲೆ ಬಿದ್ದಿರುವದು ಕಂಡುಬರುತ್ತದೆ ಸದರಿಯವರು ಸ್ಕಿಡಾಗಿ ಬಿದ್ದಿರುವದರಿಂದ ಮುಖಕ್ಕೆ,ಎಡಗಾಲು ಪಾದಕ್ಕೆ ರಕ್ತಗಾಯವಾಗಿದ್ದು ಇರುತ್ತದೆ ;ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ 166/2011 ಕಲಂ:279 337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮುಂಜಾಗ್ರತೆ ಕ್ರಮ :

ಫರಹತಾಬಾದ ಠಾಣೆ : ಪಿ.ಎಸ್.ಐ ಫರಹತಾಬಾದ ಠಾಣೆ ದಿನಾಂಕ: 5-11-2011 ರಂದು ಮಧ್ಯಾಹ್ನ 3-20 ನಾನು ಮತ್ತು ಸಂಗಡ ಸಿಬ್ಬಂದಿಯವರೊಂದಿಗೆ ತಾಡ ತಗೆನೂರ ಹಾಗರಗುಂಡಗಿ ಗ್ರಾಮಕ್ಕೆ ಹಳ್ಳಿ ಭೇಟಿ ನೀಡಿ ಉಕ್ಕಡ ಠಾಣೆಗೆ ಬೇಟಿ ನೀಡಿದಾಗ ಶ್ರೀ ಮಲ್ಲಿಕಾರ್ಜುನ ಎ.ಎಸ್.ಐ ಉಕ್ಕಡ ಠಾಣೆಯ ಪ್ರಭಾರಿ ರವರು ತಿಳಿಸಿದೇನೆಂದರೆ ಹೊಲ ಸರ್ವೆ ನಂ: 15 ನೇದ್ದರ ಹೊಲದ ಸಂಬಂಧ ಮೊದಲನೇಯ ಪಾರ್ಟಿಯವರಾದ ರೇವಣಸಿದ್ದಪ್ಪಾ ತಂದೆ ಮಲ್ಲೇಶಪ್ಪಾ ಸಜ್ಜನ, ರವಿಕುಮಾರ ತಂದೆ ರೇವಣಸಿದ್ದಪ್ಪಾ ಇಬ್ಬರೂ ಸಾ: ಹಾಗರಗುಂಡಗಿ, ಸಂಜುಕುಮಾರ ತಂದೆ ಬಬ್ರುವಾಹನ ಸಾ: ಬೀದರ ಇವರುಗಳ ಮತ್ತು ಎರಡನೇಯ ಪಾರ್ಟಿಯವರಾದ ಮಲ್ಲಿಕಾರ್ಜುನ ತಂದೆ ರೇವಣಸಿದ್ದಪ್ಪಾ ಸಜ್ಜನ, ಭೀಮಶಾ ಖನ್ನಾ, ನಾಗಪ್ಪಾ ಕಂಟಿಕರ, ಶರಣಪ್ಪಾ ಕುದರಿಗಡ್ಡಿ, ಶಿವಶರಣಪ್ಪಾ ಕುದರಿಗಡ್ಡಿ, ನಾಗಪ್ಪಾ ತೆಳಗಿಮನಿ, ಶರಣಮ್ಮಾ ಗಂಡ ಶಿವಶರಣಪ್ಪಾ ಅಡಕಿ, ಬಾಬು ವೈಜಾಪೂರ, ರಾಮ ವೈಜಾಪೂರ, ಚನ್ನಪ್ಪಾ ತಂದೆ ಜಗಪ್ಪಾ ವೈಜಾಪೂರ, ರಾಣೋಜಿ ವೈಜಾಪೂರ,ರಮೇಶ ವೈಜಾಪೂರ, ಶಿವಶರಣಪ್ಪಾ ಅಡಕಿ ನಾಗಪ್ಪಾ ವೈಜಾಪೂರ ಎಲ್ಲರೂ ಸಾ: ಹಾಗರಗುಂಡಗಿ ತಾ:ಜಿ: ಗುಲಬರ್ಗಾ ದಿನಾಂಕ: 30/9/2011 ರಂದು ಇವರುಗಳ ಮಧ್ಯ ತಂಟೆ ತಕರಾರು ಆಗಿ ಮೊದಲನೇಯ ಪಾರ್ಟಿಯವರ ವಿರುದ್ಧ ಠಾಣಾ ಗುನ್ನೆ ನಂ: 188/11 ಕಲಂ: 143, 147, 148, 447, 504, 506 ಸಂ: 149 ಐಪಿಸಿ ಪ್ರಕಾರ ಮತ್ತು ಎರಡನೇಯ ಪಾರ್ಟಿಯರವರ ವಿರುದ್ಧ ಗುನ್ನೆ ನಂ: 185/11 ಕಲಂ: 143, 147, 148, 447, 504, 506 ಸಂ: 149 ಐಪಿಸಿ ಪ್ರಕಾರ ಗುನ್ನೆ ದಾಖಲಾಗಿದ್ದು ಇರುತ್ತದೆ. ಇದರಿಂದಾಗಿ ತಮ್ಮ ತಮ್ಮಲ್ಲಿ ದ್ವೇಷ ಬೆಳೆಸಿಕೊಂಡಿದ್ದು ಎರಡು ಪಾರ್ಟಿಯವರು ಹೊಲ ಸರ್ವೆ ನಂ: 15 ರ ಜಮೀನಿನ ಬಗ್ಗೆ ಮತ್ತೆ ಅವರವಲ್ಲಿ ತಂಟೆ ತಕರಾರು ಮಾಡಿಕೊಂಡು ತಮ್ಮ ತಮ್ಮಲ್ಲಿ ಒಬ್ಬರಿಗೊಬ್ಬರು ಹೊಡೆದಾಡಿ ರಕ್ತಪಾತ ಮಾಡಿಕೊಳ್ಳುವದು ಮತ್ತು ಆಸ್ತಿ ಪಾಸ್ತಿ ಹಾಗೂ ಜೀವಕ್ಕೆ ಹಾನಿ ಮಾಡಿಕೊಳ್ಳುವ ಸಂಭವ ಕಂಡು ಬಂದಿದ್ದರಿಂದ ಅಲ್ಲದೆ ಗ್ರಾಮದಲ್ಲಿ ಶಾಂತತಾ ಭಂಗವುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಎರಡು ಪಾರ್ಟಿಯ ಜನರ ವಿರುದ್ಧ ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಠಾಣೆ ಗುನ್ನೆ ನಂ: 203/2011 ಕಲಂ 107 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲಿಸಿ ಕೊಂಡಿರುತ್ತಾರೆ

No comments: