POLICE BHAVAN KALABURAGI

POLICE BHAVAN KALABURAGI

16 October 2011

GULBARGA DIST REPORTED CRIMES

ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ

ದೇವಲಗಾಣಗಾಪುರ ಠಾಣೆ : ಶ್ರೀ ಬಾಬಾಸಾಹೇಬ ತಂದೆ ಮನೋಹರ ತಾಂಬಡೆ ಸಾ|| ಪಿಟ್ಟೆಗಾಡ ಮಾಹಾರಾಷ್ಟ್ರ ರಾಜ್ಯ ರವರು ನನ್ನ ತಮ್ಮ ವಚಿಷ್ಟ ಇತನು ದಿನಾಂಕ:8-10-2011 ರಂದು ದತ್ತ ಮಂದಿರ ದೇವಲಗಾಣಗಾಪುರ ಗ್ರಾಮದಿಂದ ಹೊರಡಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ಮರಳಿ ಮನೆಗೆ ಬಂದಿರುವುದಿಲ್ಲಾ ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ  ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 98/2011 ಕಲಂ. ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಯು.ಡಿ.ಅರ್. ಪ್ರಕರಣ :

ದೇವಲಗಾಣಗಾಪುರ ಠಾಣೆ : ಶ್ರೀ ಮಾಹಾಂತಪ್ಪ ತಂದೆ ವೀರಭದ್ರಪ್ಪ ಭುವನಕ್ಕ ಸಾ|| ಚೀಣಮಗೇರಾ ತಾ|| ಅಫಜಲಪೂರ   ರವರು  ನನ್ನ ಹೆಂಡತಿ ಮಲ್ಲಮ್ಮ ಇವಳಿಗೆ 4-5 ವರ್ಷಗಳಿಂದ ತೆಲೆ ಸರಿ ಇರಲಿಲ್ಲಾ. ನಾನು ಎಲ್ಲಾ ಕಡೆ ದವಾಖಾನಿಗೆ ತೋರಿಸಿದ್ದರೂ ಸರಿ ಅಗಿರಲಿಲ್ಲಾ. ದಿನಾಂಕ:13-10-2011 ರಂದು 8-30 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಮಲ್ಲಮ್ಮ ಬಟ್ಟೆ ಒಗೆಯಲಿಕ್ಕೆ ಮನೆಯಿಂದ ಹೋದಳು ಸ್ವಲ್ಪ ಹೊತ್ತಾದರೂ ಮನೆಗೆ ಬರದೆ ಇದ್ದುದ್ದರಿಂದ ನಾನು ನನ್ನ ಹೆಂಡತಿ ನಮ್ಮ ಹೊಲಕ್ಕೆ ಹೋಗಿರಬಹುದು ನಮ್ಮ ಹೊಲಕ್ಕೆ ಬಂದು ನೋಡಲು ನಮ್ಮ ಹೊಲದ ಬಾವಿಯ ದಂಡೆಯ ಮೇಲೆ ನನ್ನ ಹೆಂಡತಿಯ ಬಟ್ಟೆ ಮತ್ತು ಚಪ್ಪಲಿಗಳಿದ್ದವು. ನಾನು ಬಾವಿಯಲ್ಲಿ ಬಿದ್ದಿರಬಹುದೆಂದು ಊರಲ್ಲಿ ತಿಳಿಸಲು ಊರ ಜನರು ಬಂದು ಮುಳ್ಳ ಅಂಡ ಹಾಕಿ ಹುಡುಕಾಡಿದರೂ ಸಿಗಲಿಲ್ಲಾ. ನಾವು ನಮ್ಮ ಬಾವಿಯ ನೀರನ್ನು ಇಂಜನ ಹಚ್ಚಿ ತೆಗೆದಾಗ ಇಂದು ದಿನಾಂಕ:15/10/2011 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಹೆಣ ಬಾವಿಯಲ್ಲಿ ಸಿಕ್ಕಿರುತ್ತದೆ. ಅವಳಿಗೆ ಇಜಾಡಲು ಬರುತಿತ್ತು ಬಹುಶ ಕಲ್ಲು ಕಟ್ಟಿಕೊಂಡು ಬಾವಿಯಲ್ಲಿ ಹಾರಿರಬಹುದು. ಅವಳ ಸಾವಿನಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ. ಠಾಣೆ ಯು.ಡಿ.ಆರ್..ನಂ.12/2011 ಕಲಂ.174 ಸಿ ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಲಲಾಗಿದೆ.  

ಅಳಿಯನಿಂದ ನಿಂದನೆ :
ಬ್ರಹ್ಮಪೂರ ಠಾಣೆ
:ಶ್ರೀ.ಪೀರಪ್ಪ ತಂದೆ ರುಕ್ಕಪ್ಪ ಅಜಾದಪೂರ ವಯ||  75 ವರ್ಷ, ಸಾ|| ಸುಂದರ ನಗರ ಗುಲಬರ್ಗಾ ರವರು ನನ್ನ ಮಗಳಾದ ಕಿರಣ ಇವಳಿಗೆ 11 ವರ್ಷಗಳ ಹಿಂದೆ ಬೀದರ ನಗರದ ಅಶೋಕ ತಂದೆ ಲಾಲಪ್ಪ ಗಾಯಕವಾಡ ಇವನೊಂದಿಗೆ ಕೊಟ್ಟು ಮದುವೆ ಮಾಡಿದ್ದು, ಅಶೋಕನು ಇತನು ನನ್ನ ಮಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದರಿಂದ ಬೀದರ ಗಾಂಧಿ ಗಂಜ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಉದ್ದೇಶದಿಂದ ನನ್ನ ಅಳಿಯ ಅಶೋಕನು ದಿನಾಂಕ: 14/10/2011 ರಂದು ಸಾಯಂಕಾಲ್ ಸುಮಾರಿಗೆ ನನ್ನ ಮನೆಯ ಪೋನ ನಂಬರಾದ 08472-244997 ನೇದ್ದಕ್ಕೆ ಪೋನ ಮಾಡಿ ನನಗೆ ಮತ್ತು ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿನಗೆ ಶೂಟ ಮಾಡುತ್ತೇನೆ ಅಂತಾ ಜೀವ ಬೆದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಬ್ರಹ್ಮಪುರ ಪೊಲೀಸ ಠಾಣೆ ಗುನ್ನೆ ನಂ: 194/11 ಕಲಂ: 504, 506 ಐ.ಪಿ.ಸಿ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.  

ಕಳವು ಪ್ರಕರಣ:
ಬ್ರಹ್ಮಪೂರ ಠಾಣೆ
ಶ್ರೀ.ನಾಗರಾಜ ತಂದೆ ವಿಜಯಕುಮಾರ ಬಿರಾದಾರ, ಸಾ|| ಗಂಜ ಬ್ಯಾಂಕ ಕಾಲೋನಿ ಗುಲಬರ್ಗಾ ರವರು ನನ್ನ ಮೋಟರ ಸೈಕಲ ನಂ: ಕೆಎ 32 ಆರ್ ನೇದ್ದನ್ನು ದಿನಾಂಕ: 03/09/2011 ರಂದು ಮಧ್ಯಾಹ್ನ ಸುಮಾರಿಗೆ ಶರಣಬಸವೇಶ್ವರ ಕೆರೆ ಗಾರ್ಡನ ಎದುರುಗಡೆ ನಿಲ್ಲಿಸಿ ಉದ್ಯಾನವನದಲ್ಲಿ ತನ್ನ ಖಾಸಗಿ ಕೆಲಸ ಮುಗಿಸಿಕೊಂಡು ಮರಳಿ ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ್ ಠಾಣೆ ಗುನ್ನೆ ನಂ 195/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: