POLICE BHAVAN KALABURAGI

POLICE BHAVAN KALABURAGI

08 September 2011

GULBARGA DISTRICT REPORTED CRIMES

ಅಪಘಾತ ಪ್ರಕರಣ :

ಹೆಚ್ಚುವರಿ ಸಂಚಾರಿ ಠಾಣೆ :ದಿನಾಂಕ: 08.09.2011 ರಂದು ಮುಂಜಾನೆ  ಪಿ.ಡಿ.ಎ.ಕಾಲೇಜ ದಿಂದ ನಾಗನಳ್ಳಿ ರೋಡಿನಲ್ಲಿ ಬರುವ ಕೊರಂಟಿ ಹನುಮಾನ ಟೆಂಪಲ್ ಹತ್ತಿರ ಶ್ರೀ ಮತಿ  ಲಕ್ಷ್ಮೀಬಾಯಿ ತಂದೆ ದಿಲೀಪ  ಪವಾರ  ಸಾ:ಜೈ ಹನುಮಾನ ತಾಂಡಾ  ಗುಲಬರ್ಗಾ  ಇವರ ಮಗನಾದ ರಾಹೂಲ ವ: 8 ವರ್ಷ ಈತನು ಶಾಲೆ ಹೋಗಲು ರೋಡದಾಟುತ್ತಿದ್ದಾಗ  ಟಿ.ವಿ.ಎಸ್.ಎಕ್ಸಎಲ್ ಮೊ/ಸೈಕಲ್ ನಂ:ಕೆಎ 32 ಯು6506 ನೆದ್ದರ ಚಾಲಕ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವೆನೆ ರಾಹುಲ ಈತನಿಗೆ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ

ಸುಲಿಗೆ ಮಾಡಲು ಪ್ರಯತ್ನ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ :
ದಿನಾಂಕ 08-09-2011 ರಂದು ರಾತ್ರಿ ಶ್ರೀಮತಿ ರೇಖಾ ಗಂಡ ಮನೋಹರ ಪಾಟೀಲ ಸಾಃ ಪ್ರಗತಿ ಕಾಲೋನಿ ಗುಲಬರ್ಗಾ ಮನೆಯಲ್ಲಿದ್ದಾಗ 02 ಜನ ಅಪರಿಚಿತರು ಮನೆಯಲ್ಲಿ ಬಂದು ಹೆದರಿಸಿ ನಮಗೆ 20 ರಿಂದ 25 ತೊಲೆ ಬಂಗಾರ ಮತ್ತು 50 ಲಕ್ಷ ರೂಪಾಯಿ ಕೊಡು ಅಂತಾ ಸುಲಿಗೆ ಮಾಡಲು ಪ್ರಯತ್ನಿಸಿರುತ್ತಾರೆ. ಸದರಿಯವರು 20 ರಿಂದ 25 ವರ್ಷ ವಯಸ್ಸಿನವರು ಇದ್ದು ಒಬ್ಬನು ದಪ್ಪಗೆ ಕೆಂಪು ಬಣ್ಣದದವನಿದ್ದು ಇನ್ನೊಬ್ಬನು ತೆಳ್ಳಗೆ ಇದ್ದು ಕಪ್ಪು ಬಣ್ಣದವನಿದ್ದನು ನೋಡಲು ಮುಸ್ಲಿಂರಂತೆ ಇದ್ದು ಅಚ್ಚು ಕನ್ನಡ ಬೆಂಗಳೂರು ಭಾಷೆ ಮಾತನಾಡುತ್ತಿದ್ದರು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: