POLICE BHAVAN KALABURAGI

POLICE BHAVAN KALABURAGI

21 September 2011

Gulbarga District Reported Crimes

ಅಪಘಾತ ಪ್ರಕರಣಗಳು :

ಮಾದನ ಹಿಪ್ಪರಗಾ ಠಾಣೆ :ದಿನಾಂಕ 20-09-2011 ರಂದು ಶ್ರೀಮತಿ ಮಾಹಾದೇವಿ ಗಂಡ ಬಸವಣ್ಣಪ್ಪಾ ಮಾಳಗೆ ಸಾ: ಹಿರೋಳಿ ಮತ್ತು ಗಂಡ ಕುಡಿಕೊಂಡು ಹೋಲದಿಂದ ಮನೆಗೆ ಬರುವಾಗ ಆಳಂದ ವಾಗ್ದರಗಿ ರಸ್ತೆಯಲ್ಲಿ ಹೋಗುತ್ತಿರುವಾಗ ಲಾರಿ ನಂ ಕೆಎ – 32 ಎ-2874 ನೇದ್ದರ ಚಾಲಕನು ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ಗಂಡ ಬಸವಣ್ಣಪ್ಪನಿಗೆ ಅಪಘಾತಪಡಿಸಿ ಭಾರಿಗಾಯಗಳಾಗಿದ್ದು ಉಪಚಾರ ಕುರಿತು ಸೋಲ್ಲಾಪೂರ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ : 20.09.2011 ರಂದು ನಗರದ ಜೇವರ್ಗಿ ರಿಂಗ ರೋಡ ದಿಂದ ಹೀರಾಪೂರ ರಿಂಗ ರೋಡ ಕಡೆ ಹೋಗುವ ರೋಡಿನಲ್ಲಿ ಬರುವ ಸರ್ವಜ್ಞಾ ಕಾಲೇಜ ಹತ್ತಿರ ರಿಂಗ ರೋಡಿನ ಮೇಲೆ ಶ್ರೀ ಧರ್ಮಣ್ಣ ತಂದೆ ಮನಸುಖ ಸಾ: ಸಾಯಿ ಮಂದಿರ ಕರುಣೆಶ್ವರ ನಗರ ಸರ್ವಜ್ಞಾ ಕಾಲೇಜ ಹತ್ತಿರ ರಿಂಗ ರೋಡ ಗುಲಬರ್ಗಾ ಮತ್ತು ಆತನ ಸಂಗಡಿಗರು ಪಾನಿಪುರಿ ಬಂಡಿ ತಳ್ಳಿಕೊಂಡು ಹೊಗುತ್ತಿದ್ದಾಗ ಶಿವಶರಣಪ್ಪ ಈತನು ಮಧ್ಯ ಸೇವನೆ ಮಾಡಿದ ಅಮಲಿನಲ್ಲಿ ಜೇವರ್ಗಿ ರಿಂಗ ರೋಡ ಕಡೆಯಿಂದ ತನ್ನ ಗುಡ್ಸ ಟಂಟಂ ನಂ:ಕೆಎ 32 ಎ 6734 ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿರುತ್ತಾನೆ. .ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: