POLICE BHAVAN KALABURAGI

POLICE BHAVAN KALABURAGI

25 September 2011

Gulbarga District Reported Crimes

ಕೊಲೆ ಪ್ರಕರಣ:
ಚಿಂಚೋಳಿ ಠಾಣೆ :
ಶ್ರೀ ಬಸಪ್ಪಾ ತಂದೆ ಬೀರಪ್ಪಾ ಧನಗರ ಸಾ: ಬೆನಕೇಪಳ್ಳಿ ತಾ: ಚಿಂಚೋಳಿ ಇವರ ಮಗಳಾದ ಲಕ್ಷ್ಮಿ ಇವಳಿಗೆ 2010 ರಲ್ಲಿ ಸಂಜೀವ ಕುಮಾರ ತಂದೆ ಅಂಬಣ್ಣಾ ಹೀರೆ ಕುರಬರ ಸಾ: ಕೊಡಂಬಲ ಇತನಿಗೆ ಕೊಟ್ಟು ಮಧುವೆ ಮಾಡಿದ್ದು ಮಗಳು ಸುಮಾರು 3-4 ತಿಂಗಳ ಹಿಂದೆ ಬಾಣಂತನಕ್ಕೆ ನಮ್ಮೂರಾದ ಬೆನಕಾಪಳ್ಳಿಗೆ ಬಂದಿದ್ದು ನನ್ನ ಅಳಿಯ ಸಂಜೀವ ಕುಮಾರ ಸಂಶಯ ಪಟ್ಟುಕೊಂಡು ಜಗಳಾ ಮಾಡುವದು ಹೊಡೆ ಬಡಿ ಮಾಡುವದು ಮಾಡುತ್ತಿದ್ದನು. ಇದೆ ವಿಷಯವಾಗಿ ನನ್ನ ಮಗಳು 03 ತಿಂಗಳು ಗರ್ಭಿಣಿ ಇದ್ದಾಗ ಜಗಳಾ ಮಾಡಿ ಅವಳಿಗೆ ಸೀರೆಯಿಂದ ನೇಣು ಹಾಕಿದ್ದು ಆಗಾ ಅವರ ಮನೆಯವರು ಬಿಡಿಸಿಕೊಂಡಿದ್ದರು ದಿನಾಂಕ 24-09-2011 ರಂದು ನಾವು ಮನೆಯಲ್ಲಿ ಇಲ್ಲದಾಗ ಮನೆಯಲ್ಲಿ ನನ್ನ ಅಳಿಯ ಮತ್ತು ನನ್ನ ಮಗಳು ಇಬ್ಬರೆ ಇದ್ದರು. ನಾನು ಐನಾಪೂರದಿಂದ ಮರಳಿ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿದ್ದು ಇದ್ದು, ನಾನು ಮನೆಯ ಒಳಗೆ ಹೊಗಿ ನೋಡಲು ತೊಟ್ಟಿಲಲ್ಲಿ ಮಗು ಮಲಗಿತ್ತು, ನನ್ನ ಮಗಳ ಕೋರಳಿಗೆ ಹಗ್ಗದಿಂದ ನೇಣು ಹಾಕಿಕೊಂಡಂತ್ತೆ ಕಂಡು ಬಂದಿದ್ದು ಒಳಗಡೆ ಹೊಗಿ ನೋಡಲು ಮನೆಯ ಜಂತ್ತಿಗೆ ಹಗ್ಗ ಕಟ್ಟಿದ್ದು ಹಗ್ಗದ ಇನ್ನೊಂದು ತುದಿ ನನ್ನ ಮಗಳ ಕೊರಳಿಗೆ ಸೂತ್ತಿದ್ದು ನನ್ನ ಮಗಳ ಎರಡು ಮೊಣಕಾಲುಗಳು ನೇಲಕ್ಕೆ ಹತ್ತಿದ್ದು, ಮುಖಾ ಬೋರಲಾಗಿ ಬಿದಿದ್ದು ನನ್ನ ಮಗಳನ್ನು ಅಳಿಯ ಸಂಜೀವ ಕುಮಾರ ಹೋಡೆ ಬಡೆ ಮಾಡಿ ಉರುಲು ಹಾಕಿ ಕೊಲೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದ್ಊರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

¸ÀÄ°UÉ ¥ÀæPÀgÀt

ಬ್ರಹ್ಮಪೂರ ಠಾಣೆ :ಶ್ರೀ.ಅಮರೇಶಗೌಡ ತಂದೆ ಸಡಕ ಶರಫಗೌಡ ಮಾಲಿಪಾಟೀಲ, , ಸಾ|| ಅರವಿ ತಾ|| ಮಾನ್ವಿ, ಜಿ|| ರಾಯಚೂರ ಇವರ ಗುಲಬರ್ಗಾದ ವೀರಶೈವ ಕಲ್ಯಾಣ ಮಂಟಪದಲ್ಲಿ ಫರ್ಟಿಲೈಜರ ಸಂಬಂಧ ಮಿಟಿಂಗ ಇದ್ದ ಪ್ರಯುಕ್ತ ದಿನಾಂಕ: 24-09-11 ರಂದು ನಾನು ಮತ್ತು ರಾಯಚೂರಿನ ಬಸವರಾಜ ಪಾಟೀಲ ಇಬ್ಬರೂ ಕೂಡಿ ನನ್ನ ಮಾರುತಿ ಝನ್ ಕಾರ ನಂ:ಕೆಎ 36 ಎಮ್ 2501 ನೇದ್ದರಲ್ಲಿ ಗುಲಬರ್ಗಾಕ್ಕೆ ಬಂದಿದ್ದೇವು. ವೀರಶೈವ ಕಲ್ಯಾಣ ಮಂಟಪದಲ್ಲಿ ಮಿಟಿಂಗ ಲೇಟ ಇದ್ದ ಕಾರಣ ನಾನು ಶರಣಬಸವೇಶ್ವರ ದೇವಸ್ಥಾನಕ್ಕೆ ಹೋಗಬೇಕೆಂದು ನನ್ನ ಕಾರ ತೆಗೆದುಕೊಂಡು ಜಗತ ಸರ್ಕಲ ಕಡೆಗೆ ಬಂದೇನು. ಶರಣಬಸವೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿ ಗೊತ್ತಿರದ ಕಾರಣ ಜಗತ ಸರ್ಕಲದಲ್ಲಿ ಇಬ್ಬರು ವ್ಯಕ್ತಿಗಳು ನಿಂತಿದ್ದು, ಅವರನ್ನು ನಾನು ಶರಣಬಸವೇಶ್ವರ ದೇವಸ್ಥಾನದ ಕಡೆಗೆ ಹೋಗುವ ದಾರಿ ಯಾವ ಕಡೆ ಇದೆ ಎಂದು ಕೇಳಿದಾಗ ಅವರು ನನಗೆ ನಾವು ಕೂಡ ಆ ಕಡೆ ಹೊರಟಿದ್ದೇವೆ ನಿಮ್ಮ ಕಾರಿನಲ್ಲಿ ಬರುತ್ತೇವೆ ಅಂತಾ ಹೇಳಿದಾಗ ಅವರನ್ನು ಕೂಡಿಸಿಕೊಂಡೇನು. ಅವರು ನನಗೆ ದೇವಸ್ಥಾನದ ಕಡೆಗೆ ಕರೆದುಕೊಂಡು ಹೋಗದೆ ಎಸ್.ಟಿ.ಬಿ.ಟಿ ಕ್ರಾಸದಿಂದ ಸೇಡಂ ರೋಡ ಅಲ್ಲಿಂದ ಖರ್ಗೆ ಪೆಟ್ರೋಲ ಬಂಕದಿಂದ ರಿಂಗ ರೋಡ ಮುಖಾಂತರ ಹುಮನಾಬಾದ ರೋಡ ಕಡೆಗೆ ಕರೆದುಕೊಂಡು ಹೋಗಿ ರಿಂಗ ರೋಡದಿಂದ ಬಲಕ್ಕೆ ನನ್ನ ಕಾರನ್ನು ತೆಗೆದುಕೊಂಡು ಹೋಗುವಂತೆ ಹೇಳಿ ಮಿಲತ ನಗರದ ಹೊರಗಡೆ ಖುಲ್ಲಾ ಸ್ಥಳದಲ್ಲಿ ನನಗೆ ನಿನ್ನ ಹತ್ತಿರ ಏನು ಇದೆ ಕೊಡು ಅಂತಾ ಕೇಳಿದರು ಆಗ ನಾನು ನಿರಾಕರಿಸಿದ್ದೇನು. ಅವರು ನನಗೆ ಕಾರಿನಿಂದ ಕೆಳಗೆ ಇಳಿಸಿ ತಮ್ಮ ಹತ್ತಿರ ಇದ್ದ ಚಾಕುವಿನಿಂದ ಒಬ್ಬನು ನನ್ನ ಎದೆಯ ಮೇಲೆ ಚಾಕುವಿನಿಂದ ಹೊಡೆದು ರಕ್ತಗಾಯ ಪಡಿಸಿದನು. ನಿನ್ನ ಹತ್ತಿರ ಏನು ಇದೆ ಕೊಡು ಅಂತಾ ಕೇಳೀದನು. ಆಗ ನಾನು ಹೆಚ್ಚಿನ ಮಟ್ಟಿಗೆ ನಿರಾಕರಿಸಿದಾಗ ನನ್ನ ಹತ್ತಿರ ಇದ್ದ ನಗದು ಹಣ 15000/-, ಒಂದು 8 ಗ್ರಾಂ ಬಂಗಾರದ ಸರ ಅ||ಕಿ|| 15,000/- ಒಂದು 10 ಗ್ರಾಂ ಬಂಗಾರದ ಉಂಗುರ ಅ||ಕಿ|| 20,000/- ಒಂದು ನೋಕಿಯಾ ಮೊಬೈಲ ಅ||ಕಿ|| 3000/- ಒಟ್ಟು ಅ||ಕಿ|| 53,000/- ರೂಪಾಯಿ ಬಲೆಬಾಳುವ ವಸ್ತುಗಳನ್ನು ಕಸಿದುಕೊಂಡು ಮತ್ತೆ ನನಗೆ ಕಾರಿಯಲ್ಲಿ ಕೂಡಿಸಿ ಒಬ್ಬನು ನನಗೆ ಕೆಳಗೆ ಮಲಗಿಸಿ ಮೇಲೆ ಚಾಕು ಹಿಡಿದನು. ಇನ್ನೊಬ್ಬನು ನನ್ನ ಕಾರು ನಡೆಸುತ್ತಾ ಬಂದು ಮತ್ತೆ ರಿಂಗ ರೋಡ ಹತ್ತಿರ ಬಿಟ್ಟು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾತಿ ನಿಂದನೆ ಪ್ರಕರಣ :
ಗ್ರಾಮೀಣ ಠಾಣೆ :ದಿನಾಂಕ 24-09-11 ರಂದು ಶ್ರೀಸವರಾಜ ತಂದೆ ಹುಸನಪ್ಪ ಬೇಲೂರ ಸಾ:- ಕುಮಸಿ ತಾ:-ಜಿ:-ಗುಲಬರ್ಗಾ ಕುಮಸಿ ಗ್ರಾಮದ ಅಂಬಾರಾಯ ದರಶೆಟ್ಟಿ ಹೋಟಲಕ್ಕೆ ಚಹಾ ಕುಡಿಯಲು ಹೋಗಿ ಹೋಟೇಲದ ಹತ್ತಿರ ಇರುವ ಗುರನಾಥ ಬಡೀಗೇರ ಇವರು ಜನರು ಕೂಡಲಿಕ್ಕೆ ಕಟ್ಟಿಗೆ ಆಸನ ಇಟ್ಟಿದ್ದು ಅದರ ಮೇಲೆ ಕುಳಿತಾಗ ಆಗ ಮಲ್ಲಿಕಾರ್ಜುನ @ ಮಲ್ಲಪ್ಪ ತಂದೆ ಶರಣಪ್ಪ ನಾಟೀಕಾರ ಇತನು ನನ್ನ ಹತ್ತಿರ ಬಂದು ನನಗೆ ಅವಾಚ್ಯ ಶಬ್ದಗಳಿಂದ ಭೈದು ಜಾತಿನಿಂದನೆ ಮಾಡುತ್ತಿರುವಾಗ ಯಾಕ ಬೈಯ್ಯುತ್ತಿ ಚಹಾ ಕುಡಿದು ಹೋಗುತ್ತೇನೆ ಅಂತಾ ಅಂದಿದ್ದಕ್ಕೆ ಇಬ್ಬರಲ್ಲಿ ಬಾಯಿ ತಕರಾರು ಮಲ್ಲಿಕಾರ್ಜುನನ ಮನೆಯಿಂದ ಅವನ ತಮ್ಮಂದಿರರಾದ ಶಿವಪ್ಪ ಮತ್ತು ಸಂತೋಷ ಇವರು ಬಂದವರೆ ಇಬ್ಬರು ನನ್ನೊಂದಗೆ ತೆಕ್ಕಿ ಕುಸ್ತಿಗೆ ಬಿದ್ದು ಇಬ್ಬರು ಎತ್ತಿ ಒಗೆದಿದ್ದರಿಂದ ತಲೆಗೆ ರಕ್ತಗಾವಾಗಿದ್ದು ಮತ್ತು ಚಾಕುವಿನಿಂದ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ದಿನಾಂಕ: 24-9-2011 ರಂದು ನಗರದ ಆರ್.ಪಿ.ಸರ್ಕಲ್ ದಿಂದ ಎಸ್.ವಿ.ಪಿ.ಸರ್ಕಲ್ ರೋಡಿನಲ್ಲಿ ಬರುವ ಕೆ.ಎಸ್.ಆರ್.ಟಿ.ಸಿ.ಬಸ್ ಡಿಪೊ ಹತ್ತಿರ ರೋಡಿನ ಮೇಲೆ ಒಂದು ಅಟೊರೀಕ್ಷಾ ನಂ:ಕೆಎ 32 835 ನೆದ್ದರ ಚಾಲಕ ಎಸ್.ವಿ.ಪಿ.ಸರ್ಕಲ್ ಕಡೆಯಿಂದ ಅತಿವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆರ್.ಪಿ.ಸರ್ಕಲ್ ಕಡೆಯಿಂದ ಟಿ.ವಿ.ಎಸ್.ಎಕ್ಸ ಎಲ್.ಮೊ/ಸೈಕಲ್ ನಂ:ಕೆಎ 32 ಕೆ 125 ನೆದ್ದರ ಮೇಲೆ ಕುಳಿತು ಹೋಗುತ್ತಿದ್ದ ಶ್ರೀ ಮತಿ ರುಕ್ಸಾನಾ ಬೇಗಂ ಗಂಡ ಮಹ್ಮದ ಇಕ್ಬಾಲ್ ಅಹ್ಮದ ಸಾ: ಜಿಲಾನಾ ಬಾದ ಎಮ್.ಎಸ್.ಕೆ.ಮಿಲ್ ಗುಲಬರ್ಗಾ ಮತ್ತು ಆಕೆಯ ಗಂಡ ಇಕ್ಬಾಲ ಅಹ್ಮದ ಇವರಿಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಸಾದಾ & ಭಾರಿಗಾಯಗೊಳಿಸಿ ತನ್ನ ಅಟೋರೀಕ್ಷಾ ಸಮೇತ ಓಡಿ.ಹೊಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ
:ಶ್ರೀ
ತಿಪ್ಪಣ್ಣ
ತಂದೆ ತುಕಾರಾಮ ಟೋಪೆ ಸಾ|| ಸವಳೇಶ್ವರ
ತಾ|| ಆಳಂದ
ಹಾವ:

ಡಾಮಿನೇಟ ದಾಭಾ ಹತ್ತಿರ ಕುಸನೂರ
ಕ್ರಾಸ್ ಶಹಬಾದ
ರೋಡ ಗುಲಬರ್ಗಾ
ರವರು ಈಶ್ವರಪ್ಪ ಇತನು ಫೀರ್ಯಾದಿ ಮನೆಯ ಹತ್ತಿರ

ಡಾಸಕ್ಕೆ ಹೋಗುತ್ತಿದ್ದಾಗ
ಮನೆಯ ಹತ್ತಿರ
ಸಂಡಾಸ ಕೂಡಬೇಡಾ ಹೆಣ್ಣು ಮಕ್ಕಳು ಇರುತ್ತಾರೆ ಅಂತಾ ಅಂದಿದ್ದಕ್ಕೆ ಇಬ್ಬರ
ಮಧ್ಯೆ
ಬಾಯಿ ಮಾತಿನ ಜಗಳವಾಗಿದ್ದು ನಂತರ 11-.30 ಗಂಟೆ ಸುಮಾರಿಗೆ ಶಹಬಾರ
ರೋಡಿಗೆ ಇರುವ ಜಗನ್ನಾಥ ಹೋಟೆಲ ಹತ್ತಿರ ನಿಂತಾಗ ಅಲ್ಲೆ ಡೊಮಿನೇಟ ದಾಭಾ ಹತ್ತಿರ ನಿಂತಿದ್ದ
ಈಶ್ವರಪ್ಪ ಮತ್ತು ಗಿರೀಶ ಇಬ್ಬರು ನನಗೆ ಅವಾಚ್ಯಶಬ್ದಗಳಿಂದ ಬೈದು ಇಲ್ಲಿ ಬಾ ಅಂತಾ ಕರೆದು ಈಶ್ವರಪ್ಪ ಇತನು ಪಂಚದಿಂದ ನನ್ನ
ಎಡಗಣ್ಣಿನ ಮೇಲೆ ಹೋಡದು ರಕ್ತಗಾಯ ಮಾಡಿದನು ಮತ್ತು ಗಿರೀಶ ಇವನು ಅಲಲ್ಲೆ ಬಿದ್ದಿದ್ದ ಕಲ್ಲನ್ನು
ತೆಗೆದುಕೊಂಡು ನನ್ನ ಬೆನ್ನಿಗೆ ಹೋಡೆದು ಗುಪ್ತಗಾಯ ಮಾಡಿದನು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ಕರಣ ದಾಖಲಾಗಿದೆ.

No comments: