POLICE BHAVAN KALABURAGI

POLICE BHAVAN KALABURAGI

11 September 2011

GULBARGA DIST REPORTED CRIMES

ಕಳವು ಪ್ರಕರಣ :-

ಆಳಂದ ಠಾಣೆ :ಶ್ರೀ ಶರಣಪ್ಪ ತಂದೆ ಮಲ್ಲಿಕಾರ್ಜುನ ಹಣಮಶೆಟ್ಟಿ ಸಾ|| ಜಿಡಗಾ ರವರು,ನಾವು ಮನೆಗೆ ಕೀಲಿ ಹಾಕಿಕೊಂಡು ಹೊಲದ ಕೆಲಸಕ್ಕೆ ಹೋಗಿದ್ದಾಗ ಯಾರೋ ಅಪರಿಚಿತ ಕಳ್ಳರು ನಮ್ಮ ಮನೆಯ ಬಾಗಿಲ ಕೊಂಡಿ ಮುರಿದು ಕಬ್ಬಿಣದ ಪೆಟ್ಟಗೆಯಲ್ಲಿಟ್ಟಿದ್ದ 5 ಗ್ರಾಂ ಬಂಗಾರದ ಉಂಗುರ, 5 ಗ್ರಾಂ ಬಂಗಾರದ ಜುಮುಕಿಗಳು, ಕಿವಿ ಹೂವುಗಳು, ಬೋರಮಾಳ ಸರ, ಬೆಳ್ಳಿಯ ಸಾಮಾನುಗಳು, ನಗದು ಹಣ 4500/- ರೂ. ಮತ್ತು ಮತ್ತಿತರ ಸಾಮಾನುಗಳು ಹೀಗೆ ಒಟ್ಟು 91000/- ರೂ. ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳವು ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: