POLICE BHAVAN KALABURAGI

POLICE BHAVAN KALABURAGI

06 October 2011

Gulbarga District Reported Crimes

ಕಳವು ಪ್ರಕರಣ :
ಬ್ರಹ್ಮ ಪೂರ ಠಾಣೆ :ದಿನಾಂಕ: 06-10-2011 ರಂದು ಶ್ರೀ.ಸೋಮಶೇಖರ ತಂದೆ ಗುಂಡಪ್ಪ ಟೆಂಗಳಿ, ಸಾ|| ಟೆಂಗಳಿ ಜುವಲರಸ, ಸುಪರ ಮಾರ್ಕೆಟ ಗುಲಬರ್ಗಾರವರು ತಮ್ಮ ಅಂಗಡಿ ಅಂದಾಜು 1100 ಗಂಟೆಯ ಸುಮಾರಿಗೆ ಒಬ್ಬ ಹುಡುಗಿ ಕಿವಿಓಲೆ ಖರೀಸುವದು ಇದ್ದು, ತೋರಿಸಿ ಅಂತಾ ಹೇಳಿದಾಗ ನಾನು ಅವಳಿಗೆ ಒಂದು ಟ್ರೇಯಲ್ಲಿ ಅಂದಾಜು 12 ಜೊಡಿ ತರಹದ ಕಿವಿಓಲೆ ತೋರಿಸಿದ್ದು ಆಗ ನನಗೆ ಅವಳ ಮೇಲೆ ಅನುಮಾನ ಬಂದು ಅವಳ ಬ್ಯಾಗ ಚೆಕ ಮಾಡಿದಾಗ 1.4 ಗ್ರಾಂ ಬಂಗಾರದ ಉಂಗುರ ಅ||ಕಿ|| 3000/- ಇದ್ದು ಅದರ ಬಗ್ಗೆ ಅವಳಿಗೆ ಕೇಳಿದಾಗ ಸರಿಯಾದ ಉತ್ತರ ಕೊಡದೆ ಇದ್ದಾಗ ಕೋಠಾರಿ ಅಂಗಡಿಯ ಮಾಲಿಕನಾದ ದಾವಲ ತಂದೆ ಸತ್ಯಶೀಲ ಕೋಠಾರಿ ರವರಿಗೆ ಫೋನ ಮಾಡಿ ನನ್ನ ಅಂಗಡಿಗೆ ಕರೆಯಿಸಿಕೊಂಡು ವಿಚಾರಿಸಲಾಗಿ ಈ ಹುಡುಗಿ ಬೆಳಿಗ್ಗೆ 1025 ಗಂಟೆಯ ಸುಮಾರಿಗೆ ನಮ್ಮ ಅಂಗಡಿಗೆ ಬಂದು ರಿಂಗ ನೋಡಿ ಹೋಗಿದ್ದು, ಅಂತಾ ಹೇಳಿದಾಗ ಅವರಿಗೆ ಆ ರಿಂಗ ತೋರಿಸಲಾಗಿ ಇದು ನಮ್ಮ ಅಂಗಡಿಯಿಂದ ಕಳ್ಳತನ ಮಾಡಿಕೊಂಡು ಬಂದಿರುತ್ತಾಳೆ ಅಂತಾ ಹೇಳಿದರು ಆಗ ಅವಳ ಹೆಸರು ವಿಚಾರಿಸಲಾಗಿ ಸುಜಾತಾ ತಂದೆ ಬಾಬುರಾವ ಕರ್ಕರೆ ಸಾ|| ಮೇಥಿ ಮೇಳಕುಂದಾ ತಾ|| ಬಾಲ್ಕಿ, ಜಿ|| ಬೀದರ ಅಂತಾ ಹೇಳಿದ್ದು ಅವಳನ್ನು ಇಬ್ಬರು ಕೂಡಿಕೊಂಡು ಠಾಣೆಗೆ ತಂದು ಹಾಜರ ಪಡಿಸಿದ್ದು ಅವಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೃ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :

ಬ್ರಹ್ಮಪೂರ ಠಾಣೆ :ಕುಮಾರಿ.ವಿಜಯಲಕ್ಷ್ಮಿ ತಂದೆ ಮಲ್ಕಪ್ಪ ಕೌಲಗಿ, ಸಾ|| ಮಿಲನ ಚೌಕ ಗಾಜೀಪೂರ ಗುಲಬರ್ಗಾ ರವರು ದಿನಾಂಕ 06-10-11 ರಂದು ಬೆಳಿಗ್ಗೆ ಮಿಲನ ಚೌಕ ಗಾಜೀಪೂರದಲ್ಲಿರುವ ನಮ್ಮ ಮನೆಯ ಮುಂದೆ ನಾನು ಹಾಗೂ ನನ್ನ ತಾಯಿಯಾದ ಅಂಬುಜಾ ಅಣ್ಣನಾದ ಭೋಗೇಶ ಎಲ್ಲರೂ ಕೂಡಿ ಮಾತಾಡುತ್ತಾ ಕುಳಿತ್ತಿರುವಾಗ ಮೋಮಿನಪೂರದಲ್ಲಿರುವ ನಮಗೆ ಪರಿಚಯದವರೆ ಆದ 1.ಶೈನಾಜ ಗಂಡ ಫಲಾವುದ್ದಿನ, 2.ಫೀರದೋಸಬೇಗಂ ಗಂಡ ಖಮರ, 3.ಮಹ್ಮದ ಗೌಸ ತಂದೆ ಫಲಾವುದ್ದಿನ, 4.ಸಿರಾಜ@ಅಪ್ಪು ತಂದೆ ಫಲಾವುದ್ದಿನ ರವರು ಕೂಡಿಕೊಂಡು ಬಂದು ಫಿರ್ಯಾದಿಯೊಂದಿಗೆ ಜಗಳಕ್ಕೆ ಬಿದ್ದು, ಅವಾಚ್ಯ ಶಬ್ದಗಳಿಂದ ಬೈದು ನಮ್ಮ ವಿರುದ್ದ ನ್ಯಾಯಾಲಯದಲ್ಲಿ ಕೇಸು ಹಾಕಿ ನಮಗೆ ನೋಟಿಸ ಬರುವಂತೆ ಮಾಡಿದಿ ಅಂತಾ ಅನ್ನುತ್ತಾ ಶೈನಾಜ ಇವಳು ಕೈಯಿಂದ ಮುಖದ ಮೇಲೆ ಹೊಡೆದಿದ್ದು ಅಲ್ಲದೆ, ಮಹ್ಮದ ಗೌಸ ಈತನು ಸಹ ನನಗೆ ಕೈಯಿಂದ ಮುಖದ ಮೇಲೆ ಹೊಡೆದಿದ್ದು ಆಗ ಜಗಳ ಬಿಡಿಸಲು ಬಂದ ಭೋಗೇಶ ಈತನಿಗೆ ಸಿರಾಜ ಈತನು ತನ್ನ ಕೈಯಲ್ಲಿ ಇದ್ದ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಅಲ್ಲದೆ, ನನ್ನ ತಾಯಿ ಅಂಬುಜಾ ಇವಳೀಗು ಸಹ ಫೀರದೋಸಬೇಗಂ ಇವಳು ಕೈಯಿಂದ ಮುಖದ ಮೇಲೆ ಹೊಡೆದಿದ್ದು, ಅಲ್ಲದೆ ಎಲ್ಲರೂ ಕೂಡಿ ಹೋಗುವಾಗ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: