POLICE BHAVAN KALABURAGI

POLICE BHAVAN KALABURAGI

12 October 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಮುಖೇಶ ಕುಮಾರ ತಂದೆ ಅಂಬ್ರಿನ ಪ್ರಸಾದಸಿಂಗ್ ಮು|| ರೇಲ್ವೆ ಕ್ವಾಟ್ರಸ್ ಗುಲಬರ್ಗಾರವರು ನಮ್ಮ ಮನೆ ರಿಪೇರಿಗಾಗಿ ಮನೆಯ ಕೀಲಿ ಕೈ ಸೆಕ್ಷನ ಇಂಜನಿಯರ ಗುಲಬರ್ಗಾ ಕಾರಪೆಪೆಂಟ ರನಾದ ದತ್ತಪ್ಪ ಗುರಪ್ಪರವರ ಕೈಯಲ್ಲಿ ಬೆಳಿಗ್ಗೆ ಕೊಟ್ಟಿದ್ದು ಆಗ ಮನೆಯಲ್ಲಿ ಎಲ್ಲಾ ಸಾಮಾನುಗಳು ಸುರಕ್ಷಿತವಾಗಿದ್ದು . ನಂತರ ದತ್ತಪ್ಪ ಗುರಪ್ಪ ತಮಗೆ ಫೊನ ಮಾಡಿ ಮನೆಯಲ್ಲಿ ಕಳ್ಳತನವಾಗಿದೆ ಅಂತಾ ತಿಳಿಸಿದ್ದು ಮನೆಗೆ ಬಂದು ನೋಡಲಾಗಿ ಮನೆಯಲ್ಲಿದ್ದ ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿ ಆಗಿದ್ದವು, ಹಿಂದಿನ ಬಾಗಿಲು ಮುರಿದಿತ್ತು ಮನೆಯಲ್ಲಿದ್ದ 13,800/ - ರೂ ನಗದು ಹಣ ಹಾಗೂ ಸೋನಿ ಡಿಜಿಟಲ್ ಕ್ಯಾಮರಾ ಯಾರೋ ಕಳ್ಳರೂ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 182/11 ಕಲಂ 454,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಬಸ್ಸ ಚಾಲಕನ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಬಗ್ಗೆ :

ಆಳಂದ ಪೊಲೀಸ ಠಾಣೆ : ನಾಗೇಶ ತಂದೆ ಗುಂಡಪ್ಪ ಹೀರೆಗೌಡ ಹಾ|| ವ|| ಚಿಗರಳ್ಳಿ ಕ್ಯಾಂಪ ಸಾ|| ಡೊಂಗರಗಾಂವ ನಾನು ಬಸ್ಸ ಚಾಲಕನಾಗಿದ್ದು ದಿ:11/10/2011 ರಂದು ಬಸ್ಸ ತುಳಜಾಪುರದಿಂದ ಹೊರಟು ಗುಲ್ಬರ್ಗಾಕ್ಕೆ ಪ್ರಯಾಣಿಕರನ್ನು ಬಸ್ಸಿನಲ್ಲಿ ಕರೆದುಕೊಂಡು ಆಳಂದ ಬಸ್ಸ ನಿಲ್ದಾಣದಲ್ಲಿ ಗುಲ್ಬರ್ಗಾಕ್ಕೆ ಹೋಗುವ ಕುರಿತು ನಿಂತ್ತಿದು ರಾತ್ರಿ 21.45 ಗಂಟೆಗೆ ಚಾಲು ಮಾಡಿಕೊಂಡು ಬಸ್ಸ ನಿಲ್ದಾಣದಿಂದ ಹೊರಗಡೆ ಹೋಗುತ್ತಿರುವಾಗ ಬಸ್ಸಿನಲ್ಲಿ ಹಿಂದೆ ಕುಳಿತ್ತಿದ ಶ್ರೀ ಕೃಷ್ಣ ತಂದೆ ವಿಠಲ ಸಾ|| ತಿರ್ಥ ಇತನು ಬಸ್ಸಿನಲ್ಲಿ ಜಗಳ ತಗೆದು ಬಸ್ಸಿನಿಂದ ಕೆಳಗೆ ಇಳಿದು ನನ್ನ ಬಸ್ಸಿನ ಹಿಂದಿನ ಗ್ಲಾಸಿಗೆ ಕಲ್ಲಿನಿಂದ ಹೊಡೆದು ಗ್ಲಾಸ ಒಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 241/2011 ಕಲಂ 341, 354, 307, 109 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕೊಲೆ ಪ್ರಕರಣ :
ಮುಧೋಳ ಠಾಣೆ: ಶ್ರೀ ಕಾಶಪ್ಪಾ ತಂದೆ ನರಸಪ್ಪಾ ರುದ್ರಾವರಂ ಸಾ|| ಅಲ್ಲಾಪೂರ (ಎ.ಪಿ) ರವರು ಇರ್ನಾಪಲ್ಲಿ ಗ್ರಾಮದ ಭೀಮಮ್ಮ ಇವಳಿಗೆ ಮಾಣಿಕಪ್ಪ ಇತನೊಂದಿಗೆ ಲಗ್ನವಾಗಿ 6 ವರ್ಷಗಳಾಗಿದ್ದು ಭೀಮಮ್ಮ ಇವಳು ಅನೈತಿಕ ಸಂಬಂಧ ಹೊಂದಿದ ಬಗ್ಗೆ  ಸಂಶಯ ಮಾಡಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಡುತ್ತಾ ಬಂದು ದಿನಾಂಕ: 11-10-2011 ರಂದು ಮಧ್ಯಾಹ್ನ ಇರ್ನಾಪಲ್ಲಿ ಸಿಮಾಂತರದಲ್ಲಿರುವ ಯಲ್ಲಾರಡ್ಡಿ ಇವರ ಹೊಲದಲ್ಲಿ ಮಾಣಿಕಪ್ಪಾ ತಂಎ ಸಾಯಪ್ಪಾ ಬಂದೆಪಲ್ಲಿ ಇತನು ಹಗ್ಗದಿಂದ ಕುತ್ತಿಗೆಗೆ ಉರುಲು ಬಿಗಿದು ಕೊಲೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 97/2011 ಕಲಂ 498 (ಎ), 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: